‘ಸುಧಾರಕರು’ ಕೃತಿಯು ಅರವಿಂದ ಚೊಕ್ಕಾಡಿ ಅವರು ರಚಿಸಿರುವ ವ್ಯಕ್ತಿಚಿತ್ರಣಗಳ ಸಂಕಲನವಾಗಿದೆ. ಜಾತಿಪದ್ಧತಿ, ಸತಿಪದ್ಧತಿ, ಜೀತಪದ್ಧತಿ, ಬಾಲ್ಯವಿವಾಹ ಲಿಂಗತಾರತಮ್ಯ ಧರ್ಮಾಂಧತೆ ಮುಂತಾದ ಸಾಮಾಜಿಕ ಪಿಡುಗುಗಳಿಗೆ ಬಲಿಯಾಗುತ್ತಾ ನರಳುತ್ತಾ ಬಂದಿದೆ. ಕಾಲದಿಂದ ಕಾಲಕ್ಕೆ ಸುಧಾರಕರು ಜನಿಸಿ ಅಂದಿನಿಂದ ಪಿಡುಗುಗಳಿಂದ ಸಮಾಜವನ್ನು ಪಾರು ಮಾಡಲು ಶ್ರಮಿಸಿದ್ದಾರೆ. ಪೆರಿಯಾರ್, ನಾರಾಯಣಗುರು, ಗಾಂಧೀಜಿ, ಮಹಾತ್ಮ ಪುಲೆ, ಅಂಬೇಡ್ಕರ್ ಮುಂತಾದವರು ಈ ಪಿಡುಗುಗಳನ್ನು ನಿವಾರಿಸಲು ಇನ್ನಿಲ್ಲದ ಪ್ರಯತ್ನಗಳನ್ನು ನಡೆಸಿದ್ದಾರೆ. ಇಂತಹ ಸುಧಾರಕರ ವ್ಯಕ್ತಿಚಿತ್ರಣಗಳನ್ನು ಅರವಿಂದ ಚೊಕ್ಕಾಡಿಯವರು ಈ ಕೃತಿಯಲ್ಲಿ ತುಂಬ ವಿಭಿನ್ನವಾಗಿ ನಿರೂಪಿಸುತ್ತಾರೆ.
ಇಲ್ಲಿಯತನಕ ಬಂದಿರುವ ವ್ಯಕ್ತಿಚಿತ್ರಣದ ಪುಸ್ತಕಗಳಿಗಿಂತ ಚೊಕ್ಕಾಡಿಯವರು ಸಂಗ್ರಹಿಸಿರುವ ಮಾಹಿತಿ ಹಾಗೂ ಅದನ್ನು ನಿರೂಪಿಸಿರುವ ಪರಿ ವಿಶಿಷ್ಟವಾಗಿದ್ದು ಗಮನ ಸೆಳೆಯುತ್ತದೆ. ಸಾಮಾಜಿಕವಾಗಿ ತುಂಬ ಕಾಳಜಿಯನ್ನು ವ್ಯಕ್ತಪಡಿಸುವ ಇಲ್ಲಿನ ಬರಹಗಳು ಯಾವುದೇ ಅತಿ-ಮಿತಿಗಳನ್ನು ಹೇರಿಕೊಳ್ಳದೆ ಯಾವುದೇ ಹಿತಾಸಕ್ತಿಗಳಿಗೆ ಬಲಿಯಾಗದೆ ಸಮಗ್ರ ಮಾಹಿತಿಯನ್ನು ಮುಕ್ತವಾಗಿ, ವಸ್ತುನಿಷ್ಠವಾಗಿ ಕಟ್ಟಿಕೊಡುತ್ತವೆ. ಸುಧಾರಕರ ಬದುಕು-ಬವಣೆ, ಕನಸು, ಆಶಯ ಹಾಗೂ ಸಾಧನೆಗಳನ್ನು ಪ್ರಕಾಶಕರೇ ಹೇಳುವಂತೆ ಶಿಕ್ಷಕ-ವಿದ್ಯಾರ್ಥಿಗಳನ್ನು ಕೇಂದ್ರವಾಗಿಟ್ಟುಕೊಂಡು ರೂಪಿಸಿದಂತಿದೆ.
(ಹೊಸತು, ಡಿಸೆಂಬರ್ 2012, ಪುಸ್ತಕದ ಪರಿಚಯ)
ಭಾರತೀಯ ಸಮಾಜವು ಶತ-ಶತಮಾನಗಳಿಂದಲೂ ಜಾತಿಪದ್ಧತಿ, ಸತಿಪದ್ಧತಿ, ಜೀತಪದ್ಧತಿ, ಬಾಲ್ಯವಿವಾಹ ಲಿಂಗತಾರತಮ್ಯ ಧರ್ಮಾಂಧತೆ ಮುಂತಾದ ಸಾಮಾಜಿಕ ಪಿಡುಗುಗಳಿಗೆ ಬಲಿಯಾಗುತ್ತಾ ನರಳುತ್ತಾ ಬಂದಿದೆ. ಕಾಲದಿಂದ ಕಾಲಕ್ಕೆ ಸುಧಾರಕರು ಜನಿಸಿ ಅಂದಿನಿಂದ ಪಿಡುಗುಗಳಿಂದ ಸಮಾಜವನ್ನು ಪಾರು ಮಾಡಲು ಶ್ರಮಿಸಿದ್ದಾರೆ. ಪರಂಪರೆಯ ಭಾರತವಲ್ಲದೇ ಆಧುನಿಕ ಭಾರತೀಯ ಸಮಾಜದಲ್ಲೂ ಸಹ ಪರಂಪರೆಯ ವ್ಯಾಧಿಗಳು ನವನಾಗರಿಕತೆಯ ರೂಪ ಪಡೆದು ಕಾಡುತ್ತಿವೆ. ಪೆರಿಯಾರ್, ನಾರಾಯಣಗುರು, ಗಾಂಧೀಜಿ, ಮಹಾತ್ಮ ಪುಲೆ, ಅಂಬೇಡ್ಕರ್ ಮುಂತಾದವರು ಈ ಪಿಡುಗುಗಳನ್ನು ನಿವಾರಿಸಲು ಇನ್ನಿಲ್ಲದ ಪ್ರಯತ್ನಗಳನ್ನು ನಡೆಸಿದ್ದಾರೆ. ಇಂತಹ ಸುಧಾರಕರ ವ್ಯಕ್ತಿಚಿತ್ರಣಗಳನ್ನು ಅರವಿಂದ ಚೊಕ್ಕಾಡಿಯವರು ಈ ಕೃತಿಯಲ್ಲಿ ತುಂಬ ವಿಭಿನ್ನವಾಗಿ ನಿರೂಪಿಸುತ್ತಾರೆ. ಇಲ್ಲಿಯತನಕ ಬಂದಿರುವ ವ್ಯಕ್ತಿಚಿತ್ರಣದ ಪುಸ್ತಕಗಳಿಗಿಂತ ಚೊಕ್ಕಾಡಿಯವರು ಸಂಗ್ರಹಿಸಿರುವ ಮಾಹಿತಿ ಹಾಗೂ ಅದನ್ನು ನಿರೂಪಿಸಿರುವ ಪರಿ ವಿಶಿಷ್ಟವಾಗಿದ್ದು ಗಮನ ಸೆಳೆಯುತ್ತದೆ. ಸಾಮಾಜಿಕವಾಗಿ ತುಂಬ ಕಾಳಜಿಯನ್ನು ವ್ಯಕ್ತಪಡಿಸುವ ಇಲ್ಲಿನ ಬರಹಗಳು ಯಾವುದೇ ಅತಿ-ಮಿತಿಗಳನ್ನು ಹೇರಿಕೊಳ್ಳದೆ ಯಾವುದೇ ಹಿತಾಸಕ್ತಿಗಳಿಗೆ ಬಲಿಯಾಗದೆ ಸಮಗ್ರ ಮಾಹಿತಿಯನ್ನು ಮುಕ್ತವಾಗಿ, ವಸ್ತುನಿಷ್ಠವಾಗಿ ಕಟ್ಟಿಕೊಡುತ್ತವೆ. ಸುಧಾರಕರ ಬದುಕು-ಬವಣೆ, ಕನಸು, ಆಶಯ ಹಾಗೂ ಸಾಧನೆಗಳನ್ನು ಪ್ರಕಾಶಕರೇ ಹೇಳುವಂತೆ ಶಿಕ್ಷಕ-ವಿದ್ಯಾರ್ಥಿಗಳನ್ನು ಕೇಂದ್ರವಾಗಿಟ್ಟುಕೊಂಡು ರೂಪಿಸಿದಂತಿದೆ. ವ್ಯಕ್ತಿಚಿತ್ರಣಗಳಲ್ಲಿ ಕುಟುಂಬದ ಮಾಹಿತಿಗಳು, ವ್ಯಕ್ತಿತ್ವದ ಚಿತ್ರಣಗಳಲ್ಲಿ ಸಾರ್ವಜನಿಕ ಮಾಹಿತಿಗಳು ಇಲ್ಲಿ ತುಂಬಿಕೊಂಡಿವೆ.
©2024 Book Brahma Private Limited.