‘ಹಸಿರು ತೋರಣ’ ಎನ್.ಎಸ್. ಶ್ರೀಧರಮೂರ್ತಿ ಅವರ ವಿಶಿಷ್ಟ ಕೃತಿ. ವಿಶ್ವದ ಪ್ರಸಿದ್ಧ ಸಾಧಕರ ಜೀವನ ಚಿತ್ರಣವನ್ನು ವಿವರಿಸಲಾಗಿದೆ. ಸೂಕ್ಷ್ಮ ಒಳನೋಟದ ಮೂಲಕ ವ್ಯಕ್ತಿಗಳ ಸಾಧನೆಗಳನ್ನು ವಿಶ್ಲೇಷಿಸಿರುವ ರೀತಿ ಅನನ್ಯವಾಗಿದೆ. ವಿಭಿನ್ನ ಕ್ಷೇತ್ರಗಳಲ್ಲಿ ಅಪರಿಮಿತ ಕ್ರಿಯಾಶೀಲತೆ ಮೆರೆದ ವ್ಯಕ್ತಿಗಳ ಜೀವನದ ವಿವಿಧ ಮಜಲುಗಳನ್ನು ಓದುಗರಿಗೆ ಸುಲಭವಾಗಿ ದಕ್ಕುವ ರೀತಿಯಲ್ಲಿ ಸರಳ ಭಾಷೆಯಲ್ಲಿ ವಿವರಿಸಿರುವುದು ಇಲ್ಲಿಯ ವಿಶೇಷ.
ಜೀವನದಲ್ಲಿ ಎದುರಾಗುವ ಸವಾಲುಗಳಿಗೆ ಮುಖಾಮುಖಿಯಾಗಿ, ಸವಾಲಿಗೆ ಪ್ರತಿಸವಾಲೆಸೆದು ಬದುಕನ್ನು ಸಕಾರಾತ್ಮಕವಾಗಿ ನೋಡಿ ಸಾಧನೆಯ ಶಿಖರವನ್ನೇರುವ ಸಾಧಕರು ಇಲ್ಲಿ ಮಾರ್ಗದರ್ಶಿಗಳಾಗಿದ್ದಾರೆ. ಪ್ರತಿ ಲೇಖನವೂ ಓದುಗರ ಮನಮುಟ್ಟುವುದರ ಜೊತೆಗೆ, ಜೀವನಪ್ರೀತಿಯೆಡೆಗೆ ಸಾಧನೆ ಮಾಡಲೇಬೇಕೆನ್ನುವ ಛಲವನ್ನು ಮೂಡಿಸುವುದು ಗಮನಾರ್ಹ. ವಯಸ್ಸಿನ ತಾರತಮ್ಯವಿಲ್ಲದೇ ಪ್ರತಿಯೊಬ್ಬರೂ ಓದಲೇ ಬೇಕಾದ ಕೃತಿ ಇದು ಎನ್ನುತ್ತಾರೆ ಕೃತಿಗೆ ಬೆನ್ನುಡಿ ಬರೆದ ಡಾ. ಡಿ. ಸತೀಶ್ ಚಂದ್ರ.
©2024 Book Brahma Private Limited.