‘ಎಂದೂ ಮುಗಿಯದ ಯುದ್ಧ’ ಭಾರತ ನಕ್ಸಲ್ ಇತಿಹಾಸ ಲೇಖಕ ಜಗದೀಶ್ ಕೊಪ್ಪ ಅವರ ಕೃತಿ. ಇದು ಭಾರತೀಯ ನಕ್ಸಲ್ ಇತಿಹಾಸದ ಸಂಶೋಧನಾತ್ಮಕ ಕೃತಿ. ಈ ಕೃತಿಗಾಗಿ ಲೇಖಕರು ಸಾಕಷ್ಟು ಕ್ಷೇತ್ರಕಾರ್ಯ ಮಾಡಿದ್ದಾರೆ. ಇಲ್ಲಿ ಪುರೋಗಾಮಿ ಪತ್ರಕರ್ತರಾಗಲಿ, ಚರ್ವಿತ ಚರ್ವಣ ಎಡಪಂಥೀಯ ಚಳವಳಿಗಳ ನೇತಾರರಾಗಲಿ ಗಮನಿಸಬೇಕಾದ ಸಂಗತಿಯೆಂದರೆ, ದೇಶದ ವಿಭಿನ್ನ ನೆಲೆಯ ಎರಡು ಯುವಶಕ್ತಿಗಳು ಫ್ಯಾಸಿಸ್ಟ್ ಶಕ್ತಿಗಳಿಗೆ ಬಲಿಯಾಗುತ್ತಿದ್ದಾರೆ ಮತ್ತು ಆ ನಿಟ್ಟಿನಲ್ಲಿ ತಕ್ಷಣವೇ ಪ್ರಕ್ರಿಯೆಗಳನ್ನು ಕೈಗೆತ್ತಿಕೊಳ್ಳಬೇಕಾದ ಅಗತ್ಯವಿದೆ ಎಂಬುದನ್ನು ಕೃತಿ ಮನದಟ್ಟುಮಾಡಿಕೊಡುತ್ತದೆ.
ದೇಶದ ನಗರವಾಸಿ ವಿದ್ಯಾವಂತ ಯುವಕರು ಬಂಡವಾಳಶಾಹಿ ಜಗತ್ತು ನಿರ್ಮಿಸಿರುವ ಹುಸಿ ಪ್ರಜಾಸತ್ತೆಯ ಚಳವಳಿಗೆ ಬಲಿಯಾಗಿ ನಿಜವಾದ ಪ್ರತಿಭಟನೆ ಎಲ್ಲಿ, ಯಾಕಾಗಿ ಮಾಡಬೇಕು ಎಂದು ತಿಳಿಯದೆ ದಿಕ್ಕು ತಪ್ಪುತ್ತಿರುವುದು, ಇನ್ನೊಂದೆಡೆ ಗ್ರಾಮೀಣ ಪ್ರದೇಶದಲ್ಲಿರುತ್ತ ವಿದ್ಯೆ-ಉದ್ಯೋಗವಿಲ್ಲದೆ ಹತಾಶರಾಗಿ ಸಂಘ ಪರಿವಾರ, ಭಾಷಾ ಮೂಲಭೂತವಾದ, ಭೂಗತರು ನಡೆಸುವ ಆಟೋ-ಚಾಲಕರ ಇತ್ಯಾದಿ ಸಂಘಟನೆಯಲ್ಲಿ ಗುರುತಿಸಿಕೊಂಡು ಹೊಟ್ಟೆ ಹೊರೆಯುತ್ತಿರುವವರು, ಈ ಎರಡೂ ಯುವಶಕ್ತಿಗೆ ನಿಜವಾದ ಬದಲಾವಣೆ ತರಲು ಸಾಧ್ಯವಿರುವುದು, ಈ ಕಥನ ಅಂತಹ ವಿಚಾರಗಳನ್ನು ಬಿತ್ತಬಲ್ಲದು.
©2024 Book Brahma Private Limited.