ದೀಪ್ತಿಶೃಂಗಗಳು

Author : ಎಸ್‌.ಆರ್‌. ರಾಮಸ್ವಾಮಿ

Pages 172

₹ 135.00




Year of Publication: 2017
Published by: ಸಾಹಿತ್ಯ ಸಿಂಧು ಪ್ರಕಾಶನ
Address: ಬೆಂಗಳೂರು

Synopsys

‘ದೀಪ್ತಿಶೃಂಗಗಳು’ ಲೇಖಕ ಎಸ್.ಆರ್. ರಾಮಸ್ವಾಮಿ ಅವರು ಬರೆದಿರುವ ವ್ಯಕ್ತಿಚಿತ್ರಣಗಳ ಸಂಕಲನ. ಡಿವಿಜಿ ಅವರ ಒಡನಾಡಿಗಳೂ ಆದ ರಾಮಸ್ವಾಮಿ ಅವರು ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯನ್ನು ಕಟ್ಟಿರೂಪಿಸಲು ಶ್ರಮಿಸಿದ ಪ್ರಮುಖರು. ಕೆಲವು ವರ್ಷಗಳ ಹಿಂದೆ ಪ್ರಕಟವಾಗಿದ್ದ ‘ದೀವಟಿಗೆಗಳು’ ಮತ್ತು ‘ದೀಪ್ತಿಮಂತರು’ ಕೃತಿಗಳ ಮೂಲಕ ಒಟ್ಟು 15 ಜನರ ಬದುಕನ್ನು ಕಟ್ಟಿಕೊಡಲು ಯತ್ನಿಸಿದ್ದರು. ‘ದೀಪ್ತಶೃಂಗಗಳು’ ಕೃತಿ ವ್ಯಕ್ತಿಚಿತ್ರಣ ಸರಣಿಯಲ್ಲಿ ಮೂರನೆಯದು. ಈ ಕೃತಿಯಲ್ಲಿ ವಿದ್ವಾಂಸರಾದ ಎನ್‌. ರಂಗನಾಥಶರ್ಮ, ಎಸ್‌.ಕೆ. ರಾಮಚಂದ್ರರಾವ್, ಅಧ್ಯಾತ್ಮವಿದ್ಯಾ ಪ್ರಸಾರಕ ವೇದಾಂತ ಸುಬ್ಬಯ್ಯ, ಸೇವಾಸಾಮ್ರಾಜ್ಯ ನಿರ್ಮಿಸಿದ ಬೆಳಗೆರೆ ಕೃಷ್ಣಶಾಸ್ತ್ರೀ, ಸಂಗೀತಕಲಾಪ್ರವರ್ತಕ ಎಸ್‌.ವಿ. ನಾರಾಯಣಸ್ವಾಮಿರಾವ್, ಸಮಾಜ ಸೇವಕ ಟಿ.ಆರ್. ಶಾಮಣ್ಣ, ಗ್ರಂಥಾಲಯ ವಿಜ್ಞಾನ ಪಿತಾಮಹ ಎಸ್.ಆರ್. ರಂಗನಾಥನ್ ಅವರ ವ್ಯಕ್ತಿತ್ವವನ್ನು ಸ್ಮರಿಸಲಾಗಿದೆ. ಸಾಧಕರ ಬದುಕು ಕಟ್ಟಿಕೊಡುವ ಪ್ರಯತ್ನದಲ್ಲಿ ಆ ಕಾಲದ ಸಮಾಜ, ವ್ಯಕ್ತಿತ್ವ ರೂಪುಗೊಳ್ಳಲು ಕಾರಣವಾದ ಅಂಶಗಳು, ಕುಟುಂಬದ ಪರಿಚಯವೂ ಈ ಕೃತಿಯಲ್ಲಿದೆ. ಬರಹಗಳಿಗೆ ಆಪ್ತತೆಯ ಸ್ಪರ್ಶ ನೀಡಿದೆ. ಇವರು ಬರೆಯುವ ವ್ಯಕ್ತಿಚಿತ್ರಣಗಳನ್ನು ಕೆಲವರು ಡಿವಿಜಿ ಅವರ ‘ಜ್ಞಾಪಕ ಚಿತ್ರಶಾಲೆ’ಗೆ ಹೋಲಿಸುತ್ತಾರೆ.

About the Author

ಎಸ್‌.ಆರ್‌. ರಾಮಸ್ವಾಮಿ

ನಾಡೋಜ ಎಸ್‌.ಆರ್‌.ರಾಮಸ್ವಾಮಿ ಅವರು ಪತ್ರಕರ್ತರಾಗಿ, ಲೇಖಕರಾಗಿ, ಚಿಂತಕರಾಗಿ, ವಿಮರ್ಶಕರಾಗಿ, ಸಾಮಾಜಿಕ ಕಾರ್ಯಕರ್ತರಾಗಿ ನಾಡಿನಲ್ಲಿ ಸುಪರಿಚಿತರು. ಮೂಲತಃ ಬೆಂಗಳೂರಿನವರೇ ಆದ ರಾಮಸ್ವಾಮಿ ಅವರು ಕನ್ನಡ, ತೆಲುಗು, ಸಂಸ್ಕೃತ, ಹಿಂದಿ, ಇಂಗ್ಲಿಷ್, ಜರ್ಮನ್, ಫ್ರೆಂಚ್ ಭಾಷೆಗಳಲ್ಲಿ ಪ್ರಾವೀಣ್ಯತೆ ಹೊಂದಿದವರು. 1950ರ ದಶಕದಲ್ಲಿ ಪತ್ರಿಕೋದ್ಯಮ ಪ್ರವೇಶಿಸಿದ ಇವರು, 1972 ರಿಂದ 79ರ ವರೆಗೆ ಸುಧಾ ವಾರಪತ್ರಿಕೆಯ ಮುಖ್ಯ ಉಪಸಂಪಾದಕರಾಗಿ ಸೇವೆ ಸಲ್ಲಿಸಿದರು. 1980ರಲ್ಲಿ ರಾಷ್ಟೋತ್ಥಾನ ಸಾಹಿತ್ಯ ಮತ್ತು ಉತ್ಥಾನ ಮಾಸಪತ್ರಿಕೆಯ ಗೌರವ ಪ್ರಧಾನ ಸಂಪಾದಕರಾದ ಇವರು ಇಂದಿಗೂ ಆ ಹುದ್ದೆಯಲ್ಲಿ ಸೇವಾನಿರತರಾಗಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸುಮಾರು 55 ಕ್ಕೂ ...

READ MORE

Related Books