ಕೆ ರಮಾನಂದ
(06 June 1957)
ಡಾ. ಕೆ ರಮಾನಂದ ಅವರು ಮೈಸೂರಿನವರು. ಬೆಂಗಳೂರಿನ ಆಚಾರ್ಯ ಪಾಠಶಾಲಾ ಕಾಲೇಜಿನಲ್ಲಿ ಐಚ್ಛಿಕ ಕನ್ನಡದಲ್ಲಿ ಅತ್ಯುನ್ನತ ಅಂಕಗಳನ್ನು ಬಿ.ಎ ಪದವೀಧರರು. ಬೆಂಗಳೂರು ವಿಶ್ವವಿದ್ಯಾಲಯದಿಂದ 4ನೇ ರ್‍ಯಾಂಕ್ ನೊಂದಿಗೆ ಕನ್ನಡ ಎಂ.ಎ ಪದವೀಧರರು. ’ ವಿಜಯನಗರ ಕಾಲದ ಶಾಸನಗಳ ಸಾಂಸ್ಕೃತಿಕ ಅಧ್ಯಯನ' ಎಂಬುದು ಇವರ ಸಂಶೋಧನಾ ಮಹಾಪ್ರಬಂಧ ಸಲ್ಲಿಸಿ, ಪಿಎಚ್.ಡಿ ಪಡೆದಿದ್ದಾರೆ. ಹಂಪಿ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರು. ಆಕಾಶವಾಣಿ , ದೂರದರ್ಶನದಲ್ಲಿ ಇವರ ಚಿಂತನೆಗ್ಳೂ ಪ್ರಸಾರವಾಗಿವೆ. ಭಾರತೀಯ ವಿದ್ಯಾಭವನದಲ್ಲಿ ಸಂಶೋಧನ ವಿದ್ವಾಂಸರು. ಪ್ರಸ್ತುತ ಪ್ರತಿಷ್ಠಿತ ಸಿಂಧಿ ಕಾಲೇಜಿನಲ್ಲಿ ಪ್ರೊಫೆಸರ್ ಹಾಗೂ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದಾರೆ. ಕೃತಿಗಳು; ನೆಕ್ಚರ್ ಆಫ್ ಲವ್ ಕೃತಿ ಸೇರಿದಂತೆ ಅವರು 120 ಲೇಖನ, ...
READ MORE