‘ಛತ್ರಪತಿ ಶಿವಾಜಿ’ ಚ. ವಾಸುದೇವಯ್ಯ ಅವರ ವ್ಯಕ್ತಿಚಿತ್ರಣ ಕುರಿತ ಕೃತಿಯಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ಕರ್ಣಾಟಕದಲ್ಲಿ ಯ ದ್ರಾವಿಡ ದೇಶದಲ್ಲಿಯೂ ಬಿಜಾಪುರ ಸಂಸ್ಥಾನದವರು ಅನೇಕ ನಾಡುಗಳನ್ನು ಗೆದ್ದಿದ್ದರು. ರಣದುಲ್ಲಾಖಾನ ನೆಂಬವನು ಆ ನಾಡುಗಳಿಗೆಲ್ಲಕ್ಕೂ ಆ ಸಂಸ್ಥಾನದವರ ಕಡೆಯ ಅಧಿಕಾರಿ ಯಾಗಿದ್ದನು. ಅವನು 168ಲ್ಲಿ ದಂಡೆತ್ತಿ ಬ೦ದು ಯಲಹ೦ಕ ನಾಡಿನ ಪ್ರಭುವಾದ. ಕೆಂಪೇಗೌಡನಿಂದ ಬೆಂಗಳೂರನ್ನು ತೆಗೆದುಕೊ೦ಡನು. ಅವನ ತರುವಾಯ ಸುಲ್ತಾನನು ರಣದುಲ್ಲಾಖಾನನ ಸ್ಥಾನದಲ್ಲಿ ಷಾಹಜಿ ಯನ್ನು ನೇಮಿಸಿ, ಅವನು ಕರ್ನಾಟಕ ಯುದ್ಧದಲ್ಲಿ ತೋರಿಸಿದ ಪರಾ ಕ್ರಮಕ್ಕೆ ಮೆಚ್ಚಿ ಕೋಲಾರ, ಹೊಸಕೋಟೆ, ಬೆಂಗಳೂರು, ಬಳ್ಳಾಪುರ, ತೀರ ಎ೦ಬ ಊರುಗಳನ್ನು ಜಹಗೀರನ್ನಾಗಿ ಕೊಟ್ಟರು. ಮೊದಲು ಸಾಹಜಿ ಬೆಂಗಳೂರಲ್ಲಿ ವಾಸಮಾಡುತ್ತಿದ್ದು, ತರುವಾಯ ಯುದ್ಧ ಕಾಲ ಗಳಲ್ಲಿ ಹೊರತು ಮಿಕ್ಕ ಕಾಲಗಳಲ್ಲಿ ಕೋಲಾರದಲ್ಲಿಯಾಗಲಿ ದೊಡ್ಡ ಬಳ್ಳಾಪುರದಲ್ಲಿ ಯಾಗಲಿ ವಾಸ ಮಾಡುತ್ತಿದ್ದನು. ಈ ರೀತಿಯಲ್ಲಿ ಷಾಹಜಿ ಯು ಸುಲ್ತಾನನ ಅನುಗ್ರಹವನ್ನು ಸಂಪಾದಿಸಿ ದಿನ ದಿನಕ್ಕೆ ವೃದ್ಧಿಗೆ ಬ೦ದು ಕಡೆಗೆ ರಾಜನೆಂಬ ಬಿರುದನ್ನೂ ಪಡೆದು ತಂಜಾವೂರನ್ನು ಗೆದ್ದು ಅಲ್ಲಿಯೇ ತನ್ನ ಮಗ ವೆಂಕೋಜಿಗೆ ಬೇರೊಂದು ರಾಜ್ಯವನ್ನು ಕಟ್ಟಿದನು ಎನ್ನುವ ವಿಚಾರವನ್ನು ಕೃತಿಯನ್ನು ಒಳಗೊಂಡಿದೆ.
©2024 Book Brahma Private Limited.