`ಚೆಲುವಾಂಬೆಯ ಕೃತಿಗಳು’ ಎಂ.ಪಿ. ಮಂಜಪ್ಪ ಶೆಟ್ಟಿ ಅವರ ಗ್ರಂಥವಾಗಿದೆ. ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ಕನ್ನಡಸಾಹಿತ್ಯಕ್ಕೆ ಮೈಸೂರೊಡೆಯರ ಕಾಲದಲ್ಲಿ ದೊರೆತಷ್ಟು ಪ್ರೋತ್ಸಾಹ ಮತ್ತಾವ ರಾಜರ ಕಾಲದಲ್ಲಿಯೂ ದೊರೆಯಲಿಲ್ಲ. ಒಡೆಯರು ಸಾಹಿತ್ಯ ಸೃಷ್ಟಿಗೆ ಪ್ರೋತ್ಸಾಹಿಸಿದುದಷ್ಟೇ ಅಲ್ಲದೆ ತಾವೂ ಸೃಷ್ಟಿಸಿದರು. ಇವರ ಪ್ರೇರಣೆ ಪ್ರೋತ್ಸಾಹ ದಿಂದಾಗಿ ಚಮ್ರಪತಿಗಳು ಪಾಳೆಯಗಾರರು ಸಚಿವರು ಊಳಿಗದವರು ಅಲ್ಲದೆ ರಾಣಿಯರೂ ಕೃತಿರಚನೆ ಮಾಡಿದರು. ಅಂತಹ ರಾಣಿಯರಲ್ಲಿ ಚೆಲುವಾಂಬೆ ಅಗ್ರ ಗಣ್ಯಳು. ಇವಳೇ ಪ್ರಸ್ತುತ ಕೃತಿಗಳ ಕರ್ತೃ, ಇವಳ ಬಗೆಗೆ ಇವಳ ಕೃತಿಗಳಲ್ಲಿಯೇ ಹೀಗೆ ಹೇಳಿದೆ : ಜನಪತಿಯೆನಿಸುವ ಪ್ರತಿಮಕೃಷ್ಣೇಂದ್ರನ ವನಿತೆ ಚೆಲ್ವಾಂಬೆ ಈ ಕೃತಿಯ ಅನುಗೊಳಿಸಿದಳೆಂದು ಬಿನದಗೆಯ್ಯದೆ ಸ ಜನರು ಸಂತಸದೊಳಾಲಿವುದು ವರಯದುವಂಶತಿಲಕ ನಮ್ಮರಸು ಯದು ಗಿರಿಯೆರೆಯನ ಚಾರಿತ್ರವನು ನೆರೆ ಸೊಬಗಿನೊಳುಸುರೆಂದು ನೇಮಿಸಲೆನ್ನ ಶಿರದೊಳಗಾಂತು ಪೇಳುವೆನು ಕೃತಿಗೆ ಕರ್ತನು ಚೆಲ್ವರಾಯನೆನಗೆ ಸ ಸ್ಮೃತಿಯಿತ್ತವನು ಶ್ರೀನಿವಾಸ ಸತತಮಾಗೀರ್ವರು ದಯೆಯಿಂದ ಪೊರೆವುದೀ ಕೃತಿಯ ಚಂದ್ರಾರ್ಕರುಳ್ಳನಕ ಪದ್ಯದ ಮೂಳಕ ಚೆಲುವಾಂಬೆಯ ವಿಚಾರವನ್ನು ಕಟ್ಟಿಕೊಟ್ಟಿದ್ದಾರೆ.
ಎಂ.ಪಿ.ಮಂಜಪ್ಪ ಶೆಟ್ಟಿ ಚಿಕ್ಕಮಗಳೂರು ಜಿಲ್ಲೆಯ ಮಸಗಲಿಯವರು. ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಕೃಷಿಯನ್ನು ಮಾಡಿರುವ ಅವರು ವ್ಯಕ್ತಿಚಿತ್ರಗಳನ್ನು ರಚಿಸಿರುತ್ತಾರೆ. ಕೃತಿಗಳು: ನನ್ನಯ್ಯ ಚಾರಿತ್ರ, ಗುರುದತ್ತ ಚರಿತ್ರೆ, ಕೃಷ್ಣರಾಜ ವಿಲಾಸ, ಕಾವೇರಿ ಮಹಾತ್ಮೆ, ಚೆಲುವಾಂಬೆಯ ಕೃತಿಗಳು, ...
READ MORE