ಆ ಮೂಲೆ ಈ ಮೂಲೆ

Author : ಸಿದ್ಧಲಿಂಗಯ್ಯ

Pages 176

₹ 150.00




Year of Publication: 2015
Published by: ಅಂಕಿತ ಪುಸ್ತಕ
Address: 53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್, ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು- 560 0046
Phone: 26617100, 26617755

Synopsys

ಡಾ. ಸಿದ್ದಲಿಂಗಯ್ಯನವರ ಮೂವತ್ತೂರು ಲೇಖನಗಳು ’ಆ ಮೂಲೆ ಈ ಮೂಲೆ' ಪುಸ್ತಕದಲ್ಲಿವೆ. ಬುದ್ದ, ಬಸವಣ್ಣ, ಗಾಂಧಿ, ಅಂಬೇಡ್ಕರ್‌, ಲೋಹಿಯಾ, ಮಾರ್ಕ್ಸ್, ಪೆರಿಯಾರ್, ಓಶೋ, ಕುವೆಂಪುರವರ ಬದುಕು, ಚಿಂತನೆ, ಸಿದ್ದಾಂತಗಳನ್ನು ಪ್ರೀತಿಯಿಂದ ಗಮನಿಸಿದ ಮತ್ತು ಸ್ವೀಕರಿಸಿದ, ಪ್ರಗತಿಶೀಲತೆಯ ಜೊತೆಗೆ ಬಂಡಾಯ ಮನೋಧರ್ಮ ಬೆರೆತ ವ್ಯಕ್ತಿತ್ವದ ಅಭಿವ್ಯಕ್ತಿಯ ಮಾದರಿ ಈ ಬರಹಗಳಲ್ಲಿದೆ.

ಹಿರಿಯ ವಿಮರ್ಶಕ ಡಾ. ಬೈರಮಂಗಲ ರಾಮೇಗೌಡ ಅವರು ಈ ಕೃತಿಯ ಬಗ್ಗೆ ಹೀಗೆ ಬರೆದಿದ್ದಾರೆ-

ಸಾಂಸ್ಕೃತಿಕ ಜಾಥಾಗಳಲ್ಲಿ, ವಿಚಾರ ಸಂಕಿರಣಗಳಲ್ಲಿ, ಅಂಬೇಡ್ಕರ್ ದಿನಾಚರಣೆ-ಸಂಸ್ಕರಣೆಗಳಲ್ಲಿ, ಸಾಹಿತ್ಯ ಸಮ್ಮೇಳನಗಳಲ್ಲಿ, ಪುಸ್ತಕ ಬಿಡುಗಡೆ ಸಮಾರಂಭಗಳಲ್ಲಿ ಸಿದ್ದಲಿಂಗಯ್ಯನವರು ಮಾಡಿದ ಭಾಷಣ ಮತ್ತು ಉಪನ್ಯಾಸಗಳು ಇಲ್ಲಿ ಲೇಖನರೂಪಕ್ಕಿಳಿದಿವೆ. ಜೊತೆಗೆ ಅವರು ಬೇರೆಬೇರೆ ಕಾರಣಗಳಿಗಾಗಿ ಇಷ್ಟಪಡುವ ಸಾಹಿತಿಗಳ, ರಾಜಕಾರಣಿಗಳ, ಹೋರಾಟಗಾರರ ಅಪರೂಪದ ವಿವರಗಳಿಂದ ಕೂಡಿದ ಆಪ್ತಧಾಟಿಯ ವ್ಯಕ್ತಿಚಿತ್ರಗಳಿವೆ. ಸರ್ಕಾರಿ ಕಲಾ ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗ ಸಿದ್ದಲಿಂಗಯ್ಯನವರು ಚರ್ಚಾಪಟುವಾಗಿ ಪ್ರಸಿದ್ದಿಗೆ ಬಂದವರು. ಸ್ಪರ್ಧೆಯಲ್ಲಿ ಗೆಲ್ಲುವಂತೆ ಮಾತನಾಡಲು ಅಗತ್ಯವಾದ ವಿಷಯಗಳನ್ನು ನಾನಾ ಮೂಲಗಳಿಂದ ಸಂಗ್ರಹಿಸಿ ಅದನ್ನು ತೀವ್ರವಾಗಿ, ಪರಿಣಾಮಕಾರಿಯಾಗಿ ಮಂಡಿಸುತ್ತಿದ್ದವರು. ಅಂಥದ್ದೇ ಪ್ರಖರತೆ, ಸಮೃದ್ಧತೆ, ವಿಚಾರಪೂರ್ಣತೆ ಈ ಗದ್ಯಬರಹಗಳನ್ನು, ಆವರಿಸಿಕೊಂಡಿದೆ. ವಿಷಯಮಂಡನೆಯಲ್ಲಿರಬೇಕಾದ ಸಮತೂಕವನ್ನು ಕಾಯ್ದುಕೊಳ್ಳುವುದರ ಜೊತೆಗೆ, ವಿಮರ್ಶಾ ವಿವೇಕದ ಎಚ್ಚರದಲ್ಲೂ ಮುನ್ನಡೆಯುವುದರಿಂದಾಗಿ ಅವರ ವಾದವನ್ನು ಪಕ್ಕಕ್ಕಿರಿಸುವುದಾಗಲೀ, ನಿರಾಕರಿಸುವುದಾಗಲೀ ಅಷ್ಟು ಸುಲಭವಲ್ಲ. ಇದು ಸಿದ್ದಲಿಂಗಯ್ಯನವರ ಗದ್ಯಬರಹದ ವೈಶಿಷ್ಟ್ಯ.

-

About the Author

ಸಿದ್ಧಲಿಂಗಯ್ಯ
(03 February 1954)

ದಲಿತ ಕವಿ ಎಂದು ಗುರುತಿಸಲಾಗುವ ಡಾ. ಸಿದ್ಧಲಿಂಗಯ್ಯ ಅವರು ದಲಿತ-ಬಂಡಾಯ ಸಾಹಿತ್ಯ ಚಳುವಳಿಯ ಪ್ರಮುಖ ಕವಿ-ಹೋರಾಟಗಾರ. ಮಾಗಡಿಯಲ್ಲಿ 1954ರ ಫೆಬ್ರುವರಿ 3ರಂದು ಜನಿಸಿದರು. ತಾಯಿ ವೆಂಕಮ್ಮ- ತಂದೆ ದೇವಯ್ಯ. ಬಡತನದಲ್ಲಿಯೇ ಗ್ರಾಮೀಣ ಭಾಗದ ಶಾಲೆಗಳಲ್ಲಿ ತಮ್ಮ ಪ್ರಾರಂಭಿಕ ಶಾಲಾ ವಿದ್ಯಾಭ್ಯಾಸ ಮಾಡಿ ಎಂ.ಎ. ಪದವಿಗಳಿಸಿ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅಧ್ಯಾಪಕರಾಗಿ, ನಿರ್ದೇಶಕರಾಗಿ, ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಡಾ. ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದಲ್ಲಿ ಸೇವೆ ಸಲ್ಲಿಸಿದ ನಂತರ ಸಿದ್ಧಲಿಂಗಯ್ಯನವರು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿದ್ದರು. ನಡೆದ ಅಖಿಲ ಕರ್ನಾಟಕ ...

READ MORE

Related Books