‘ಸಾಲುದೀಪಗಳು’ ಕೃತಿಯು ಹೊಸಗನ್ನಡ ಸಾಹಿತ್ಯವನ್ನು ತಮ್ಮ ವ್ಯಕ್ತಿ ಪ್ರತಿಭೆಯಿಂದ ಕಟ್ಟಿ ಬೆಳೆಯಿಸಿದ 67 ಜನ ಲೇಖಕರ ವ್ಯಕ್ತಿತ್ವ ಹಾಗೂ ಸಾಹಿತ್ಯಕ ಸಾಧನೆಗಳ ಸಂಕ್ಷಿಪ್ತ ಸಮೀಕ್ಷೆಯೊಂದನ್ನು ಒಳಗೊಳ್ಳುವ ಕೃತಿಯಾಗಿದೆ. ಇದರಲ್ಲಿ ರೆವರೆಂಡ್ ಫೆರ್ಡಿನಾಂಡ್ ಕಿಟೆಲ್, ಬೆಂಜಮಿನ್ ಲೂಯಿ ರೈಸ್, ಬಿ. ವೆಂಕಟಾಚಾರ್ಯ, ಇ.ಪಿ. ರೈಸ್, ಎಂ.ಎಸ್. ಪುಟ್ಟಣ್ಣ, ಶಾಂತಕವಿ, ಆರ್. ನರಸಿಂಹಾಚಾರ್, ಕೆರೂರ ವಾಸುದೇವಾಚಾರ್ಯ, ಗಳಗನಾಥರು, ಪಂಜೆ ಮಂಗೇಶರಾವ್, ಫ.ಗು. ಹಳಕಟ್ಟಿ, ಆಲೂರ ವೆಂಕಟರಾಯರು, ಚನ್ನಪ್ಪ ಉತ್ತಂಗಿ, ಎಂ. ಗೋವಿಂದ ಪೈ, ಬಿ.ಎಂ.ಶ್ರೀ, ಟಿ.ಪಿ. ಕೈಲಾಸಂ, ಟಿ.ಎಸ್. ವೆಂಕಣ್ಣಯ್ಯ, ಡಿ.ವಿ.ಜಿ, ಮುಳಿಯ ತಿಮ್ಮಪ್ಪಯ್ಯ, ಹರ್ಡೇಕರ್ ಮಂಜಪ್ಪ, ಕಪಟರಾಳ ಕೃಷ್ಣರಾವ್, ಎ.ಆರ್. ಶ್ರೀನಿವಾಸಮೂರ್ತಿ, ಶಿ.ಶಿ. ಬಸವನಾಳ, ತಿರುಮಲೆ ತಾತಾಚಾರ್ಯ ಶರ್ಮ, ಶಂ.ಬಾ ಜೋಶಿ, ದ.ರಾ. ಬೇಂದ್ರೆ, ಬಿ. ಪುಟ್ಟಸ್ವಾಮಯ್ಯ, ನಾ. ಕಸ್ತೂರಿ, ದೇವುಡು, ಕೆ.ವಿ. ಅಯ್ಯರ್, ಸಂಸ, ಎಸ್.ವಿ. ರಂಗಣ್ಣ, ವಿ.ಸೀ, ಎಸ್.ಕೆ. ಕರೀಂಖಾನ್, ಆನಂದಕಂದ, ಬೆಟಗೇರಿ ಕೃಷ್ಣಶರ್ಮ, ಎ.ಎಸ್. ಮೂರ್ತಿರಾವ್, ತಿರುಮಲೆ ರಾಜಮ್ಮ, ಸೇಡಿಯಾಪು ಕೃಷ್ಣಭಟ್ಟರು, ಶಿವರಾಮ ಕಾರಂತ, ಮಧುರಚೆನ್ನ ಚೆನ್ನಮಲ್ಲಪ್ಪ ಗಲಗಲಿ, ಗೊರೂರು ರಾಮಸ್ವಾಮಿ ಅಯ್ಯಂಗಾರ್, ಜಿ.ಬಿ. ಜೋಶಿ, ಕಡೆಂಗೋಡ್ಲು ಶಂಕರಭಟ್ಟ ಮುಂತಾದ ಲೇಖಕರ ಕುರಿತು ಸಂಕ್ಷಿಪ್ತ ಮಾಹಿತಿ ಇದೆ. ಜಿ.ಎಸ್. ಸಿದ್ಧಲಿಂಗಯ್ಯ ಹಾಗೂ ಎಂ.ಎಚ್. ಕೃಷ್ಣಯ್ಯ ಈ ಕೃತಿಯನ್ನು ಸಂಪಾದಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನ 17ನೇ (1988-1992) ಅಧ್ಯಕ್ಷರಾಗಿದ್ದ ಜಿ.ಎಸ್.ಸಿದ್ಧಲಿಂಗಯ್ಯ, ವಚನ ಸಾಹಿತ್ಯ ವಿದ್ವಾಂಸರು, ಶಿಕ್ಷಣ ತಜ್ಞರು, ಕವಿಗಳು ಆಗಿದ್ದರು. ತುಮಕೂರು ಜಿಲ್ಲೆಯ ಬೆಳ್ಳಾವೆಯಲ್ಲಿ 1931 ರ ಫೆ. 20 ರಂದು ಜನನ. ಮೈಸೂರು ವಿ.ವಿ. ಮಹಾರಾಜ ಕಾಲೇಜಿನಿಂದ ಬಿ.ಎ. ಮೈಸೂರು ವಿ.ವಿ.ಯಿಂದ 1961ರಲ್ಲಿ ಎಂ.ಎ. ಪದವೀಧರರು. ಸರ್ಕಾರಿ ಕಾಲೇಜಿನ ಅಧ್ಯಾಪಕ-ಪ್ರಾಧ್ಯಾಪಕ-ಪ್ರಾಂಶುಪಾಲರಾಗಿ ನಂತರ 1988 ರಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕರಾಗಿ ನಿವೃತ್ತರಾದರು. ವಿಮರ್ಶೆ : ಮಹಾನುಭಾವ ಬುದ್ಧ, ಕವಿ ಲಕ್ಷ್ಮೀಶ, ಚಾಮರಸ, ಹೊಸಗನ್ನಡ ಕಾವ್ಯ, ಕವನ ಸಂಕಲನ : ಉತ್ತರ, ಚಿತ್ರ-ವಿಚಿತ್ರ, ಐವತ್ತರ ನೆರಳು, ಹಾಗೂ ಸಂಪಾದನೆ ...
READ MORE