ನೆಲದ ನೆನಪು

Author : ರಘುಶಂಖ ಭಾತಂಬ್ರಾ

Pages 512

₹ 450.00




Year of Publication: 2021
Published by: ಸಿದ್ದಾರೆಡ್ಡಿ ಪೌಂಡೇಶನ್ 
Address: ಎಂ.ಐ.ಜಿ-21, ಕೆ.ಎಚ್. ಬಿ ಕಾಲೊನಿ, ಬೀದರ-585401
Phone: 9886659849

Synopsys

ಸಂಪಾದಕ ರಘುಶಂಖ ಭಾತಂಬ್ರಾ ಹಾಗೂ ಪ್ರಧಾನ ಸಂಪಾದಕರಾದ ಗುರಮ್ಮ ಸಿದ್ದಾರೆಡ್ಡಿ ಅವರು ಸಂಪಾದಿಸಿರುವ ‘ನೆಲದ ನೆನಪು’ ಕೃತಿಯು ಸಾಧಕರ ಮಾದರಿ ಜೀವನ ಗಾಥೆಯಾಗಿದೆ. ಕೃತಿಗೆ ಮುನ್ನುಡಿ ಬರೆದಿರುವ ಶಿವಕುಮಾರ ಮಹಾಸ್ವಾಮಿಗಳು, ಭಗವಂತ ಮಾನವ ದೇಹವನ್ನು ದಯಪಾಲಿಸಿದ್ದು ಕೇವಲ ಜೀವಿಸುವುದಕ್ಕಾಗಿ ಅಲ್ಲ. ಬದುಕುವುದಕ್ಕಾಗಿ, ಹುಟ್ಟಿದವರೆಲ್ಲರೂ ಜೀವಿಸುತ್ತಾರೆ, ಆದರೆ ಎಲ್ಲರೂ ಬದುಕುವುದಿಲ್ಲ. ಬದುಕೊಂದೂ ಕಲೆಯಾಗಿದೆ. ಅದು ಎಲ್ಲರಿಗೂ ಬರುವುದಿಲ್ಲ. ಅದು ಎಲ್ಲರಿಗೆ ಅಸಾಧ್ಯವೆಂದೇ ”ಬಸವೇಶ್ವರರು ಲೇಸನಿಸಿಕೊಂಡು ಐದಿ ದಿನ, ನಾಲ್ಕು ದಿನ, ಮೂರು ದಿನ, ಎರಡು ದಿನ, ಕಡೆಗೆ ಒಂದು ದಿನ ಬದುಕಿದರೆ ಸಾಲದೆ” ಎಂದಿದ್ದಾರೆ ಎಂಬುದನ್ನು ಇಲ್ಲಿ ವಿವರಿಸುತ್ತಾರೆ.

ಈ ಕೃತಿಯು ನೆಲದ ನೆನಪಿನ ಅಣಿಮುತ್ತುಗಳು ಅನ್ನುವ 6 ಶೀರ್ಷಿಕೆಗಳನ್ನು ಒಳಗೊಂಡಿದ್ದು, ಅವುಗಳಲ್ಲಿ ಧಾರ್ಮಿಕ ಆರಾಧ್ಯರು; ಕನ್ನಡದ ಪಟ್ಟದ್ದೇವರು: ಚೆನ್ನಬಸವ ಪಟ್ಟದ್ದೇವರು ( ಬಸವರಾಜ ಬಲ್ಲೂರ), ವೇದಾಂತ ವಾಗೀಶ : ಪರಮಪೂಜ್ಯ ಶಿವಕುಮಾರ ಮಹಾಸ್ವಾಮಿಗಳು ( ಚಂದ್ರಪ್ಪ ಭತ್ತಮುರ್ಗೆ), ಬಸವಶ್ರೀ : ಪೂಜ್ಯಶ್ರೀ ಸಿದ್ಧರಾಮ ಶರಣರು ಬೆಲ್ದಾಳ(ಗಾಂಧೀಜಿ ಸಿ. ಮೊಳಕೇರ) ಮಂತ್ರಮಹರ್ಷಿ : ಪೂಜ್ಯಶ್ರೀ ಎನ್.ಬಿ. ರೆಡ್ಡಿ ಗುರೂಜಿ ( ಎಂ.ಜಿ. ದೇಶಪಾಂಡೆ), ಅಧ್ಯಾತ್ಮವನ್ನು ಅದ್ಭುತವಾಗಿಸಿದ ಬಿ.ಕೆ. ಪ್ರತಿಮಾ ಬಹೆನ್‌ಜಿ (ಶಿವಕುಮಾರ ಕೆ. ಸ್ವಾಮಿ), ಆಧ್ಯಾತ್ಮದ ಚೆಲುವು : ಅಕ್ಕ ಗಂಗಾಂಬಿಕಾ ಪಾಟೀಲ(ಸುನಿತಾ ಎಸ್ ದಾಡಗೆ), ಸ್ಥಳ ದಾಸೋಹಿ : ಕಾಶೀನಾಥರಾವ ವಿಶ್ವಕರ್ಮ - (ರಜಿಯಾ ಬಳಬಟ್ಟಿ, ಪುಣ್ಯವತಿ ವಿಸಾಜಿ), ವೇದಮೂರ್ತಿ : ಪೂಜ್ಯಶ್ರೀ ಶಾಂತಲಿಂಗ ಸ್ವಾಮಿ(ವಿದ್ಯಾವತಿ ಹಿರೇಮಠ). 2. ರಾಜಕೀಯ ಧುರೀಣರು: ಬೀದರ ಹುಲಿ : ರಾಮಚಂದ್ರ ವೀರಪ್ಪ( ಪಂ. ಬಸವರಾಜ ಕಿಟ್ಟಾ), ಲೋಕನಾಯಕ : ಭೀಮಣ್ಣ ಖಂಡ್ರ( ಚಂದ್ರಶೇಖರ ಬಿರಾದಾರ), ತತ್ವನಿಷ್ಠ ರಾಜಕಾರಣಿ : ಆರ್.ವಿ. ಬೀಡಪ (ಜಗನ್ನಾಥ ಕಮಲಾಪೂರ), ಅಜಾತ ಶತ್ರು : ಎನ್. ಧರಮಸಿಂಗ - (ವಿಶ್ವನಾಥ ರಡ್ಡಿ), ಕರ್ಮಯೋಗಿ : ಮಲ್ಲಿಕಾರ್ಜುನ ಖರ್ಗೆ(ಗಾಂಧೀಜಿ ಮೊಳಕೇರೆ), ಸಹಕಾರ ಧುರೀಣ : ಗುರುಪಾದಪ್ಪ ನಾಗಮಾರಪಳ್ಳಿ ( ಸ.ದಾ, ಜೋರಿ ಮುಡಬಿ), ಗ್ರಾಮೋದ್ಧಾರಕ : ಗೋಪಾಲರಾವ ಪಾಟೀಲ - (ದೇಶಾಂಶ ಹುಡಗಿ), ಕಲ್ಯಾಣದ ಕ್ರಾಂತಿಕಿರಣ: ವೈಜನಾಥ ಪಾಟೀಲ (ಶಿವಲಿಂಗ ಹೇಡೆ), ಸರಳ ಸಾತ್ವಿಕ : ನಾರಾಯಣರಾವ ಮನ್ನಳ್ಳಿ (ಎಂ .ಜಿ. ದೇಶಪಾಂಡೆ), ಪಾರದರ್ಶಕ ವ್ಯಕ್ತಿತ್ವ : ಶ್ರೀ ವೀರಶೆಟ್ಟಿ ಕುಶನೂರ (ಶ್ರೀಪಾದ ದೇಶಪಾಂಡೆ) ಜಿಲ್ಲೆಯ ಮೊದಲ ಶಾಸಕಿ: ಅನ್ನಪೂರ್ಣಾಬಾಯಿ ರಗಟೆ(ಮಹೇಶ್ವರಿ ಹೇಡೆ), ಜನನನಾಯಕ: ಪಿ.ಜಿ.ಆರ್. ಸಿಂಧೃ(ಗುರುಮ್ಮ ಸಿದ್ದಾರೆಡ್ಡಿ), ಸಹಕಾರ ರತ್ನ : ರತ್ನಾ ಕುಶನೂರ (ಪ್ರಾಂಜಲಾ ವಿ.ಬಿ), ಅಭಿವೃದ್ಧಿಯ ಹರಿಕಾರ : ಬಸವರಾಜ ಪಾಟೀಲ ಹುಮನಾಬಾದ (ಸೋಮನಾಥ ಯಾಳವಾರ), ಸಮಾಜವಾದಿ ನೇತಾರ : ಮಹಾದೇವಪ್ಪ ಮೀಸೆ( ಹಾ.ಜಿ ಪಾಶಾ). 3. ಸಾಮಾಜಿಕ ಚಿಂತಕರು: ಶ್ರೀಗಂಧದ ಕೊರಡು : ಪ್ರಭುರಾವ ಕಂಬಳಿವಾಲೆ (ರಘುಶಂಬ ಭಾತಂಬಾ), ಬೀದರಿನ ಭೀಷ್ಮ ಪಿತಾಮಹ : ಭೀಮಣ್ಣ ಮಜಗೆ ( ಗುರಮ್ಮ ಸಿದ್ಧಾರೆಡ್ಡಿ ), ಕನ್ನಡದ ತಾಯಿ : ಜಯದೇವಿತಾಯಿ ಲಿಗಾಡೆ (ಕಲ್ಯಾಣರಾವ ಜಿ. ಪಾಟೀಲ), ಬೀದರ ಅಭಿವೃದ್ಧಿ ಹರಿಕಾರ : ಸರದಾರ ಜೋಗಾಸಿಂಗ್(ರುಕ್ಕಓದ್ದಿನ್ ಇಸ್ಲಾಂಪೂರ), ಅಕ್ಷರ ಸೌಧ ಶಿಲ್ಪಿ : ಬಿ.ಟಿ. ಸಾಸನೂರು (ಪಂಚಾಕ್ಷರಿ ಪ್ರಕಟ) ಇತಿಹಾಸ ತಜ್ಞ: ಬಿ.ಆರ್. ಕೊಂಡಾ - (ಶ್ರೀನಿವಾಸ ಬಿರಾದಾರ), ಪರುತಜ್ಞ: ಆರ್.ವಿ. ಪಾಟೀಲ (ಲತಾ ಹೊನ್ನಪ್ಪಗೋಳ), ಚರಿತ್ರಾರ್ಹ ಸಾಧಕಿ : ಗುರಮ್ಮ ಸಿದ್ಧಾರೆಡ್ಡಿ(ಓಂಕಾರ ಕಾಕಡೆ), ಗರುಡ ಗಾಂಭೀರ್ಯದ ಡಾ. ಅಬ್ದುಲ್ ಖದೀರ್ (ಕೆ.ಎಸ್. ಚಳಕಾಪೂರ), ಅನುಪಮ ಸಾಧಕ : ಸುರೇಶ ಹೊನ್ನಪ್ಪಗೋಳ (ಗುರವ ಸಿದ್ಧಾರೆಡ್ಡಿ), ಮಣ್ಣಿಗೆ ಜೀವ ತುಂಬಿದ ವಿಜ್ಞಾನಿ : ರವಿ ದೇಶಮುಖ (ಕೆ.ಎಸ್. ಚಳಕಾಪೊರೆ), ವಿನಯಮೂರ್ತಿ : ಶ್ರೀಮತಿ ಲೀಲಾವತಿ ಚಾಕೋತ(ವಜ್ರಾ ಪಾಟೀಲ), ಶಿಕ್ಷಣಪ್ರೇಮಿ : ಪೂರ್ಣಿಮಾ ಜಿ.( ಸಂಗೀತಾ ಬಿರಾದಾರ), ಸಹನಾಮೂರ್ತಿ : ಎಸ್.ಜಿ. ಪಾಟೀಲ (ಸುನೀತಾ ನಾಡಿಗ), ಪರೋಪಕಾರಿ : ನಾಗಣ್ಣ ಜಾಬಶೆಟ್ಟಿ (ಭತಮುರ್ಗೇ ಚಂದ್ರಪ್ಪ), ಚಿನ್ನದ ಗಟ್ಟಿ : ಶಾಂತಾಬಾಯಿ ಹಲವಾಯಿ( ಭತಮುರ್ಗೇ ಚಂದ್ರಪ್ಪ), ನಿಸ್ವಾರ್ಥ ಸೇವಕಿ: ವಿಮಲಾಬಾಯಿ ಫುಲೇಕರ್(ಶೈಲಜಾ ಚಳಕಾಪುರೆ), ಮನೆಗೆದ್ದು, ಮಾರುಗೆದ್ದ - ನಾಗಶೆಟ್ಟಿ ಮೋದಿ( ಕೆ.ಎಸ್. ಚಳಕಾಪುರೆ), ಮಂದಿರಗಳ ಜೀರ್ಣೋದ್ಘಾರಕ : ಸಂಗಯ್ಯ ರೇಜಂತಲ್( ಚಂದ್ರಪ್ಪ ಭತಮುರ್ಗೆ), ಸದಾಚಾರಿ; ವೀರಶೆಟ್ಟಿ ಚಂದಾ (ಕಸ್ತೂರಿ ಪಟಪಳ್ಳಿ), ಆರೆಗೆ ದಾಸನಾಗದ ಚೆನ್ನಬಸಪ್ಪ ಹಾಲಹಳ್ಳಿ( ಗುರಮ್ಮ ಸಿದ್ಧಾರೆಡ್ಡಿ). 4. ಸಾಹಿತ್ಯ ಕಲಾರಾಧಕರು: ಪರಿಚಾರಕ ಶೆಟ್ಟಿ : ಪಂಚಾಕ್ಷರಿ ಪುಣ್ಯಶೆಟ್ಟಿ (ಚಂದ್ರಪ್ಪ ಛತಮುರ್ಗೆ), ಧೀಮಂತ ಪತ್ರಕರ್ತ : ಹಣಮಂತಪ್ಪ ಪಾಟೀಲ( ದೇವು ಪತ್ತಾರ), ದೇಸಿ ಸೊಗಡಿನ ಶ್ರೀ ದೇಶಾಂಶ ಹುಡಗಿ (ಕಾವ್ಯಶ್ರೀ ಮಹಾಗಾಂವಕರ), ಲಲಿತಾರವಿಂದ : ವೀರೇಂದ್ರ ಸಿಂಪಿ( ತುಡಮ ಧನರಾಜ್), ಸಾಹಿತ್ಯದ ಚಿಂತಕ : ಜಿ.ಬಿ. ವಿಸಾಜಿ ( ರೇಣುಕಾ ಎಂ. ಸ್ವಾಮಿ), ಬಹುಮುಖ ಪ್ರತಿಭಾವಂತ : ಎಂ.ಜಿ. ದೇಶಪಾಂಡೆ(ಹಂಶಕವಿ), ಕೆಂಪುಭೂಮಿಯ ದನಿ : ಶ್ಖಾಜಿ ಅರ್ಷದ ಅಲಿ (ಹೃಷಿಕೇಶ ಬಹದ್ದೂರ ದೇಸಾಯಿ), ಅಪರೂಪದ ವ್ಯಕ್ತಿತ್ವದ ಎಚ್.ಸಿ. ಖಡ್ಕೆ( ಎಂ.ಜಿ ದೇಶಪಾಂಡೆ) ಧರಿನಾಡ ಸೊಸೆ : ಯಶೋದಮ್ಮ ಸಿದ್ದಬಟ್ಟೆ (ಕಾವ್ಯಶ್ರೀ ಮಹಾಗಾಂವಕರ), ಶರಣರ ಪಡಿಯಚ್ಚು : ಬಸವರಾಜ ಮುಗಳಿ( ವೀರರೆಟ್ಟಿ ಎಂ. ಪಾಟೀಲ), ಕಲಾಸಂತ : ಚ.ಭಿ. ಸೋಮಶೆಟ್ಟಿ (ನಿಂಗದಳ್ಳಿ ಮಲ್ಲಿಕಾರ್ಜುನ) ನೃತ್ಯ ಪ್ರವೀಣೆ : ಉಷಾ ಪ್ರಭಾಕರ (ಬಿ. ಸುಬ್ರಮಣ ಪ್ರಭು), ನಾಟ್ಯ ರಾಣಿ : ರಾಣಿ ಸತ್ಯಮೂರ್ತಿ( ರಾಮಚಂದ ಗಣಾರ), ಫೋಟೋ ಇಂಜಿನಿಯರ್ : ಗುಲಾಂ ಮುಂತಾಕ( ದೇವು ಪತ್ತಾರ). 5. ವೈದ್ಯ ವಿಶಾರದರು: ಬಡವರ ಧನ್ವಂತರಿ : ಐಎಸ್ ಕೌಜಲಗಿ (ಪಂಚಾಕ್ಷರಿ ಪುಣ್ಯಶೆಟ್ಟಿ ), ಸ್ನೇಹಮಯಿ : ಕೆ.ಎಲ್. ಕೃಷ್ಣಮೂರ್ತಿ (ರಾಜಶ್ರೀ ರೆಡ್ಡಿ), ಅಪರೂಪದ ವ್ಯಕ್ತಿ : ಸಿದ್ದಾರೆಡ್ಡಿ (ಎಸ್.ಜಿ. ಪಾಟೀಲ), ಪರಿಪೂರ್ಣ ವೈದ್ಯೆ : ಲೀಲಾವತಿ ದೇವದಾಸ (ಎಸ್.ಎನ್. ಹಿರೇಮಠ), ಶಾಂತಸ್ವಭಾವದ ವಿಶ್ವನಾಥ ನಿಂಬೂರೆ ( ಶ್ರೇಯಾ ಎಸ್. ಗೌಡರ), ಹುಣ್ಣಿಮೆ ಚಂದ್ರ : ಚಂದ್ರಕಾಂತ ಗುದಗೆ - (ಶ್ರೀಕಾಂತ ಸ್ವಾಮಿ ಸೋಲಪುರ), ಸ್ತ್ರೀರೋಗ ತಜ್ಞೆ: ವಿಜಯ ಬಸೆಟ್ಟಿ ( ವಿದ್ಯಾವತಿ ಹಿರೇಮಠ). 6. ಮಾದರಿ ಆಡಳಿತಗಾರರು: ಮಹಾನ್ ಸಾಧಕಿ : (ಕೆ. ರತ್ನಪ್ರಭಾ ಶ್ರೀಮತಿ ಗುರಮ್ಮ ಸಿದ್ದಾರೆ ) ಪ್ರಾಮಾಣಿಕ ಅಧಿಕಾರಿ : ರಾಘವೇಂದ್ರ ಔರಾದಕರ್ (ಚಂದ್ರಪ್ಪ ಭತಮರ್ಗ) ,ರಾಜಸ್ವ ವೀರ : ಬಸವರಾಜ ನಳಗಾಂದೆ (ಶಿವಶಂಕರ ಟೋಕರ) ವಿಸ್ಮಯಕಾರಿ ವ್ಯಕ್ತಿತ್ವ : ಮುನಿಷ್‌ ಮೌಲ್ (ಹೃಷಿಕೇಶ ಬಹದ್ದೂರ ದೇಸಾಯಿ), ಬಿದ್ರಿಯ ಬುಲ್ಲೊಜರ್ : ಹರ್ಷಗುಪ್ತ - (ಹೆಚ್., ವಿ), ದಕ್ಷ ಅಧಿಕಾರಿ : ಸಂದೀಪ ಪಾಟೀಲ( ಶಶಿಧರ ಕೋಸ), ಜನಪ್ರಿಯ ಜಿಲ್ಲಾಧಿಕಾರಿ : ಹೆಚ್.ಆರ್. ಮಹಾದೇವ ( ಗುರಮ್ಮ ಸಿದ್ಧಾರೆಡ್ಡಿ), ಗ್ರಂಥಾಲಯ ಪ್ರಭೆ : ಸತೀಶಕುಮಾರ ಹೊಸಮನಿ ( ರಘುಶ ಭಾತಂಬ್ರಾ), ಸಕಾರಾತ್ಮಕ ಚಿಂತಕ : ಅಮರನಾಥ ಆರ್. ತಲವಾಡ ( ರಮುಶಂ ಭಾತಂಬ್ರಾ) ಚೈತನ್ಯಶ್ರೀ : ಟಿ.ಎಸ್. ರ - (ರಾಜಶ್ರೀ ರೆಡ್ಡಿ) ಅವರ ಜೀವನ ಚಿತ್ರಣಗಳನ್ನು ಒಳಗೊಂಡಿದೆ.

 

About the Author

ರಘುಶಂಖ ಭಾತಂಬ್ರಾ
(01 January 1970)

“ರಘುಶಂಖ” ಕಾವ್ಯನಾಮದಿಂದ ಪರಿಚಿತರಾಗಿರುವ ಡಾ. ರಘುನಾಥ  ಖರಾಬೆಯವರು ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಭಾತಂಬ್ರಾ ಗ್ರಾಮದವರು. ಶ್ರೀಮತಿ ಗುರಮ್ಮ ಶ್ರೀ ಶಂಕರೆಪ್ಪನವರ ಮಗನಾಗಿ 01-01-1970ರಲ್ಲಿ ಜನಿಸಿದರು. ಎಂ.ಎ; ಎಂ.ಪಿಎಲ್;  ಪಿಎಚ್.ಡಿ. ಪದವಿಧರರು. 1996ರಲ್ಲಿ ಗುಲಬರ್ಗಾ ಶ್ರೀ ಶರಣಬಸವೇಶ್ವರ ವಾಣಿಜ್ಯ ಕಾಲೇಜು; ಎಸ್.ಎಸ್. ಖೂಬಾ ಬಸವೇಶ್ವರ ಪದವಿ ಕಾಲೇಜು ಬಸವಕಲ್ಯಾಣದಲ್ಲಿ ಕನ್ನಡ ಉಪನ್ಯಾಸಕರಾಗಿ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಸದ್ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗರ್ಮಾತಾಂಡಾದಲ್ಲಿ ಸಹಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಡಾ. ಶರಣಬಸವಪ್ಪ ಅವರ ಜೀವನ ಸಾಧನೆ (ಎಂ.ಪಿಎಲ್.), ವಚನಕಾರರ ವೃತ್ತಿ ಮೌಲ್ಯಗಳು ಒಂದು ಅಧ್ಯಯನ ...

READ MORE

Related Books