ಸಾಮಾನ್ಯರಲ್ಲಿ ಅಸಾಮಾನ್ಯರು

Author : ವಿಜಯಕುಮಾರ ಜಿ. ಪರುತೆ

Pages 136

₹ 30.00




Year of Publication: 2006
Published by: ಲಿಂಗವಂತ ಧರ್ಮ ತತ್ವ ಪ್ರಚಾರ ಸಂಸ್ಥೆ
Address: ಚಿಂಚೋಳಿ. ಕಲಬುರಗಿ ಜಿಲ್ಲೆ

Synopsys

ಡಾ.ವಿಜಯಕುಮಾರ ಜಿ ಪರುತೆ ಸಂಪಾದಿಸಿದ ಕೃತಿ-ಸಾಮಾನ್ಯರಲ್ಲಿ ಅಸಾಮಾನ್ಯರು. ದಿ.ಬಸವಯ್ಯ ಬುಗ್ಗಿ ಚಿಂಚೋಳಿ ಅವರು ಲಿಂಗೈಕ್ಯರಾಗಿ 25 ವರ್ಷಗಳು ಗತಿಸಿದ್ದರಿಂದ ರಜತ ಮಹೋತ್ಸವ ಸಂದರ್ಭದಲ್ಲಿ ಈ ಕೃತಿ ಪ್ರಕಟಿಸಲಾಗಿದೆ. ಲಿಂಗವಂತ ಧರ್ಮ ತತ್ವ ಪ್ರಚಾರ ಸಂಸ್ಥೆ ಅಧ್ಯಕ್ಷ ಬಕ್ಕಪ್ಪ ಚಂ ಸೂಗೂರ ಈ ಕೃತಿಯ ಕುರಿತು "ನಮ್ಮ ಸಂಸ್ಥೆಯು ಸಮಾಜದಲ್ಲಿ ಧರ್ಮ ತತ್ವ ಸಮಾಜದಲ್ಲಿ ಐಕ್ಯತೆ, ಮಾನವರಲ್ಲಿ ಸೌಹಾರ್ದ, ಸಲುಗೆ, ಪ್ರೇಮ ಬೆಳೆಸುವಲ್ಲಿ ತೊಡಗಿದೆ. ಶರಣರ ಜೀವನ ಚರಿತ್ರೆಯೊಂದಿಗೆ,ದಾಸೋಹಿಗಳನ್ನು ಗುರುತಿಸಿ, ಸೇವೆ ಪಡೆಯುತ್ತಿದ್ದರ ಭಾಗವಾಗಿ ಈ ಕೃತಿ ಪ್ರಕಟವಾಗುತ್ತಿದೆ ಎಂದು ಹೇಳಿದ್ದರೆ ಲೇಖಕ ಡಾ. ವಿಜಯತಕುಮಾರ ಪರುತೆ ಬರೆದ ಸಂಪಾದಕೀಯದಲ್ಲಿ ‘ಮಹಾನುಭಾವಿ ಬಸವಣ್ಣನವರ ಸಮಕಾಲೀನರಲ್ಲಿ ಅನೇಕ ಶರಣರು ಆಗಿ ಹೋಗಿದ್ದಾರೆ .ಎಲೆಮರೆಯ ಕಾಯಿಯ ಹಾಗೆ. ಯಾರು ಗಣನೆಗೂ ಬಾರದೆ ಸರಳ,ಸತ್ಯ ಶುದ್ಧ ಕಾಯಕದಿಂದ ಜಂಗಮ ದಾಸೋಹ ಮಾಡುತ್ತ ಬಾಳ ದಾರಿ ನಡೆದವರಿದ್ದಾರೆ.ಅಂಥಹ ಶರಣರು ಅನುಭಾವದ ಜೀವನ ಪ್ರತಿಯೊಬ್ಬರು ಅರಿಯಬೇಕಾಗಿದೆ.ಆ ದಿಶೆಯಲ್ಲಿ, ಕೆಲವು ಶರಣರ ಜೀವನ ಮೂಡಿ ಬಂದಿವೆ. ದಿ.ಬಸವಯ್ಯ ಬುಗ್ಗಿಯವರ ಜೀವನ ಮತ್ತು ಸಾಧನೆಗೆ ಸಂಬಂಧಿಸಿದಂತೆ ಅವರು ಸಮಕಾಲೀನರಿಂದ ಕೇಳಿ ಬರೆದ ಲೇಖನಗಳು, ಸುಗ್ಗಿ ಪರಿವಾರದವರಿಂದ ಬರೆದ ಲೇಖನಗಳು ಒಳಗೊಂಡಿವೆ ಎಂದು ಹೇಳಿದ್ದಾರೆ.

ಕೃತಿಯಲ್ಲಿ ದಿ.ಬಸವಯ್ಯ ಬುಗ್ಗಿ  ಅವರ ಜೀವನ, ಬುಗ್ಗಿ ಪರಿವಾರದ ಸ್ಮರಣೆ ಇತರೆ ಲೇಖನಗಳು, ಶರಣರು ಅನುಭಾವದ ಅಮೃತ, ಸಾಮಾನ್ಯ ವಚನಕಾರರು; ಬದುಕು,ಬರಹ -ಅಧ್ಯಾಯಗಳು ಶರಣರ ಸಾತ್ವಿಕ ಬದುಕನ್ನು ಚಿತ್ರಿಸುವಲ್ಲಿ ಯಶಸ್ವಿಯಾಗಿವೆ. 

About the Author

ವಿಜಯಕುಮಾರ ಜಿ. ಪರುತೆ
(18 May 1963)

ಲೇಖಕ ಡಾ. ವಿಜಯಕುಮಾರ ಜಿ. ಪರುತೆ ಅವರು ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಕಾಳಗಿಯವರು. ತಂದೆ ಗುರುಪಾದಪ್ಪ, ತಾಯಿ ಗುರು ಬಾಯಿ. ಕಾಳಗಿಯಲ್ಲಿ ಎಸ್ ಎಸ್ ಎಲ್ ಸಿ ಹಾಗೂ ನಂತರ ಬಿಎ ಪದವಿವರೆಗೆ ಕಲಬುರಗಿಯಲ್ಲಿ, ಗುಲಬರ್ಗಾ ವಿಶ್ವವಿದ್ಯಾಲಯದಿಂದ ಎಂ.ಎ (ಹಿಂದಿ) ಹಾಗೂ ಧಾರವಾಡದ ಕರ್ನಾಟಕ ವಿ.ವಿ.ಯಿಂದ ಎಂ.ಎ (ಕನ್ನಡ) ಪದವಿ ಪಡೆದರು. ಗುಲಬಗಾ ವಿವಿಯಿಂದ (2006) ಪಿಎಚ್ ಡಿ ಪಡೆದರು. ಕನ್ನಡ ಸಾಹಿತ್ಯ ಪರಿಷತ್ ಚಿಂಚೋಳಿ ತಾಲೂಕು (2001-08) ಅಧ್ಯಕ್ಷರಾಗಿ, ಕಲಬುರ್ಗಿ ಜಿಲ್ಲಾ ಕ.ಸಾ.ಪರಿಷತ್ತಿನ ಗೌರವ (2008-12) ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಕಲಬುರಗಿಯ ಶರಣಬಸವೇಶ್ವರ ಮಹಾವಿದ್ಯಾಲಯದಲ್ಲಿ ತಾತ್ಕಾಲಿಕ ...

READ MORE

Related Books