ಖ್ಯಾತ ಬರಹಗಾರ ಬಿ.ಎಸ್. ಕೇಶವರಾವ್ ಅವರ ಕೃತಿ-ಮರೆಯಲಾಗದವರು. ಪದಗಳೊಡನೆ ಫನ್ (ಮೋಜು) ಮಾಡುವುದು ಬಿ.ಎಸ್. ಕೇಶವರಾವ್ ಅವರ ಶೈಲಿ. ಓದುಗರನ್ನು ಆಕರ್ಷಿಸುತ್ತಿತ್ತು. 58 ಕನ್ನಡ ದಿಗ್ಗಜರ ಬಗ್ಗೆ ಈ ಕೃತಿಯಲ್ಲಿ ಸೊಗಸಾಗಿ ಬರೆದಿದ್ದು, ಈ ಬರಹದಲ್ಲಿ ನಗು ಇದೆ. ನಗಿಸುವ ಕಲೆ ಇದೆ. ನಗುತಾ ಬಾಳುವ ಸಂದೇಶವಿದೆ.
ಮೂಲತಃ ಮೈಸೂರಿನವರಾದ (ಜನನ: 15-12-1935) ಬಿ.ಎಸ್. ಕೇಶವರಾವ್ ಶಿಕ್ಷಣ ಇಲಾಖೆಯ ಪ್ರಾಧ್ಯಾಪಕ, ನಟ, ರಂಗಕರ್ಮಿ. ತಂದೆ ಬಿ.ಕೆ. ಸುಬ್ಬರಾವ್, ತಾಯಿ ನಾಗಲಕ್ಷ್ಮಮ್ಮ. ಮೈಸೂರಿನ ಸೇಂಟ್ ಫಿಲೋಮಿನ ಕಾಲೇಜಿನಿಂದ ಇಂಟರ್ ಮೀಡಿಯೆಟ್, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಎಂಜನಿಯರಿಂಗ್‌ನಿಂದ ಡಿಪ್ಲೊಮಾ, ಮದರಾಸಿನ ಟೆಕ್ನಿಕಲ್ ಟೀಚಿಂಗ್ ಇನ್‌ಸ್ಟಿಟ್ಯೂಟಿನಿಂದ ಪದವಿ ಪಡೆದರು. ಹಿಂದೂಸ್ತಾನ್ ಕನ್‌ಸ್ಟ್ರಕ್ಷನ್ ಕಂಪನಿಯಲ್ಲಿ ಮೇಲ್ವಿಚಾರಕರಾಗಿ. ನಂತರ ಕಡಕ್‌ವಾಸ್ಲಾ, ಪೂನ, ಧೂಂಡ್‌ನಲ್ಲಿ ಕೆಲಕಾಲ. ನಂತರ ಅವರು ಶಿಕ್ಷಣ ಇಲಾಖೆಯಲ್ಲಿ ಅಧ್ಯಾಪಕರಾಗಿ ವಿವಿಧೆಡೆ ಸೇವೆ ಸಲ್ಲಿಸಿ ನಿವೃತ್ತರಾದರು. ರಂಗ ಕಲಾವಿದರಾಗಿ, ಆಕಾಶವಾಣಿ ಕಲಾವಿದರಾಗಿ ಹಲವಾರು ನಾಟಕಗಳಲ್ಲಿ ನಟಿಸಿ ನಿರ್ದೇಶಿಸಿದರು. ಶಿವರಾಮಕಾರಂತರ ಅಧ್ಯಕ್ಷತೆಯಲ್ಲಿ (1955) ನಡೆದ ಕನ್ನಡ ಸಾಹಿತ್ಯ ...
READ MORE