ಲೇಖಕ ಸಿ.ಎ. ರಮೇಶ್, ಜೆ.ಜಿ. ನಾಗರಾಜ್ ಅವರೊಂದಿಗೆ ಕಾ.ವೆಂ. ಶ್ರೀನಿವಾಸ ಮೂರ್ತಿ ಅವರು ಬರೆದ ಕೃತಿ-ಶಿಶುನಾಳ ಶರೀಫ ಮತ್ತು ಇತರೆ ಅನುಭಾವಿಗಳು. ಶಿಶುನಾಳ ಶರೀಫರು ಸೇರಿದಂತೆ ನಮ್ಮ ನಾಡಿನಲ್ಲಿ ಬಹುತೇಕ ದಾರ್ಶನಿಕರು, ಸೂಫಿ ಸಂತರು, ಅನುಭಾವಿಗಳು ಶರಣರು ಆಗಿ ಹೋಗಿದ್ದು, ಅವರ ಬದುಕು ಹಾಗೂ ಸಾಹಿತ್ಯಕ ಸಾಧನೆ, ಸಾಮಾಜಿಕ ಅರಿವಿನ ಹಿನ್ನೆಲೆಯಲ್ಲಿ ಹೋರಾಟ, ಕೋಮು ಸಾಮರಸ್ಯ ಸ್ಥಾಪನೆಯಲ್ಲಿ ಅವರ ಕಳಕಳಿ ಇತ್ಯಾದಿ ಅಂಶಗಳನ್ನು ಚಿತ್ರಿಸಿರುವ ಕೃತಿ ಇದು.
ಡಾ. ಕಾ. ವೆಂ. ಶ್ರೀನಿವಾಸಮೂರ್ತಿ ಅವರು ಬೆಂಗಳೂರು ಉತ್ತರಕಾವಲು ಭೈರಸಂದ್ರದವರು. ಉಪನ್ಯಾಸಕರಾಗಿದ್ದಾರೆ. ಚಂದ್ರತಾರೆ ಊರಿನಲ್ಲಿ, ಹೃದಯ ವಿಹಾರಿ, ಬದುಕು, ಕಾವ್ಯಕೋಗಿಲೆ, ನಿತ್ಯಶ್ರಾವಣ, ಅಭಿಮಾನದ ಹಣತೆ, ಮಣ್ಣಿನ ದೋಣಿ, ಆಯ್ದ ಭಾವಗೀತೆಗಳು (ಕಾವ್ಯ), ನೆಲದ ಕಣ್ಣ, ಮೌನ ಮಾತಾದಾಗ, ಕನ್ನಡ ರಂಗಭೂಮಿ, ಕನ್ನಡ ಚಳುವಳಿ ಮತ್ತು ಚಿಂತನ, ಉರಿಯಪೇಟೆ (ವಿಮರ್ಶೆ), ಕನ್ನಡ ಸಾಹಿತ್ಯ ಮತ್ತು ಕರ್ನಾಟಕತ್ವ, ಅಭಿರಾಮ, ಕನ್ನಡ ಭೇರಿ, ಬಂಡಾಯ ಕಾಲು ಶತಮಾನ (ಸಂಪಾದನೆ), ಕನ್ನಡ ಕಾವ್ಯದಲ್ಲಿ ನಾಡು ನುಡಿ ಚಿಂತನೆ (ಪಿಎಚ್‌ಡಿ ಮಹಾಪ್ರಬಂಧ). ...
READ MORE