ನಡೆದಾಡುವ ಕಲಾಕೋಶ

Author : ಎಚ್. ಎ. ಅನಿಲ್‌ಕುಮಾರ್

Pages 226

₹ 300.00




Year of Publication: 2011
Published by: ಸಂಯೋಜಿತ ಟ್ರಸ್ಟ್
Address: ನಂ. 16, 1ನೇ ಮುಖ್ಯರಸ್ತೆ, ವಿಧಾನ ಸೌಧ ಲೇಔಟ್, ಬೆಂಗಳೂರು- 560058

Synopsys

‘ನಡೆದಾಡುವ ಕಲಾಕೋಶ’ ಕಲಾವಿದ, ಲೇಖಕ ಎನ್. ಮರಿಶಾಮಾಚಾರ್ ಅವರ ಕುರಿತು ವಿವಿಧ ಕಲಾವಿದರು, ಲೇಖಕರು ಬರೆದ ಲೇಖನಗಳ ಸಂಕಲನ. ದೃಶ್ಯಕಲಾ ಜಗತ್ತಿನಲ್ಲಿ ನಡೆದಾಡುವ ಕಲಾಕೋಶವೆಂದೇ ಪ್ರಸಿದ್ಧರಾಗಿದ್ದ ಎನ್. ಮರಿಶಾಮಾಚಾರ್ ಅವರ ಬದುಕು- ಕಲೆ- ಬರೆಹಗಳ ಕುರಿತು ಹತ್ತಿರದಿಂದ ಅರಿತ ಸ್ನೇಹಿತರು, ಕಲಾವಿದರು ಇಲ್ಲಿ ಲೇಖನಗಳ ಮೂಲಕ ಆತ್ಮೀಯತೆಯನ್ನು ತೋರಿದ್ದಾರೆ. ಮರಿಶಾಮಾಚಾರ್ ಇವರ ಕಲಾಸೇವೆ, ಬದುಕು, ಬಣ್ಣಗಳ ಒಡನಾಟ ಸೇರಿದಂತೆ ಬಹುಮುಖ ಪ್ರತಿಭೆಯ ಬಗ್ಗೆ ವಿವರಗಳಿವೆ. ಕಲಾ ಅಭ್ಯಸಿಗಳಿಗೆ ಇದೊಂದು ಆಕರ ಗ್ರಂಥ ಎನ್ನಬಹುದು. ಈ ಕೃತಿಯನ್ನು ಅನಿಲ್ ಕುಮಾರ್ ಎಚ್.ಎ. ಅವರು ಸಂಪಾದಿಸಿದ್ದಾರೆ.

About the Author

ಎಚ್. ಎ. ಅನಿಲ್‌ಕುಮಾರ್

ಎಚ್.ಎ.ಅನಿಲ್ ಕುಮಾರ್ ಕಲಾ ವಿಮರ್ಶಕರು, ಚಿತ್ರಕಲಾ ಪರಿಷತ್ತಿನ ಕಲಾ ಇತಿಹಾಸ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಇವರು ಕಲೆಗೆ ಸಂಬಂಧಿಸಿದ ಬರಹಗಳ ಮೂಲಕ ಕನ್ನಡ ಮತ್ತು ಇಂಗ್ಲಿಷ್ ಓದುಗರಿಬ್ಬರಿಗೂ ಪರಿಚಿತರು. ಇವರಿಗೆ ದೆಹಲಿ ಕಲಾ ಶಾಲೆ ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ಕಲಾ ಶಿಕ್ಷಕರಿಗೆ ನೀಡುವ ಪ್ರತಿಷ್ಠಿತ ಬಿ.ಸಿ.ಸನ್ಯಾಲ್ ಪ್ರಶಸ್ತಿ ನೀಡಿ ಗೌರವಿಸಿದೆ. ಮೊದಲ ಬಾರಿಗೆ ಕರ್ನಾಟಕದ ಕಲಾ ಶಿಕ್ಷಕರೊಬ್ಬರಿಗೆ ಈ ಪ್ರಶಸ್ತಿ ದೊರೆತಿದೆ.  ಶಾಂತಿನಿಕೇತನದ ವಿಶ್ವಭಾರತಿ ವಿಶ್ವವಿದ್ಯಾಲಯದ ಕಲಾ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಚಿತ್ರಕಲಾ ಪರಿಷತ್ತಿನ ಹಳೆಯ ವಿದ್ಯಾರ್ಥಿಯೂ ಹೌದು. ಲಂಡನ್‌ನ ರಾಯಲ್ ಕಾಲೇಜ್‌ನಲ್ಲಿ ಸಮಕಾಲೀನ ಕ್ಯುರೇಶನ್ ...

READ MORE

Related Books