‘ನೆರಳು ಚೆಲ್ಲಿದ ಮಾಮರ’ ಶಿವರಾಂ ಪೈಲೂರು ಅವರ ಸಂಪಾದನೆಯ ವ್ಯಕ್ತಿ ಚಿತ್ರಣವಾಗಿದೆ. ಕಷ್ಟದಲ್ಲಿದ್ದವರಿಗೆ ಬಡವರಿಗೆ ಸದಾ ನೆರವಿನ ಹಸ್ತ ಚಾಚುತ್ತಿದ್ದ ಓರ್ವ ಸಹೃದಯಿ ಅವರಾಗಿದ್ದರು. ಪೈಲೂರರನ್ನು ಬಲ್ಲ ಅನೇಕ ಗೆಳೆಯರು, ಹಿತೈಷಿಗಳು ಹಾಗೂ ಅವರಿಂದ ಉಪಕೃತರಾದ ಕೆಲವರಿಂದ ವ್ಯಕ್ತವಾದ ಇಲ್ಲಿನ ಅಭಿಪ್ರಾಯಗಳನ್ನು ಗಮನಿಸಿದರೆ ಅವರ ಹಿರಿಯ ವ್ಯಕ್ತಿತ್ವದ ಪರಿಚಯವಾದೀತು.
ಹೊಸತು-2004- ಸಪ್ಟಂಬರ್
ಆಪ್ತವಲಯದಲ್ಲಿ ಮಂಗಳೂರು ''ಮಂಗಳೂರು ಅಜ್ಜ' ಎಂದೇ ಪ್ರಸಿದ್ಧರಾದ, ತಮ್ಮ ಜೀವಿತಾವಧಿಯಲ್ಲಿ ದಕ್ಷಿಣ ಕನ್ನಡಿಗರಿಗೆ ಅನೇಕ ಸದಭಿರುಚಿಯ ಪಾಠ ಕಲಿಸಿದ ಪೈಲೂರು ಲಕ್ಷ್ಮೀನಾರಾಯಣ ರಾವ್ ಅವರ ವ್ಯಕ್ತಿತ್ವದ ಪರಿಚಯ ನೀಡುವ ಕೃತಿ, ಜೇನು ವ್ಯವಸಾಯ, ದ.ಕ. ಕೃಷಿಕರ ಸಹಕಾರಿ ಮಾರಾಟ ಸಂಘದ ಸ್ಥಾಪನೆ, ಅಕ್ವೆರಿಯಂ ಮೀನು ಸಾಕಣೆ, ಅಂಚೆ ಚೀಟಿ ಸಂಗ್ರಹ ಇಂತಹ ಹಲವಾರು ಹವ್ಯಾಸಗಳನ್ನು ರೂಢಿಸಿಕೊಂಡಿದ್ದ ಇವರನ್ನು ಅರಿಯದ ಅಡಿಕೆ ಬೆಳೆಗಾರರೇ ಇಲ್ಲವೆಂದರೂ ಅತಿಶಯದ ಮಾತಲ್ಲ. ಕಷ್ಟದಲ್ಲಿದ್ದವರಿಗೆ ಬಡವರಿಗೆ ಸದಾ ನೆರವಿನ ಹಸ್ತ ಚಾಚುತ್ತಿದ್ದ ಓರ್ವ ಸಹೃದಯಿ ಅವರಾಗಿದ್ದರು. ಪೈಲೂರರನ್ನು ಬಲ್ಲ ಅನೇಕ ಗೆಳೆಯರು, ಹಿತೈಷಿಗಳು ಹಾಗೂ ಅವರಿಂದ ಉಪಕೃತರಾದ ಕೆಲವರಿಂದ ವ್ಯಕ್ತವಾದ ಇಲ್ಲಿನ ಅಭಿಪ್ರಾಯಗಳನ್ನು ಗಮನಿಸಿದರೆ ಅವರ ಹಿರಿಯ ವ್ಯಕ್ತಿತ್ವದ ಪರಿಚಯವಾದೀತು. ಇತ್ತೀಚೆಗೆ ನಿಧನರಾದ ಅವರ ನೆನಪಿಗೆ ಈ ಪುಸ್ತಕ.
©2024 Book Brahma Private Limited.