ಲೇಖಕಿ ರತ್ನಾ ಮಣೂರ ಅವರು ರಚಿಸಿರುವ ‘ಹತ್ತೊಂಬತ್ತನೆಯ ಶತಮಾನದ ವಿಖ್ಯಾತ ವಿಜ್ಞಾನಿಗಳು’ ಕೃತಿಯು ಹೆಸರೇ ಸೂಚಿಸುವ ಹಾಗೇ ವಿಶ್ವವಿಖ್ಯಾತ ವಿಜ್ಞಾನಿಗಳನ್ನು ಪರಿಚಯಿಸುತ್ತದೆ. ಮೈಕಲ್ ಪ್ಯಾರೆಡೆ, ಲೂಯಿ ಪಾಶ್ಚರ್, ಸರ್ ಹೆನ್ರಿ ಬೆ ಸಮರ್, ಚಾರ್ಲ್ಸ್ ಗುಡ್ಇಯರ್,ಚಾರ್ಲ್ಸ್ ರಾಬರ್ಟ್ ಡಾರ್ವಿನ್, ಜೆ.ಜೆ ಥಾಮ್ಸನ್,ವಿಲಿಯಂ ಕೆಲ್ವಿನ್, ಸೇರಿದಂತೆ 27 ಜನ ವಿಜ್ಞಾನಿಗಳ ಸಂಕ್ಷಿಪ್ತ ಜೀವನ ಸಾಧನೆಯನ್ನು ಪರಿಚಯಿಸಿದ್ದು, ಕನ್ನಡ ವಿಜ್ಞಾನ ಸಾಹಿತ್ಯಕ್ಕೆ ವಿಶಿಷ್ಟ ಕೊಡುಗೆ. ಆಸಕ್ತ ವಿದ್ಯಾರ್ಥಿ, ಶಿಕ್ಷಕರಿಗೂ ಈ ಕೃತಿ ಉಪಯುಕ್ತ.
ರತ್ನಾ ಮಣೂರ ಅವರು ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಸಹಾಯಕ ಕುಲಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ತಂದೆ ಆರ್. ಕೆ. ಜೋಶಿ, ತಾಯಿ ಶಾಮಲಾಬಾಯಿ. ಪತಿ ಶ್ರೀಕಾಂತ ಆಚಾರ್ಯ ಮಣೂರ. ಕೃತಿಗಳು: ವಿಜ್ಞಾನಕ್ಕೆ ದಾರಿ (ಅನುವಾದ), ಆಟ ಪಾಠದಲ್ಲಿ, ನೋಡು ಮತ್ತು ಕಲಿ, ತಂತ್ರವಿದ್ಯೆಯ ಹಾದಿಯಲ್ಲಿ (ಅನುವಾದ) ಉರ್ದುವಿನ ಕತೆ (ಅನುವಾದ), ಹತ್ತೊಂಬತ್ತನೆಯ ಶತಮಾನದ ವಿಖ್ಯಾತ ವಿಜ್ಞಾನಿಗಳು, ಶಾಂತಿಸ್ವರೂಪ ಭಟ್ನಾಗರ್. ...
READ MORE