.ಡಾ. ಶಾಂತಿನಾಥ ದಿಬ್ಬದ ಅವರು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸೋಮಾಪುರ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂಎ, ಪಿಎಚ್ ಡಿ ಪದವೀಧರರು. ಕರ್ನಾಟಕ ವಿ.ವಿ, ಗುಲಬರ್ಗಾ ವಿ.ವಿ. ಯಲ್ಲಿ ಪ್ರಾಧ್ಯಾಪಕರಾಗಿ ಹಾಗೂ ಬೆಳಗಾವಿಯ ಕಿತ್ತೂರು ರಾಣಿ ಚೆನ್ನಮ್ಮ ಮಹಿಳಾ ವಿ.ವಿ. ಯಲ್ಲಿ ಪ್ರಾಧ್ಯಾಪಕರಾಗಿ ನಂತರ ಕುಲಸಚಿವರಾಗಿ 2015 ರಲ್ಲಿ ನಿವೃತ್ತರಾದರು.
ಕೃತಿಗಳು: ಮಹಾಕವಿ ಪಂಪ ಮತ್ಯು ಅವನ ಕೃತಿಗಳು, ಪಂಪ ಭಾರತ ಸಾಂಸ್ಕೃತ ಅಧ್ಯಯನ (ಪಿಎಚ್ ಡಿ ಮಹಾಪ್ರಬಂಧ), ವಾಗ್ದೇವಿಯ ಭಂಡಾರದ ಮುದ್ರೆ, ಆಗಮಿಕ, ಜೀವಪರ-ಜನಪರ, ಜೈನ ಸಂಸ್ಕೃತಿ ಸಮೀಕ್ಷೆ (ಸಂಪಾದತ ಕೃತಿಗಳು) ಭ್ರಾಜಿಷ್ಣು ವಿರಚಿತ ಆರಾಧನಾ ಕರ್ಣಾಟಟೀಕಾ(ವಡ್ಡಾರಾಧನೆ), ಮುನಿ ವಂಶಾಭ್ಯುದಯ, ಸಮಸ್ತ ಭಾರತ, ಎಂ.ಎಂ. ಕಲಬುರ್ಗಿ ಅವರ ಜೈನ ಅಧ್ಯಯನಗಳು, ನಾಗಚಂದ್ರ ಸಂಪುಟ, ಸರ್ವಜ್ಞ, ರಾಮಚಂದ್ರ ಚರಿತ ಪುರಾಣ ಸಂಗ್ರಹ, ಸುವರ್ಣ ಪದ್ಮ, ಧವಲವಾಣಿ, ಶಾಂತಿಸಂದೇಶ, ಪಾರ್ಶ್ವಪ್ರಭೆ, ವೈಚಾರಿಕ ಲೇಖನಗಳು, ವೈಜ್ಞಾನಿಕ ಪ್ರಬಂಧಗಳು ಇತ್ಯಾದಿ. 11 ವಿದ್ಯಾರ್ಥಿಗಳಿಗೆ ಸಂಶೋಧನಾ ಮಾರ್ಗದರ್ಶನ ಹಾಗೂ 15 ವಿದ್ಯಾರ್ಥಿಗಳೀಗೆ ಎಂ.ಫಿಲ್ ಮಾರ್ಗದರ್ಶನ ಮಾಡಿದ್ದಾರೆ.
ಪ್ರಶಸ್ತಿ-ಗೌರವಗಳು: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (2011), ಗುಲಬರ್ಗಾ ವಿ.ವಿ. ರಾಜ್ಯೋತ್ಸವ ಪ್ರಶಸ್ತಿ, ಶ್ರವಣ ಬೆಳಗೊಳದ ಗೊಮ್ಮಟೇಶ ವಿದ್ಯಾಪೀಠ ಪುಸ್ಕಾರ, ಸಾಂಗ್ಲಿಯ ದಕ್ಷಿಣ ಭಾರತ ಜೈನ ಮಹಾಸಭಾ ಅವರ ಆಚಾರ್ಯ ಬಾಹುಬಲಿ ಕನ್ನಡ ಸಾಹಿತ್ಯ ಪ್ರಶಸ್ತಿ ಹಾಗೂ ಡಾ. ಆ. ನೇ. ಉಪಾಧ್ಯೆ ಸಂಶೋಧನಾ ಪ್ರಶಸ್ತಿ, ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತಿನ ಸ್ವಸ್ತಿಶ್ರೀ ದೇವೇಂದ್ರಕೀರ್ತಿ ದತ್ತಿ ಪ್ರಶಸ್ತಿ ಲಭಿಸಿವೆ.
ಹೊಣೆಗಾರಿಕೆ: ಯುಪಿಎಸ್ ಸಿ ಹಾಗೂ ಕೆಪಿಎಸ್ ಸಿ ಪರೀಕ್ಷಗಳ ಉತ್ತರಪತ್ರಿಕೆಗಳ ಮೌಲ್ಯಮಾಪನ, ಕೆಪಿಎಸ್ ಸಿ -ಕೆಎಎಸ್ ಹುದ್ದೆಗಳ ಸದಸ್ಯ ಸಮಿತಿಯ ವಿಷಯ ತಜ್ಞರು, ವಿವಿಧ ವಿ.ವಿ.ಗಳ ವಿವಿಧ ಸಮಿತಿಗಳ ಅಧ್ಯಕ್ಷ/ಸದಸ್ಯರು, ಸ್ನಾತಕ/ಸ್ನಾತಕೋತ್ತರ ಕನ್ನಡ ಪಠ್ಯಪುಸ್ತಕಗಳ ಸಮಿತಿಯ ಸದಸ್ಯರಾಗಿದ್ದರು. ಸದ್ಯ, 2017ರಿಂದ ಕರ್ನಾಟಕ ವಿ.ವಿ.ಯ ಆದಿ ಕವಿ ಪಂಪ ಅಧ್ಯಯನ ಪೀಠದ ಸಂಯೋಜಕರಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.