ಅನುವಾದಕಿ, ಲೇಖಕಿ ಪದ್ಮಾವತಮ್ಮ ಅವರು 1949 ಮಾರ್ಚ್ 12 ರಂದು ಜನಿಸಿದರು. ಗಣಿತದಲ್ಲಿ ಸ್ನಾತಕೋತ್ತರ, ಪಿ.ಎಚ್.ಡಿ ಪದವಿ ಪಡೆದ ಅವರ ಮಾನಸ ಗಂಗೋತ್ರಿಯಲ್ಲಿ ಗಣಿತಶಾಸ್ತ್ರದ ಪ್ರಾಧ್ಯಾಪಕಿ ಹಾಗೂ ಛೇರ್‌ಮನ್. ವಿವಿಧ ದೇಶಗಳಲ್ಲಿ ಪ್ರಬಂಧ ಮಂಡನೆ ಮತ್ತು ಅತಿಥಿ ಉಪನ್ಯಾಸಕರಾಗಿ ಉಪನ್ಯಾಸ ನೀಡಿದ್ಧಾರೆ. “ಮಹಾವೀರಾಚಾರ್ಯರ “ಗಣಿತ ಸಾರಸಂಗ್ರಹ” , “ಧವಳ ಷಟ್ ಖಂಡಾಗಮ” ಅವರ ಅನುವಾದ ಕೃತಿಗಳು. ’ಜೀವ ಸ್ಥಾನ, ದ್ರವ್ಯಪಾರಮಾನುಗಮ, ಧವಳ ಷಟ್ಖಂಡಾಗಮ, ಫಿಲಾಸಫರ್ ಕರ್ಮ ಸೈಂಬಸ್ಟ್ಸ್ ಅವರ ಮತ್ತಿತರ ಕೃತಿಗಳು. ಶ್ರೀ ಸಿದ್ದಾಂತ ಕೀರ್ತಿ ಪ್ರಶಸ್ತಿ, ಸಾಧನ ಪುರಸ್ಕಾರ, ಚಂದ್ರಾಣಿ ಸ್ಟತಿ ಪುರಸ್ಕಾರ, ಶ್ರುತ ಸಂವರ್ಧನ ಪುರಸ್ಕಾರ, ಶ್ರೀ ಗೋಮಟೇಶ್ವರ ವಿದ್ಯಾಪೀಠ ರಾಷ್ಟ್ರೀಯ ಪುರಸ್ಕಾರ ಮುಂತಾದ ಪ್ರಶಸ್ತಿಗಳು ಅವರಿಗೆ ಲಭಿಸಿದೆ.