ಧೀಮತಿಯರು-ಈ ಕೃತಿಯು ಮುಖ್ಯವಾಗಿ ಸ್ವಾತಂತ್ಯ್ರ ಹೋರಾಟ ಸೇರಿದಂತೆ ತುಂಬಾ ಧೈರ್ಯದಿಂದ, ಧೀರತನದಿಂದ ಹೋರಾಡಿದ ಮಹಿಳೆಯರ ಕಥನವನ್ನು ಪರಿಚಯಿಸಿರುವ ಕೃತಿ ಇದಾಗಿದೆ.ಈ ಕೃತಿಯ ಕರ್ತೃ ನಾಗಮಣಿ ಎಸ್. ರಾವ್.
(ಹೊಸತು, ಆಗಸ್ಟ್ 2012, ಪುಸ್ತಕದ ಪರಿಚಯ)
ವಿವಿಧ ಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆ ತೋರಿದ ನಮ್ಮ ನಾಡಿನ ಮಹಿಳಾ ಸಾಧಕಿಯರನ್ನು ಪರಿಚಯಿಸುವ ಅಪರೂಪದ ಪುಸ್ತಕ, ಅಡುಗೆ ಮನೆ-ಮದುವೆ ಮನೆ ಇಷ್ಟೇ ತಮ್ಮ ಪ್ರಪಂಚವೆಂದು ಆಕೆ ತಿಳಿದುಕೊಂಡ ಕಾಲವೊಂದಿತ್ತು ಅವಳು ಹೊರಗೆ ಕಾಲಿಡುವುದು ಗಂಡನ ಜೊತೆಗೆ ಇಂಥ ಸ್ಥಿತಿಯಿಂದ ವಿದ್ಯಾಭ್ಯಾಸದ ನೆರವಿನೊಂದಿಗೆ ಅವಳು ಒಂದು ಉನ್ನತ ಸ್ಥಾನ ಗಳಿಸಬೇಕಾದರೆ ಎದುರಿಸಿದ ಕಷ್ಟಕಾರ್ಪಣ್ಯಗಳು ಲೆಕ್ಕವಿಲ್ಲದಷ್ಟು, ಗೃಹಿಣಿ ಯಾಗಿದ್ದು ಮನೆಯ ಜವಾಬ್ದಾರಿಗಳೊಂದಿಗೆ ಸಾಹಿತ್ಯಕ್ಷೇತ್ರಕ್ಕೂ ಹೆಜ್ಜೆಯಿರಿಸಿ ಯಶಸ್ವೀ ಲೇಖಕಿಯರಾಗಿದ್ದು ಅದೆಷ್ಟೋ ಮಂದಿ. ಜೊತೆಗೆ ಸಾಮಾಜಿಕ ಜವಾಬ್ದಾರಿಯನ್ನರಿತುಕೊಂಡು ಸಮಾಜಸೇವೆಗೈದವರು, ಪತ್ರಿಕಾರಂಗ - ಆಕಾಶವಾಣಿ ಮುಂತಾದ ಕಛೇರಿಗಳಿಗೂ ಕಾಲಿಟ್ಟು ಸೈ ಎನಿಸಿಕೊಂಡವರು ಇಲ್ಲಿನ ಲೇಖನಗಳ ಮೂಲಕ ಪರಿಚಯವಾಗುತ್ತಾರೆ. ಒಂದೆರಡು ತಲೆಮಾರಿನ ಹಿಂದಿನವರ – ನಮ್ಮ ಕಣ್ಮುಂದಿನ ಇಂದಿನ ಬರಹಗಾರ್ತಿಯರ ವಿಚಾರಲಹರಿ ಸಂಗಮಿಸುವಂತೆ ಪರಸ್ಪರ ಸೆಳೆತವೊಂದು ಇಲ್ಲಿ ಮೂಡಿಬರುತ್ತಿದೆ. ಜೊತೆಗೆ ಸ್ತ್ರೀವಾದದ ಪ್ರಖರ ಕಿರಣಗಳನ್ನು ಹೊಮ್ಮಿಸುವಂತೆ ಕಾಣುವ ಸಾಧಕಿಯರ ಹೆಜ್ಜೆಗುರುತು ಮೂಡಿಸುವ ಪ್ರಯತ್ನದೊಂದಿಗೆ ಸೋಲು-ಗೆಲುವನ್ನೂ ಗಮನಿಸಬೇಕಾಗಿದೆ. ಇನ್ನು ಮುಖಪುಟ - ಆಹಾ, ಅಂತಃಚಕ್ಷುಗಳನ್ನು ತೆರೆದು ಬಾಹ್ಯದೃಷ್ಟಿಯ ಹಂಗಿಲ್ಲದೆ ಬುದ್ಧಿವಂತ ಮನಸ್ಸುಗಳೊಂದಾಗಿ ನಡೆಸುವ ಸಮ್ಮೇಳನದಂತಿರುವ ಚಿತ್ರವನ್ನು ರಚಿಸಿದ ಕಲಾವಿದ ಕಮಲಂ ಅರಸು ಕಲ್ಪನೆ ಅತ್ಯದ್ಭುತ ! ಇಲ್ಲಿ ಬುದ್ಧಿಭಾವಗಳನ್ನು ಅರಳಿದ ಹೂಗಳು ಪ್ರತಿನಿಧಿಸಿವೆ.
©2024 Book Brahma Private Limited.