‘ರಮಣ ಮಹರ್ಷಿ’ ಚಿಂತಾಮಣಿ ಕೊಡ್ಲೆಕೆರೆ ಅವರ ವ್ಯಕ್ತಿಚಿತ್ರ ಮಾಲೆ ಕೃತಿಯಾಗಿದೆ. ಅವರ ಹುಟ್ಟು ಹೆಸರು ವೆಂಕಟರಮಣ ಅಯ್ಯರ್, ತಮಿಳುನಾಡಿನ ಮಧುರೆಯ ಹತ್ತಿರದ ತಿರುಚುರಿ ಎಂಬ ಗ್ರಾಮದಲ್ಲಿ ಸುಬ್ರಮಣ್ಯ ಅಯ್ಯರ್ ಮತ್ತು ಅಳಗಮ್ಮಾಳ್ ಎಂಬ ದಂಪತಿಗಳಿಗೆ ಜನಿಸಿದರು. ಅವರ ಪರಿವಾರದ ನಾಲ್ಕು ಮಕ್ಕಳಲ್ಲಿ ಇವರು ಎರಡನೆಯವರು. 1896ಲ್ಲಿ, 16ನೆಯ ವಯಸ್ಸಿನಲ್ಲಾದ ಆತ್ಮ ಪ್ರಜ್ಙಾನುಭವದ ನಂತರ, ಅವರು ಶಾಶ್ವತವಾಗಿ ಅರುಣಾಚಲಕ್ಕೆ ಹೊರಟು ಬಂದರು ಮತ್ತು ಶೇಷಾಯುಷ್ಯವನ್ನು ಇಲ್ಲಿಯೇ ಕಳೆದರು ಎನ್ನುವ ಮಾಹಿತಿಯನ್ನು ಈ ಕೃತಿ ಒಳಗೊಂಡಿದೆ.
©2024 Book Brahma Private Limited.