ಕುವೆಂಪುರವರ ಕುಪ್ಪಳಿ ಕವಿಶೈಲ ಎಂಬ ಪುಸ್ತಕವು ಕಡಿದಾಳ್ ಪ್ರಕಾಶ್ ಸಂಪಾದಿತ ಬರವಣಿಗೆಗಳ ಸಂಕಲನವಾಗಿದೆ. ಈ ಪುಸ್ತಕದಲ್ಲಿ ಕುವೆಂಪು, ತೇಜಸ್ವಿ ಪೋಟೋ ಗ್ಯಾಲರಿ, ಕುಪ್ಪಳಿ ಸುತ್ತಮುತ್ತಲಿನ ಪ್ರೇಕ್ಷಣೀಯ ಸ್ಥಳಗಳು, ಹತ್ತಿರದ ಪ್ರವಾಸಿ ತಾಣಗಳ ಮಾಹಿತಿಯನ್ನು ಒದಗಿಸಲಾಗಿದೆ.
ಕಡಿದಾಳ್ ಪ್ರಕಾಶ್ ಅವರು ತೀರ್ಥಹಳ್ಳಿ ತಾಲೂಕಿನ ಕಡದಾಳಿನವರು. 25.05.1953ರಂದು ಜನಿಸಿದ ಇವರ ತಾಯಿ ನಾಗವೇಣಮ್ಮ ಹಾಗೂ ತಂದೆ ಕೆ. ಎಸ್. ರಾಮಪ್ಪಗೌಡರ. ಹುಟ್ಟೂರು ಕಡಿದಾಳಿನಲ್ಲಿ ಪಾಥಮಿಕ, ಮೈಸೂರಿನಲ್ಲಿ ಮಾಧ್ಯಮಿಕ ಮತ್ತು ತೀರ್ಥಹಳ್ಳಿಯಲ್ಲಿ ಪ್ರೌಢ ಶಿಕ್ಷಣದ ಪಡೆದ ಬಳಿಕ ಶಿವಮೊಗ್ಗದ ಡಿವಿಎಸ್ ಈಜಿನಲ್ಲಿ ಪದವಿಯನ್ನೂ ಪಡೆದಿರುತ್ತಾರೆ. ವಿದ್ಯಾರ್ಥಿ ದಿಸೆಯಲ್ಲಿ ವಿ.ವಿ.ಯ ಬಾಲ್ ಬ್ಯಾಡ್ಮಿಂಟನ್ ತಂಡದ ನಾಯಕನಾಗಿ, ನಂತರ ಸಾಕಷ್ಟು ಕ್ರೀಡಾಕೂಟ ನಡೆಸಿದ ಅನುಭವವೂ ಇವರಲ್ಲಿದೆ. ಕುವೆಂಪು ಅವರೊಂದಿಗೆ ನಿಕಟ ಒಡನಾಟವಿದ್ದ ಹಾಗೂ ಕಡಿದಾಳ್ ಪರಿವಾರದಿಂದ ಬಂದ ಇವರಿಗೆ ಚಿಕ್ಕಂದಿನಿಂದಲೇ ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಹೆಚ್ಚಿನ ಆಸಕ್ತಿ. ಪುಸ್ತಕ ಪ್ರಕಟಣೆಯಲ್ಲಿ ಯಾವಾಗಲೂ ...
READ MORE