ಇಟಲಿಯ ಸ್ವಾತಂತ್ಯ್ರ ಹೋರಾಟಗಾರ ಜೊಸೆಫ್ ಮ್ಯಾಝಿನಿ ಹಾಗೂ ಭಾರತ ಸ್ವಾತಂತ್ಯ್ರಕ್ಕಾಗಿ ಹೋರಾಡಿದ ವೀರ ಸಾವರಕರ ಅವರ ಹೋರಾಟದ ಚಿತ್ರಣವನ್ನು ಕಟ್ಟಿಕೊಡುವ ಕಾದಂಬರಿ ಇದು. ಭಿ.ಪ. ಕಾಳೆ ಬರೆದಿದ್ದಾರೆ. ಸಾವರಕರ ಅವರೇ ಮ್ಯಾಝಿನಿ ಕೃತಿಯನ್ನು ಬರೆದಿದ್ದರು. ಈ ಕೃತಿಯು ಲೇಖಕರ (ಭಿ.ಪ. ಕಾಳೆ) ಬಳಿಯೇ ಇತ್ತು. ಬ್ರಿಟಿಷ್ ವಿರೋಧಿ ಸಾಹಿತ್ಯ ಪ್ರಕಟಿಸುವ ಸಂಶಯದಿಂದ ಬ್ರಿಟಿಷ್ ಅಧಿಕಾರಿಗಳು ಪ್ರೆಸ್ ಗೆ ಆಗಾಗ ಭೇಟಿ ನೀಡುತ್ತಿದ್ದು, ಒಂದು ದಿನ ಪ್ರೆಸ್ ನಲ್ಲಿರುವ ಕೆಲವರು ಈ ಕೃತಿಯನ್ನು ನಾಶ ಪಡಿಸಿದರು. ಹೀಗಾಗಿ, ಮ್ಯಾಝಿನಿ ಕೃತಿಯ ಸಂಫೂರ್ಣ ಅನುವಾದ ಅಲ್ಲದಿದ್ದರೂ ಅದರ ಭಾವಾರ್ಥಕ್ಕೆ ಧಕ್ಕೆಯಾಗದ ಹಾಗೆ ಮ್ಯಾಝಿನಿ ಕುರಿತು ಹಾಗೂ ವೀರ ಸಾವರಕರ ಕುರಿತು ಬರೆದಿದ್ದಾಗಿ ಲೇಖಕರು ಹೇಳಿಕೊಂಡಿದ್ದಾರೆ.
©2024 Book Brahma Private Limited.