‘ಮಂಕುತಿಮ್ಮನ ಕಗ್ಗ’ ದಂತಹ ಕೃತಿಯ ಮೂಲಕ ಸಂಸ್ಕೃತಿ, ಮೌಲ್ಯ, ಅಧ್ಯಾತ್ಮ, ತಾತ್ವಿಕ ಚಿಂತನೆ, ಜೀವನದರ್ಶನಗಳನ್ನು ಮಾಡಿಸಿದ ಸಾಹಿತಿ ಡಿ.ವಿ.ಜಿ. ಅವರು ಕನ್ನಡ ನಾಡು ನುಡಿಗೆ ದುಡಿದ ಸಾಹಿತಿಗಳನ್ನು ಪರಿಚಿಯಿಸಿದ್ದೇ ಈ ಕೃತಿ-ಸಾಹಿತ್ಯೋಪಾಸಕರು. ತಮ್ಮ ವ್ಯಕ್ತಿಗತ ಬದುಕನ್ನೂ ಮೀರಿ ಈ ಎಲ್ಲ ಮಹನೀಯರು ತಮ್ಮ ಕನ್ನಡ-ಕನ್ನಡಿಗರ ಅಭ್ಯುದಯಕ್ಕಾಗಿ ಕಳಕಳಿ ತೋರಿದವರು. ಕನ್ನಡ ಸಾಹಿತ್ಯದ ಮೂಲಕ ಹತ್ತು ಹಲವು ಕವಿ-ಸಾಹಿತಿಗಳನ್ನು ಪರಿಚಯಿಸಿದವರು. ಇಂತಹ ವ್ಯಕ್ತಿಗಳ ಪರಿಚಯವು ಕನ್ನಡ ನಾಡು-ನುಡಿಗೆ ಸಂದ ಗೌರವವಾಗಿದೆ. ಈ ಹಿನ್ನೆಲೆಯಲ್ಲಿ ಈ ಕೃತಿಯು ಕನ್ನಡ ಸಾಹಿತ್ಯಕ್ಕೆ ಒಂದು ಉತ್ತಮ ಸೇರ್ಪಡೆಯಾಗಿದೆ.
©2024 Book Brahma Private Limited.