ಡಾ. ಚಿ.ಸಿ. ನಿಂಗಣ್ಣ ರಚಿಸಿರುವ ‘ಗೀತಾ ನಾಗಭೂಷಣ’ ವಾಚಿಕೆ 10 ರ ಕುರಿತ ಸಮಗ್ರ ಸಾಹಿತ್ಯ ಈ ವಾಚಿಕೆಯಲ್ಲಿ ಅಡಕವಾಗಿದೆ. ಈ ವಾಚಿಕೆಯಲ್ಲಿ ಕಾದಂಬರಿ ಸಾಹಿತ್ಯ, ಕಥಾ ಸಾಹಿತ್ಯ, ಅನುಬಂಧ ಅನ್ನುವಂತಹ ಮೂರು ಭಾಗಗಳಿದೆ. ಗೀತಾ ನಾಗಭೂಷಣರ ಬರಹದಲ್ಲಿ ನಾವು ಮುಖ್ಯವಾಗಿ ಬರವಣಿಗೆಯಲ್ಲಿ ಬಳಸಬಹುದಾದ ಭಾಷೆಯ ಪ್ರಯೋಗ, ಸಮಕಾಲೀನ ಕಥೆ, ಹೊಸ ಪ್ರಯೋಗಗಳನ್ನು ಹೇಗೆ ಅಳವಡಿಸಿಕೊಳ್ಳಬಹುದು ಎಂಬುವುದನ್ನು ಮನಗಾಣಬಹುದು. ಇಲ್ಲಿನ ಬರಹಗಳಲ್ಲಿ ಕೇಳಗೇರಿ ಜನರ ಭಾಷೆಯನ್ನು ಬಳಸಿದ್ದು, ಭಾಷೆಯ ಸೊಗಡು ಜೀವಂತವಾಗಿ ಮೂಡಿಬಂದಿದೆ. ಗೀತಾ ನಾಗಭೂಷಣರ ಒಟ್ಟು ಬರಹದಲ್ಲಿ ಕೆಳವರ್ಗದ ಮತ್ತು ಹಿಂದುಳಿದ ವರ್ಗಗಳ ಇಡೀ ಶೂದ್ರ ಸಮುದಾಯಗಳ ಬದುಕಿನ ಅಸಲಿ ತುಣುಕುಗಳು ಕತೆಯಾಗಿವೆ.
©2024 Book Brahma Private Limited.