‘ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮುಂತಾದವರೊಡನೆ’ ಕೃತಿಯು ಕೋ. ಚೆನ್ನಬಸಪ್ಪ ಅವರ ವ್ಯಕ್ತಿಚಿತ್ರಣ ಕೃತಿಯಾಗಿದೆ. ಮೊದಲ ವ್ಯಕ್ತಿ ಚಿತ್ರವೇ ಸ್ವತಂತ್ರ ಭಾರತದ ಪ್ರಥಮ ದಂಡನಾಯಕರಾಗಿದ್ದ ಹೆಮ್ಮೆಯ ಫೀಲ್ಡ್ ವಾರ್ಷಲ್ ಕಾರ್ಯಪ್ಪನವರ ಬಗೆಗಿದ್ದು ಲೇಖಕರು ಮೊದಲ ಗೌರವ ಸಲ್ಲಿಸಿದ್ದಾರೆ. ಮುಂದಿನ ಲೇಖನಗಳೂ ಪ್ರಸಿದ್ಧರ ಕುರಿತಾಗಿಯೇ ಇವೆ. ತನ್ನ ಕಾಲದ, ತಾನು ತೀರ ಹತ್ತಿರದಿಂದ ಬಲ್ಲ ವ್ಯಕ್ತಿಗಳನ್ನು ಕೋಜಿ ಇಲ್ಲಿ ಪರಿಚಯಿಸಿದ್ದಾರೆ.
ಎಲ್ಲರೂ ಸಜ್ಜನಿಕೆಯ ಸಾಕಾರ ಮೂರ್ತಿಗಳು, ಸಹೃದಯರು. ಇಂದು ಬಲು ಅಪರೂಪಕ್ಕೆ ಕಾಣಸಿಗುವಂತಹ ವ್ಯಕ್ತಿತ್ವ ಹೊಂದಿರುವವರು. ಮನುಷ್ಯನ ನಡವಳಿಕೆಗಳಲ್ಲಿ, ಯೋಚನೆಗಳಲ್ಲಿ ಭಾರಿ ಬದಲಾವಣೆ ಕಂಡುಬರುತ್ತಿರುವ ಇಂದಿನ ದಿನಮಾನಕ್ಕೆ ಅತಿ ಅವಶ್ಯ ವಾಗಿರುವ ಮಾದರಿಯಾಗಿರುವವರು. ನಮಗಿಂತ ಈ ಒಂದೆರಡು ತಲೆಮಾರು ಹಿಂದೆ ಬದುಕಿದ್ದವರು, ಅಷ್ಟೆ, ಕಾಲ ಬದಲಾದಂತೆ ಮನುಷ್ಯರೂ ಮೌಲ್ಯಗಳನ್ನು ಅನಿವಾರ್ಯ ವಾಗಿ ಬದಲಿಸುತ್ತಿದ್ದಾರೆ. ಇಲ್ಲಿ ಮೂಡಿಬಂದಿರುವ ವ್ಯಕ್ತಿಚಿತ್ರಗಳನ್ನೋದಿ ನಾವು ಕಳೆದುಕೊಂಡದ್ದನ್ನು ಮತ್ತೆ ಪಡೆಯುವಂತಾದರೆ ಎಷ್ಟು ಚೆನ್ನ ಅಲ್ಲವೇ ? ಈ ಲೇಖನಗಳ ಉದ್ದೇಶವೂ ಅದೇ ಆಗಿದೆ.
(ಹೊಸತು, ಮೇ 2015, ಪುಸ್ತಕದ ಪರಿಚಯ)
ಮೊದಲ ವ್ಯಕ್ತಿ ಚಿತ್ರವೇ ಸ್ವತಂತ್ರ ಭಾರತದ ಪ್ರಥಮ ದಂಡನಾಯಕರಾಗಿದ್ದ ಹೆಮ್ಮೆಯ ಫೀಲ್ಡ್ ವಾರ್ಷಲ್ ಕಾರ್ಯಪ್ಪನವರ ಬಗೆಗಿದ್ದು ಲೇಖಕರು ಮೊದಲ ಗೌರವ ಸಲ್ಲಿಸಿದ್ದಾರೆ. ಮುಂದಿನ ಲೇಖನಗಳೂ ಪ್ರಸಿದ್ಧರ ಕುರಿತಾಗಿಯೇ ಇವೆ. ತನ್ನ ಕಾಲದ, ತಾನು ತೀರ ಹತ್ತಿರದಿಂದ ಬಲ್ಲ ವ್ಯಕ್ತಿಗಳನ್ನು ಕೋಜಿ ಇಲ್ಲಿ ಪರಿಚಯಿಸಿದ್ದಾರೆ. ಎಲ್ಲರೂ ಸಜ್ಜನಿಕೆಯ ಸಾಕಾರ ಮೂರ್ತಿಗಳು, ಸಹೃದಯರು. ಇಂದು ಬಲು ಅಪರೂಪಕ್ಕೆ ಕಾಣಸಿಗುವಂತಹ ವ್ಯಕ್ತಿತ್ವ ಹೊಂದಿರುವವರು. ಮನುಷ್ಯನ ನಡವಳಿಕೆಗಳಲ್ಲಿ, ಯೋಚನೆಗಳಲ್ಲಿ ಭಾರಿ ಬದಲಾವಣೆ ಕಂಡುಬರುತ್ತಿರುವ ಇಂದಿನ ದಿನಮಾನಕ್ಕೆ ಅತಿ ಅವಶ್ಯ ವಾಗಿರುವ ಮಾದರಿಯಾಗಿರುವವರು. ನಮಗಿಂತ ಈ ಒಂದೆರಡು ತಲೆಮಾರು ಹಿಂದೆ ಬದುಕಿದ್ದವರು, ಅಷ್ಟೆ, ಕಾಲ ಬದಲಾದಂತೆ ಮನುಷ್ಯರೂ ಮೌಲ್ಯಗಳನ್ನು ಅನಿವಾರ್ಯ ವಾಗಿ ಬದಲಿಸುತ್ತಿದ್ದಾರೆ. ಇಲ್ಲಿ ಮೂಡಿಬಂದಿರುವ ವ್ಯಕ್ತಿಚಿತ್ರಗಳನ್ನೋದಿ ನಾವು ಕಳೆದುಕೊಂಡದ್ದನ್ನು ಮತ್ತೆ ಪಡೆಯುವಂತಾದರೆ ಎಷ್ಟು ಚೆನ್ನ ಅಲ್ಲವೇ ? ಈ ಲೇಖನಗಳ ಉದ್ದೇಶವೂ ಅದೇ ಆಗಿದೆ. ವ್ಯಕ್ತಿಚಿತ್ರ, ಗಳನ್ನೋದುತ್ತಿದ್ದಂತೆ ನಾವೂ ಅಂದಿನ ಸಹಜ ಪರಿಸರಕ್ಕೆ ತಂತಾನೇ ಹೊರಳಿಬಿಡುತ್ತೇವೆ. ಇಂದಿನಂತೆ ಆಧುನಿಕ ವಲ್ಲದ ಕಷ್ಟಸಹಿಷ್ಣುಗಳಾದ ಜನರಿಂದ ತುಂಬಿದ ಆ ಕಾಲವನ್ನು ನಾವು ಊಹಿಸಿ ಮಾತ್ರ ತಿಳಿದುಕೊಳ್ಳಬೇಕಷ್ಟೆ.
©2024 Book Brahma Private Limited.