`ಪಂಡಿತ್ ಭೀಮಸೇನ ಜೋಶಿ’ ಅರವಿಂದ ಮುಳಗುಂದ ಅವರ ವ್ಯಕ್ತಿಚಿತ್ರಣ ಕೃತಿಯಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ಭೀಮಸೇನ ಜೋಶಿ ಭಾರತ ವಿಶ್ವಕ್ಕೆ ಕೊಟ್ಟ ಸಂಗೀತ ರತ್ನ. ಅದ್ಭುತ ಪ್ರತಿಭೆಯ ಹಿಂದೂಸ್ತಾನಿ ಸಂಗೀತಗಾರ. ಪಂಡಿತ್ ಭೀಮಸೇನ ಜೋಶಿ ಅವರ ಗಾಯನ ಹಲವು ಮಜಲುಗಳುಳ್ಳ ಒಂದು ಸೌಧವಿದ್ದಂತೆ. ಅದಕ್ಕೆ ಅದರದೇ ಆದ ಲಯವುಂಟು, ಸೌಂದರ್ಯವುಂಟು. ನಾವು ಆ ಸೌಧವನ್ನು ಮೆಚ್ಚುತ್ತ, ಅದರೊಳಗಿನ ಅಂದಚಂದವನ್ನು ಸವಿಯುತ್ತ ಭಾವಪರವಶರಾಗಿರುವಾಗಲೇ ಅತಿವೇಗದ ಒಂದು ಲಿಫ್ಟನ್ನು ಪ್ರವೇಶಿಸಿ ಮೇಲಿರುವ ಅನೇಕ ಮಜಲುಗಳನ್ನು ಕಂಡು ಅವಾಕ್ಕಾಗಿಬಿಡುತ್ತೇವೆ. ಅವರ ಧ್ವನಿಯ ಬೀಸು, ತಾನುಗಳ ಸೊಗಸು, ಶಬ್ದಗಳ ಭಾವಾಭಿನಯ, ಇವು ಯಾವುವೂ ಮಾತುಗಳಿಗೆ ದಕ್ಕುವಂಥವಲ್ಲ. ಪಂಡಿತಜಿ ಅವರಿಗೆ `ಭಾರತ ರತ್ನ' ದೊರೆತ ನಂತರ ಮೊಟ್ಟಮೊದಲ ಬಾರಿಗೆ ಕನ್ನಡದಲ್ಲಿ ಪ್ರಕಟವಾಗುತ್ತಿರುವ ಈ ಅಪರೂಪದ ಸಂಕಲನದಲ್ಲಿ ಅವರ ತಂದೆಯಿಂದ ಮೊದಲುಗೊಂಡು ಹತ್ತಿರದಿಂದ ಅವರನ್ನು ಬಲ್ಲ ಆತ್ಮೀಯರ ಬರಹಗಳಿದ್ದು ಅವರ ಸಿದ್ಧಿ-ಸಾಧನೆಗಳ ಸಮಗ್ರ ಚಿತ್ರವಿದೆ.
©2024 Book Brahma Private Limited.