ಶಿವಮೊಗ್ಗಾ ಜಿಲ್ಲೆಯ ಅನವಟ್ಟಿ ಗ್ರಾಮದಲ್ಲಿ (ಜನನ: 1921) ಡಾ.ನಾಡಿಗ ಕೃಷ್ಣಮೂರ್ತಿ ಜನಿಸಿದರು.ತಂದೆ ನರಸಿಂಗರಾವ್ ನಾಡಿಗ, ತಾಯಿ ಕಮಲಾಬಾಯಿ. ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸ ಆನವಟ್ಟಿಯಲ್ಲಿ. ಶಿವಮೊಗ್ಗದಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸ. ನಂತರ ಕಾಲೇಜಿಗೆ ಸೇರಿದರು.
ಅಮೇರಿಕಾದ ಮಿಸ್ಸೋರಿಯಲ್ಲಿ ಪತ್ರಿಕೋದ್ಯಮ ಶಿಕ್ಷಣ ನಂತರ ಅವರು ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗದಲ್ಲಿ ಪ್ರವಾಚಕರಾದರು. ‘ಪತ್ರಿಕೋದ್ಯಮದ ಹುಟ್ಟು,ಬೆಳವಣಿಗೆ ಮತ್ತು ಅಭಿವೃದ್ಧಿ’ ಪ್ರೌಢ ಪ್ರಬಂಧವನ್ನು ಸಲ್ಲಿಸಿ ಡಾಕ್ಟರೇಟ್ ಪಡೆದರು. ವಿದೇಶಿ ವಿದ್ಯಾಲಯಗಳಿಗೆ ಅವರು ಸಂದರ್ಶಕ ಅಧ್ಯಾಪಕರಾಗಿ ಅನೇಕ ಉಪನ್ಯಾಸಗಳನ್ನು ಮಾಡಿದ್ದಾರೆ. ‘ಮಾನಸ ಗಂಗೋತ್ರಿ’ ಸಂಪಾದಿಸುತ್ತಿದ್ದ ಪ್ರಾಯೋಗಿಕ ಪತ್ರಿಕೆ. ಕರ್ನಾಟಕ ಪತ್ರಿಕಾ ಅಕಾಡೆಮಿಗೆ ಪ್ರಥಮ ಅಧ್ಯಕ್ಷರಾಗಿದ್ದರು.
Mahatma Gandhi and other martyers ಅಮೇರಿಕನ್ ಜರ್ನಲಿಜಂ (ಅನುವಾದ), ಶಾಂತಿ ಸಾರ್ವಭೌಮರು, ಕಮಲಾ ನೆಹರು, ಭಾರತದ ವೀರರಮಣಿಯರು ಮುಂತಾದವರ ಜೀವನ ಚರಿತ್ರೆ. ಭಾರತೀಯ ಪತ್ರಿಕೋದ್ಯಮ, ಪತ್ರಿಕೋದ್ಯಮ ಪರಿಚಯದ ಕೃತಿ, ‘ಸಾಗರದಾಚೆ ’ ಪ್ರವಾಸ ಸಾಹಿತ್ಯ ರಚನೆ. ಇಂಗ್ಲಿಷ್‌ನಲ್ಲೂ ಹಲವಾರು ಕೃತಿ ರಚಿಸಿದ್ದಾರೆ.
ಮೈಸೂರು ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಪ್ರಶಸ್ತಿ. ಕರ್ನಾಟಕ ಸರ್ಕಾರದ ಪ್ರಶಸ್ತಿ, ಲೋಕಶಿಕ್ಷಣ ಟ್ರಸ್ಟ್ ಪ್ರಶಸ್ತಿ, ಕೇಂದ್ರ ಶಿಕ್ಷಣ ಮತ್ತು ಸಂಸ್ಕೃತಿ ಇಲಾಖೆಯ ಬಹುಮಾನಗಳು. ಹಿಂದಿ ಸಾಹಿತ್ಯ ಪರಿಷತ್‌ನಿಂದ ‘ಪತ್ರಕಾರ ಶಿರೋಮಣಿ ’ ಬಿರುದು. ಅಖಿಲ ಭಾರತ ಪತ್ರಿಕೋದ್ಯಮ ಶಿಕ್ಷಣ ಸಂಘ ಸ್ಥಾಪನೆ. .ಸದಾ ಪ್ರವಾಸ ಪ್ರಿಯರು. ಇವರು 1983ರಲ್ಲಿ ನಿಧನರಾದರು.