ಸ್ವಾತಂತ್ರ್ಯ ಹೋರಾಟದ ಹೀರೋಗಳು – ಭಾಗ 2

Author : ಬಾಬು ಕೃಷ್ಣಮೂರ್ತಿ

Pages 328

₹ 230.00




Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಬೆಂಗಳೂರು-19.

Synopsys

ಸ್ವಾತಂತ್ರ್ಯ ಹೋರಾಟದ ಹೀರೋಗಳು – ಭಾಗ 2 ಈ ಕೃತಿಯು ಸ್ವಾತಂತ್ಯ್ರ ಹೋರಾಟಗಾರರನ್ನು ಪರಿಚಯಿಸುತ್ತದೆ. ಹಿರಿಯ ಲೇಖಕ ಬಾಬು ಕೃಷ್ಣಮೂರ್ತಿ ಅವರು ಕೃತಿ ರಚಿಸಿದ್ದಾರೆ. ನಮ್ಮ ಹೃದಯಗಳಲ್ಲಿ ಪ್ರಜ್ವಲಿಸುತ್ತಿರುವ ಸ್ವಾತಂತ್ರ್ಯದ ಜ್ವಾಲೆಯನ್ನು ಹಚ್ಚಿದ್ದು ನಿನ್ನ ಹೃದಯದಲ್ಲಿ ಧಗಧಗಿಸುತ್ತಿದ್ದ ಸ್ವಾತಂತ್ರ್ಯ ಜ್ವಾಲೆಗಳೇ. ಈ ಸ್ಮಾರಕ ಸ್ತಂಭದ ಮೇಲೆ ಬೆಳಗುತ್ತಿರುವ ಜ್ಯೋತಿಗಳೇ ನಿನ್ನಂಥ ವೀರ ಹುತಾತ್ಮನಿಗೆ ನಾವು ಸಲ್ಲಿಸುವ ಗೌರವಾರ್ಪಣೆ. ನಾವು ಬೆಳಕಿಗಾಗಿ ಹುಡುಕಾಡುವ ಸಂದರ್ಭ ಬಂದಾಗಲೆಲ್ಲ ನಿನ್ನ ಜ್ವಾಲೆಯ ಅಗ್ನಿ ಕಣ ಒಂದು ನಮ್ಮ ಹೃದಯಗಳನ್ನು ಬೆಳಗುತ್ತದೆ. ನಮಗೆ ದಾರಿದೀಪವಾಗುತ್ತದೆ.” ಇದು ಒಬ್ಬ ವೀರಯೋಧನಿಗೆ ಇನ್ನೊಬ್ಬ ವೀರಯೋಧ 1943ರ ಫೆಬ್ರವರಿ 1ರಂದು ಒಂದು ಸ್ಮಾರಕ ಸ್ತಂಭದ ಮುಂದೆ ನಿಂತು ತಲೆಬಾಗಿ ನಮಿಸುತ್ತಿದ್ದ ಕ್ಷಣ. ಈ ವ್ಯಕ್ತಿ ಸ್ವಾತಂತ್ರ್ಯವೀರ ವಿನಾಯಕ ದಾಮೋದರ ಸಾವರ್‌ಕರ್. ಆ ಸ್ಮಾರಕ ಯೋಧಾಗ್ರೇಸರ ಆದ್ಯ ಕ್ರಾಂತಿಕಾರಿ ವಾಸುದೇವ ಬಲವಂತ ಫಡ್ಕೆ ಅವರ ಸ್ಮೃತಿಗಾಗಿ ನಿರ್ಮಿಸಲಾಗಿದ್ದ ಸ್ತಂಭ’ ಎಂದು ಕೃತಿಯ ಕುರಿತು ವಿವರಿಸಲಾಗಿದೆ.

About the Author

ಬಾಬು ಕೃಷ್ಣಮೂರ್ತಿ

ಸಾಹಿತ್ಯ, ಪತ್ರಿಕೋದ್ಯಮ ಎರಡು ಕ್ಷೇತ್ರಗಳಲ್ಲೂ ಚಿರಪರಿಚಿತರಾದ ಬಾಬು ಕೃಷ್ಣಮೂರ್ತಿ ಹುಟ್ಟಿದ್ದು ಬೆಂಗಳೂರು. ಸಾಹಿತ್ಯ ಹಾಗೂ ಪತ್ರಿಕೋದ್ಯಮದಲ್ಲಿ ಅತೀವ ಆಸಕ್ತಿ. ಅವರ ಸಂಪಾದಕತ್ವದಲ್ಲಿ ಬಾಲಮಂಗಳ (ಪಾಕ್ಷಿಕ), ಬಾಲಮಂಗಳ ಚಿತ್ರಕಥಾ (ಮಕ್ಕಳ ವ್ಯಂಗ್ಯ ಚಿತ್ರ ಪಾಕ್ಷಿಕ), ಗಿಳಿವಿಂಡು (ಶಿಶು ಪಾಕ್ಷಿಕ ಪತ್ರಿಕೆ) ಪ್ರಕಟವಾಗಿವೆ. ಇವರು ರಚಿಸಿದ ಸ್ವಾತಂತ್ರ್ಯವೀರ ಚಂದ್ರಶೇಖರ ಆಜಾದ್ ಕುರಿತು ಆರು ವರ್ಷ ಕಾಲ ಸಂಶೋಧನೆ, ಸ್ಥಳವೀಕ್ಷಣೆ ನಡೆಸಿ ರಚಿಸಿದ ಕೃತಿ ‘ಅಜೇಯ’. ಅವರ ಪ್ರಮುಖ ಕೃತಿಗಳು - ಅಜೇಯ (1974), ಸಿಡಿಮದ್ದು ನೆತ್ತರು ನೇಣುಗಂಬ (1984), ಅದಮ್ಯ (1984), ರುಧಿರಾಭಿಷೇಕ (2005), ಡಾ. ಸಿ.ಜಿ. ಶಾಸ್ತಿಒಂದು ಯಶೋಗಾಥೆ (2007), 1857-ಭಾರತದ ಸ್ವಾತಂತ್ರ್ಯ ಸಂಗ್ರಾಮ (2007), ...

READ MORE

Related Books