‘ಸಾಧನೆಯ ಸಮುಚ್ಚಯ ಎಲ್. ಶಿವಲಿಂಗಪ್ಪ’ ಕೃತಿಯು ಎಸ್.ಸಿ. ಪಾಟೀಲ ಅವರು ಬರೆದ ವ್ಯಕ್ತಿಚಿತ್ರಣವಾಗಿದೆ. ಇಲ್ಲಿ ಎಲ್. ಶಿವಲಿಂಗಪ್ಪ ಅವರ ಕೆಲವು ಸಾಧನೆಗಳನ್ನು ಪರಿಚಯಿಸುವ ಕೆಲಸವನ್ನು ಈ ಕೃತಿಯು ಮಾಡಿದೆ. ಅಷ್ಟೇ ಅಲ್ಲದೇ ಅವರು ಬಿ.ಇ.ಎಂ.ಎಲ್, ಸಂಸ್ಥೆಯಲ್ಲಿದ್ದು ನಾಗರಿಕರಿಗಾಗಿ ಮಾಡಿದ್ದ ಸಮಾಜಮುಖಿ ಹೋರಾಟಗಳನ್ನೂ ತಿಳಿಸುತ್ತದೆ. ವಚನ ಸಾಹಿತ್ಯವನ್ನಾಯ್ದು ಅಲ್ಲಿಯ ವಚನಗಳ ಸಂದರ್ಭಗಳಿಗೆ ತಕ್ಕಂತೆ ಚಿತ್ರರಚನೆಯನ್ನು ಇವರು ಮಾಡಿದ್ದಾರೆ. ಸಿಂಗಾಪುರ, ನ್ಯೂಜಿಲೆಂಡ್, ಆಸ್ಟ್ರೇಲಿಯಾಗಳಲ್ಲಿ ಪ್ರವಾಸ ಮಾಡಿ ಅಲ್ಲಿನ ಕಲಾಗ್ಯಾಲರಿಗಳನ್ನು ಸಂದರ್ಶಿಸಿ ಜಗತ್ತಿನ ವೈವಿಧ್ಯಮಯ ಕಲಾಶೈಲಿಗಳ ಬಗ್ಗೆ ಮಾಹಿತಿ ತಿಳಿದುಕೊಂಡಿದ್ದಾರೆ. ಮೈಸೂರಿನ ರಾಮಾನುಜ ರಸ್ತೆಯಲ್ಲಿ ಕಲಾ ಗ್ಯಾಲರಿಯೊಂದನ್ನು ಸ್ಥಾಪಿಸಿದ್ದು ಮಾತ್ರವಲ್ಲದೆ ಇತರ ಕಲಾವಿದರನ್ನು ಗೌರವಿಸುವ ಉದ್ದೇಶದಿಂದ 'ಶಿವ ಕಲಾ ಪ್ರಶಸ್ತಿ'ಯನ್ನು ನೀಡಲು ಈ ವರ್ಷದಿಂದ (2010) ಪ್ರಾರಂಭಿಸಿದ್ದಾರೆ. ಪತ್ರಿಕೆಗಳಿಗೂ ಲೇಖನಗಳನ್ನು ಬರೆಯುತ್ತಿದ್ದು, ಅನೇಕ ಪುಸ್ತಕಗಳನ್ನೂ ಬರೆದು ಪ್ರಕಾಶಿಸಿದ್ದಾರೆ. ಮರಳಚ್ಚಿನ ಶಿಲ್ಪ, ಸಿಂಪರಣೆ ಚಿತ್ರ, ವರ್ಣಚಿತ್ರಗಳು, ರೇಖಾಚಿತ್ರಗಳು ಹೀಗೆ ಬಹುಮುಖ ಪ್ರತಿಭೆ ಇವರಲ್ಲಿದೆ ಎನ್ನುವುದನ್ನು ತಿಳಿಸುತ್ತದೆ.
(ಹೊಸತು, ಜನವರಿ 2011, ಪುಸ್ತಕದ ಪರಿಚಯ)
ಎಲ್. ಶಿವಲಿಂಗಪ್ಪ ಬಹುಶ್ರಮದಿಂದ ಚಿತ್ರಕಲೆ ಮತ್ತು ಅಭ್ಯಾಸಮಾಡಿದ್ದು ಎಲೆಮರೆಯ ಶಿಲ್ಪಕಲೆಯನ್ನು ಕಾಯಿಯಂತೆಯೇ ಉಳಿದಿದ್ದಾರೆ. ಅವರ ಕೆಲವು ಸಾಧನೆಗಳನ್ನು ಪರಿಚಯಿಸುವ ಈ ಪುಸ್ತಕವು ಇವರು ಬಿ.ಇ.ಎಂ.ಎಲ್, ಸಂಸ್ಥೆಯಲ್ಲಿದ್ದು ನಾಗರಿಕರಿಗಾಗಿ ಮಾಡಿದ್ದ ಸಮಾಜಮುಖಿ ಹೋರಾಟಗಳನ್ನೂ ತಿಳಿಸುತ್ತದೆ. ವಚನ ಸಾಹಿತ್ಯವನ್ನಾಯ್ದು ಅಲ್ಲಿಯ ವಚನಗಳ ಸಂದರ್ಭಗಳಿಗೆ ತಕ್ಕಂತೆ ಚಿತ್ರರಚನೆಯನ್ನು ಇವರು ಮಾಡಿದ್ದಾರೆ. ಸಿಂಗಾಪುರ, ನ್ಯೂಜಿಲೆಂಡ್, ಆಸ್ಟ್ರೇಲಿಯಾಗಳಲ್ಲಿ ಪ್ರವಾಸ ಮಾಡಿ ಅಲ್ಲಿನ ಕಲಾಗ್ಯಾಲರಿಗಳನ್ನು ಸಂದರ್ಶಿಸಿ ಜಗತ್ತಿನ ವೈವಿಧ್ಯಮಯ ಕಲಾಶೈಲಿಗಳ ಬಗ್ಗೆ ಮಾಹಿತಿ ತಿಳಿದುಕೊಂಡಿದ್ದಾರೆ. ಮೈಸೂರಿನ ರಾಮಾನುಜ ರಸ್ತೆಯಲ್ಲಿ ಕಲಾ ಗ್ಯಾಲರಿಯೊಂದನ್ನು ಸ್ಥಾಪಿಸಿದ್ದು ಮಾತ್ರವಲ್ಲದೆ ಇತರ ಕಲಾವಿದರನ್ನು ಗೌರವಿಸುವ ಉದ್ದೇಶದಿಂದ 'ಶಿವ ಕಲಾ ಪ್ರಶಸ್ತಿ'ಯನ್ನು ನೀಡಲು ಈ ವರ್ಷದಿಂದ (೨೦೧೦) ಪ್ರಾರಂಭಿಸಿದ್ದಾರೆ. ಪತ್ರಿಕೆಗಳಿಗೂ ಲೇಖನಗಳನ್ನು ಬರೆಯುತ್ತಿದ್ದು, ಅನೇಕ ಪುಸ್ತಕಗಳನ್ನೂ ಬರೆದು ಪ್ರಕಾಶಿಸಿದ್ದಾರೆ. ಮರಳಚ್ಚಿನ ಶಿಲ್ಪ, ಸಿಂಪರಣೆ ಚಿತ್ರ, ವರ್ಣಚಿತ್ರಗಳು, ರೇಖಾಚಿತ್ರಗಳು ಹೀಗೆ ಬಹುಮುಖ ಪ್ರತಿಭೆ ಇವರಲ್ಲಿದೆ. ಬಹುಕಾಲ ಬೆಂಗಳೂರಿನ ಆಚಾರ್ಯ ಚಿತ್ರಕಲಾ ಭವನವನ್ನು ಮುನ್ನಡೆಸಿದ ಕೀರ್ತಿ ಇವರದು.
©2024 Book Brahma Private Limited.