ಲೇಖಕ ಸಿ.ಎಸ್. ಆನಂದ ಅವರ ಕೃತಿ-ಬಸವನಾಡಿನ ಬೆಳಕು. ವಿವಿಧ ಧಾರ್ಮಿಕ ಗಣ್ಯರ ಜೀವನ ಸಾಧನೆಯನ್ನು ಬಣ್ಣಿಸಿದ್ದಾರೆ. ಹಿರಿಯ ಸಾಹಿತಿ ಡಾ. ಸೋಮನಾಥ ಯಾಳವಾರ ಅವರು ಮುನ್ನುಡಿ ಹಾಗೂ ವಿಮರ್ಶಕ ಡಾ. ಚನ್ನಪ್ಪ ಕಟ್ಟಿ ಬೆನ್ನು ಡಿ ಬರೆದಿದ್ದಾರೆ.
ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲ್ಲೂಕಿನ ಅವಿಮುಕ್ತ ಸುಕ್ಷೇತ್ರ ಯರನಾಳ ವಿರಕ್ತ ಮಠದ ಭವ್ಯ ಪರಂಪರೆಯನ್ನು, ಜ್ಞಾನದಾಸೋಹಿ ಪರಮಪೂಜ್ಯ ಶ್ರೀ ಬಂಥನಾಳ ಸಂಗನಬಸವ ಶಿವಯೋಗಿಗಳು, ತ್ರಿಕಾಲಜ್ಞಾನಿ ಪರಮಪೂಜ್ಯ ಶ್ರೀ ದಯಾನಂದ ಶಿವಯೋಗಿಗಳು ಹಾಗೂ ಸದ್ಯದ ಶ್ರೀಮಠದ ಪೀಠಾಧಿಕಾರಿ ಕಾಯಕಯೋಗಿ ಪರಮಪೂಜ್ಯ ಶ್ರೀ ಗುರು ಸಂಗನಬಸವ ಮಹಾಸ್ವಾಮಿಗಳ ಕುರಿತ ಚಿತ್ರಣಗಳಿವೆ. ಗುರುಗಳ ಸಂಪರ್ಕದಲ್ಲಿದ್ದು, ಅವರ ಸ್ವಭಾವ, ಜೀವನ ಶೈಲಿ, ಸಾಧನೆ ಮತ್ತು ಸಿದ್ದಿಗಳನ್ನು ತುಂಬಾ ಹತ್ತಿರದಿಂದ ಕಂಡು, ಅನುಭವಿಸಿ, ಆತ್ಮೀಯವಾಗಿ ಅಕ್ಷರ ರೂಪದಲ್ಲಿ ಅನಾವರಣಗೊಳಿಸಿದ ನುಡಿ ಚಿತ್ರಣ ಇದಾಗಿದೆ.
ಎರಡನೇ ಭಾಗದಲ್ಲಿ ಆ ಪೂಜ್ಯರ ಚಿತ್ರಣವನ್ನು ಜಾನಪದ ತ್ರಿಪದಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಇದು ಜಾನಪದ ತ್ರಿಪದಿಗಳ ಸಂಕಲನವೂ ಹೌದು. ಅವರಿಗೆ ತ್ರಿಪದಿಯ ಲಯವೂ ಚನ್ನಾಗಿ ಒಲಿದಿದೆ ಎನ್ನುವುದಕ್ಕೆ ಈ ಕೃತಿಯೇ ಉತ್ತಮ ನಿದರ್ಶನ. ಒಂದರ್ಥದಲ್ಲಿ ಈ ಕೃತಿ ಗದ್ಯ ಪದ್ಯಗಳ ಮಿಶ್ರಣದ ಚಂಪೂವಿನಂತೆ ಇದೆ. ಪೂಜ್ಯರ ಅಸಾಮಾನ್ಯ, ಅಪರೂಪದ ವ್ಯಕ್ತಿತ್ವವನ್ನು "ಬಸವನಾಡಿನ ಬೆಳಕು" ಕೃತಿ ಚೆನ್ನಾಗಿ ಚಿತ್ರಿಸುತ್ತದೆ.
©2024 Book Brahma Private Limited.