‘ಮಹಾತ್ಮ’ ಆರ್.ಎಲ್. ಅನಂತರಾಮಯ್ಯ ಅವರ ಅನುವಾದಿತ ಗಾಂಧೀಜಿ ಕುರಿತ ವ್ಯಕ್ತಿಚಿತ್ರಣವಾಗಿದೆ. ಮಹಾತ್ಮಾ ಗಾಂಧಿಯವರ ಸಮಗ್ರ ಜೀವನ ಚರಿತ್ರೆಯನ್ನು ಡಿ, ಜಿ. ತೆಂಡುಲ್ಕರ್ ಅವರು ಇಂಗ್ಲಿಷ್‌ನಲ್ಲಿ ಎಂಟು ಸಂಪುಟಗಳಲ್ಲಿ ಬರೆದು ಮಹಾದುಪಕಾರ ಮಾಡಿದ್ದಾರೆ. ಈ ಸಂಪುಟಗಳನ್ನು ಭಾರತ ಸರ್ಕಾರದ ವಾರ್ತಾ ವಂತು ಪ್ರಸಾರ ಸಚಿವಾಲಯ ಪ್ರಕಟಿಸಿದೆ. ಮಹಾತ್ಮರ ದಿವ್ಯಜೀವನ ಕಥನದ ಈ ಮೇರುಕೃತಿಯನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸುವ ಯೋಜನೆಯನ್ನು ಮೈಸೂರು ವಿಶ್ವವಿದ್ಯಾನಿಲಯಂ ಹಾಕಿ ಕೊಂಡಿದೆ. ಕನ್ನಡದ ಖ್ಯಾತ ಸಾಹಿತಿಗಳಿಂದ ಅನುವಾದಿಸಲ್ಪಟ್ಟಿರುವ ಈ ಗ್ರಂಥದ ಐದು ಸಂಪುಟಗಳನ್ನು ಈಗಾಗಲೆ ಪ್ರಕಟಿಸಲಾಗಿದೆ. ಈಗ ಆರನೇ ಸಂಪುಟವನ್ನು ಮೈಸೂರು ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ಗಾಂಧೀಭವನದಲ್ಲಿ ವಂಹಾತ್ಮಗಾಂಧಿ ಯವರ126ನೇ ಜಯಂತಿಯ ಸಮಾರಂಭದ ಸುಸಂದರ್ಭದಲ್ಲಿ ಮಾಜಿ ಲೋಕಸಭಾ ಸದಸ್ಯರು ಮತ್ತು ಗಾಂಧಿವಾದಿಗಳಾದ ಸನ್ಮಾನ್ಯ ಶ್ರೀ ತಂಳಿಸಿದಾಸ್ ದಾಸಪ್ಪ ಅವರ ಸಮಖದಲ್ಲಿ ಮಾನ್ಯ ಕುಲಪತಿಗಳಾದ ಪ್ರೊ. ಎಂ. ಮಾದಯ್ಯ ಅವರು ತಮ್ಮ ಅಮೃತ ಹಸ್ತದಿಂದ ಬಿಡುಗಡೆ ಮಾಡುತ್ತಿರುವುದು ನಮಗೆ ಅತ್ಯಂತ ಸಂತೋಷದ ಹಾಗೂ ಹೆಮ್ಮೆಯ ಸಂಗತಿಯಾಗಿದೆ. ಆದಷ್ಟು ಬೇಗ ಇನ್ನುಳಿದ ಎರಡು ಸಂಪುಟಗಳನ್ನೂ ಪ್ರಕಟಿಸಿ ಕನ್ನಡ ಜನಕೋಟಿಗೆ ಸವಂರ್ಪಿಸುವ ಸಂಕಲ್ಪ ಗಾಂಧೀ ಭವನದ್ದಾಗಿದೆ.
©2024 Book Brahma Private Limited.