ಹಾರಯಿಕೆಯ ಕವಿ ಪ್ರೊ. ವಸಂತ ಕುಷ್ಟಗಿ

Author : ಸವಿತಾ ಸಿರಗೋಜಿ

Pages 68

₹ 60.00




Year of Publication: 2010
Published by: ಶ್ರೀ ಬತ್ತೇರೇಶ ಪ್ರಕಾಶನ
Address: ಎಂ.ಐ.ಜಿ 26, ಆದರ್ಶನಗರ, ಮೊದಲನೆ ಹಂತ, ಗುಲಬರ್ಗಾ- 585105

Synopsys

‘ಹಾರಯಿಕೆಯ ಕವಿ: ಪ್ರೊ. ವಸಂತ ಕುಷ್ಟಗಿ’ ಹೈದರಾಬಾದ್ ಕರ್ನಾಟಕದ ನಾಲ್ಕೂ ಜಿಲ್ಲೆಗಳಲ್ಲಿ ನಡೆದಾಡುವ ವಿಶ್ವಕೋಶ ಎಂದು ಪ್ರಖ್ಯಾತಿ ಪಡೆದ ಡಾ. ವಸಂತ ಕುಷ್ಟಗಿ ಅವರ ಜೀವನ ಮತ್ತು ಕೃತಿಗಳ ಕುರಿತಾದ ಅಧ್ಯಯನಾತ್ಮಕ ಕೃತಿ.

ಲೇಖಕಿ ಸವಿತಾ ಸಿರಗೋಜಿ ಕೃತಿ ರಚಿಸಿದ್ದಾರೆ. ವಸಂತ ಕುಷ್ಟಗಿ ಅವರ ಜೀವನ ಮತ್ತು ಕೃತಿಗಳ ಬಗ್ಗೆ ತಲಸ್ಪರ್ಶಿ ಅಧ್ಯಯನವಿದೆ. ಅವರ ಜೀವನ ಧ್ಯೇಯಗಳು, ತಿರುವುಗಳು, ಹಾಗೂ ಸಾಹಿತ್ಯ ಕೃತಿಗಳ ಬಗ್ಗೆ ಲೇಖಕರು ನಯವಾಗಿ, ಎಳೆಎಳೆಯಾಗಿ ಬಿಡಿಸಿ, ಅನುಕ್ರಮವಾಗಿ ಜೋಡಿಸಿ, ಸುಂದರ ಚಿತ್ತಾರವಾಗುವಂತೆ ಹೆಣೆದಿದ್ದಾರೆ.

About the Author

ಸವಿತಾ ಸಿರಗೋಜಿ
(05 September 1968)

ಸವಿತಾ ಸಿರಗೋಜಿ ಅವರು ಮೂಲತಃ ಕಲಬುರಗಿ ಜಿಲ್ಲೆಯ ಸುರಪುರದವರು. ತಂದೆ- ವೀರಣ್ಣ, ತಾಯಿ- ಮಾಣಿಕ್ಯಬಾಯಿ. ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿರುವ ಅವರು ಶೃಂಗಾರ ಶಾಯಿರಿಗಳು (ಕವನ ಸಂಕಲನ), ಮಹಾವೀರ(ಜೀವನ ಚರಿತ್ರೆ), ಎಂ.ಪಿ.ಜಾಲಿ (ವ್ಯಕ್ತಿ ಚಿತ್ರಣ), ಕುಂಭಕರ್ಣನ ಒಕ್ಕಲು(ಲಲಿತ ಪ್ರಬಂಧ) ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ.  ...

READ MORE

Related Books