ವಿಮುಕ್ತೆ

Author : ಅಜಯ್ ವರ್ಮಾ ಅಲ್ಲೂರಿ

Pages 178

₹ 150.00




Year of Publication: 2019
Published by: ಪಲ್ಲವ ಪ್ರಕಾಶನ
Address: ಚನ್ನಪಟ್ಟಣ ಅಂಚೆ, ಎಮ್ಮಿಗನೂರು (ವಯಾ) ಬಳ್ಳಾರಿ-583113
Phone: 08394-228567 /9480728393

Synopsys

ರಾಮಾಯಣದ ಅಲಕ್ಷಿತ ಸ್ತ್ರೀಪಾತ್ರಗಳ ಅಸ್ಮಿತೆಯನ್ನು ಸೀತೆಯ ಮುಖೇನ ಕಟ್ಟಿಕೊಡುವ ‘ವಿಮಕ್ತ’ ಎಂಬ ತೆಲುಗು ಕೃತಿಯ ಮೂಲ ಲೇಖಕಿ ಪೋಪೂರಿ ಲಲಿತಕುಮಾರಿ, ಓಲ್ಗಾ ಎಂಬುದು ಅವರ ಕಾವ್ಯನಾಮ. ಈ ಕೃತಿಗೆ 2015 ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾದೆಮಿ ಪ್ರಶಸ್ತಿ ಸಂದಿದೆ. ರಾಮಾಯಣವನ್ನು ಸ್ತ್ರೀವಾದಿ ದೃಷ್ಟಿಕೋನದಿಂದ ವಿಶ್ಲೇಷಿಸಿರುವ ಈ ಮಹತ್ವದ ಕೃತಿಯನ್ನು ‘ವಿಮುಕ್ತೆ’ ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಲಾಗಿದೆ.

ಓಲ್ಗಾ ಅವರ ಈ ಕೃತಿಯ ವೈಶಿಷ್ಟ್ಯ ಇರುವುದು ಇಲ್ಲಿನ ಕಥೆಗಳುದ್ದಕ್ಕೂ ಅವರು ಕಾಲ್ಪನಿಕವಾಗಿ ಕಟ್ಟಿಕೊಡುವ ಸಂಭಾಷಣೆಗಳಲ್ಲಿ. ಸೋದರೀ ಭಾವವೇ ಪ್ರಧಾನವಾದ ಹೆಂಗೆಳೆಯರ ಬಿಚ್ಚುಮನದ ಆಪ್ತ ಮಾತುಕತೆಯಲ್ಲಿ. ಜೀವನ ಸೌಂಧರ್ಯದ ನಿಜ ಅರ್ಥವನ್ನು ಸೀತೆಗೆ ತಿಳಿಪಡಿಸುವ ಶೂರ್ಪನಖಿ,  'ಎಂದೂ ಯಾವ ವಿಚಾರಣೆಗೂ ಒಪ್ಪದಿರು ಸೀತಾ, ಅಧಿಕಾರಕ್ಕೆ ಶರಣಾಗದಿರು' ಎನ್ನುವ ಅಹಲ್ಯೆ, ಹೆಣ್ಣಾಗಿ ಹುಟ್ಟಿದವಳಿಗೆ ಪಾತಿವ್ರತ್ಯ ಮತ್ತು ತಾಯ್ತನವೆಂಬುವು ಮರಳಮಡಿಕೆಯಿದ್ದಂತೆ ಎನ್ನುವ ರೇಣುಕೆ, ಎಲ್ಲ ದುಃಖಗಳಿಗೂ ಮೂಲ ಅಧಿಕಾರವೆಂದು-ಅದನ್ನು ಪಡೆಯಬೇಕು ಮತ್ತೆ ಬಿಡಬೇಕು ಎಂದು ಹೇಳುವ ಊರ್ಮಿಳೆ, ಹೆಣ್ಣು ಅಲಂಕರಣೆ ಮಾಡಿಕೊಳ್ಳುವುದು ಗಂಡನಿಗಾಗಿ ಅಲ್ಲ-ತನಗಾಗಿ, ತನ್ನ ದೇಹವನ್ನು ಗೌರವಿಸುವುದಕ್ಕಾಗಿ ಎಂದು ಹೇಳುವ ಮಂಡೋದರಿ, ಈ ಎಲ್ಲಾ ಆಪ್ತ ಮಾತುಗಳು ಸೀತೆಗೆ ತಾನು ಇದುವರೆಗು ಯೋಚಿಸಿರದ ಬದುಕಿನ ಬೇರೊಂದು ಪಾರ್ಶ್ವದ ವಾಸ್ತವಗಳನ್ನು ತೋರಿಸುತ್ತಾ ಆಕೆಗೆ ರಾಮನಿಂದ ‘ವಿಮುಕ್ತೆ’ಯಾಗಲು ಪ್ರೇರೇಪಿಸುತ್ತವೆ.

About the Author

ಅಜಯ್ ವರ್ಮಾ ಅಲ್ಲೂರಿ
(07 September 1996)

ಯುವ ಲೇಖಕ, ಅನುವಾದಕ ಅಜಯ್ ವರ್ಮಾ ಅಲ್ಲೂರಿ ಅವರು ಮೂಲತಃ ರಾಯಚೂರು ಜಿಲ್ಲೆಯ ಸಿಂಧನೂರಿನವರು. ಕಾಲೇಜುದಿನಗಳಿಂದ ಸಾಹಿತ್ಯಾಸಕ್ತಿ ಬೆಳೆಸಿಕೊಂಡ ಅಜಯ್, ಕ್ರೈಸ್ಟ್ ಕಾಲೇಜಿನ ಬೇಂದ್ರೆ ಕಾವ್ಯ ಸ್ಪರ್ಧೆ ಮತ್ತು ಅ.ನ.ಕೃ.ಕಥಾ ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಗಳಿಸಿದ್ದಾರೆ. ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿರುವ ಅಜಯ್ ವರ್ಮಾ ಅಲ್ಲೂರಿಯವರ ಮನೆ ಭಾಷೆ ತೆಲುಗು.  ಎರಡೂ ಭಾಷೆಗಳಲ್ಲೂ ಹಿಡಿತ ಸಾಧಿಸಿರುವ ಅವರು ಕನ್ನಡದ ಕವಿತೆಗಳನ್ನು ತೆಲುಗಿಗೆ ಅನುವಾದಿಸಿದ್ದಾರೆ. ಜೊತೆಗೆ ತೆಲುಗಿನ ಕೃತಿಗಳನ್ನೂ ಕನ್ನಡೀಕರಿಸಿದ್ದಾರೆ. 'ಗಗನಸಿಂಧು',  'ಡಯಾನಾ ಮರ' ಮತ್ತು ಕನ್ನಡ ಕವಿತೆಗಳ ತೆಲುಗು ಅನುವಾದ ಕೃತಿ  'ಕಲಲ ಕನ್ನೀಟಿ ಪಾಟ' ಪ್ರಕಟಗೊಂಡಿವೆ.  ಕಳೆದ ಎರಡು-ಮೂರು ...

READ MORE

Reviews

ಹೃದಯಕ್ಕೆ ಹತ್ತಿರವಾಗುವ ಕಾವ್ಯಾತ್ಮಕ ಶೈಲಿಯ ಕಥಾಸಂಕಲನ ’ವಿಮುಕ್ತೆ’

ನನ್ನ ಸುತ್ತಲಿನವರೊಡನೆ ನನಗಿದ್ದ ಸಂಬಂಧದಲ್ಲಿಯ ಅಧಿಕಾರವನ್ನು ಗುರುತಿಸಿದಾಗ ನನಗೆ ಎಲ್ಲವೂ ಅರ್ಥವಾದ ಭಾವನೆಯುಂಟಾಯಿತು, ಎಲ್ಲ ದುಃಖಗಳಿಗೂ ಮೂಲ ಕಾರಣ ಆಧಿಕಾರವೇ ಅಕ್ಕಾ. ಈ ಅಧಿಕಾರವನ್ನು ನಾವು ಪಡೆಯಬೇಕು. ಬಿಡಬೇಕು. ನಾನು ಯಾರ ಅಧಿಕಾರಕ್ಕೂ ಆಧೀನಳಾಗಲಾರೆ. ನನ್ನ ಅಧಿಕಾರದಿಂದ ಯಾರನ್ನೂ ಬಂಧಿಸಲಾರೆ. ಆಗ ನನ್ನನ್ನು ನಾನು ವಿಮುಕ್ತಳನಾಗಿಸಿಕೊಂಡ ಭಾವನೆಯುಂಟಾಗುತ್ತದೆ. ನನ್ನೊಳಗೆ ಅಮಿತವಾದ ಆನಂದ, ಹೇಳಲಾರದಷ್ಟು ಶಾಂತಿ, ಅನಂತ ಪ್ರೀತಿ, ಹೇಳಲಾರದಷ್ಟು ಅನುಕಂಪ ರಾಮಾಯಣದ ಸ್ತ್ರೀ ಪಾತ್ರ ಊರ್ಮಿಳೆ ಹೇಳುವ ಮೇಲಿನ ಮಾತುಗಳು ಆಜಯ ವರ್ಮಾ ಆರಿಯವರು ಇತ್ತೀಚಿಗೆ ಕನ್ನಡಕ್ಕೆ ಆನುವಾದಿಸಿರುವ ತೆಲುಗಿನ ಶುದ್ದ ಸ್ತ್ರೀವಾದಿ ಲೇಖಕಿ ಓಲ್ಗಾ ಅವರ 'ವಿಮುಕ್ತೆ' ಎಂಬ ಕಥಾ ಸಂಕಲನದ ಮುಖ್ಯ ಆಶಯದ ಮೇಲೆ ಪೋಕಸ್ ಮಾಡುವಂತಹ ವಾಕ್ಯಗಳು. ಶತ ಶತಮಾನಗಳಿಂದ ಸಮಾಜದಲ್ಲಿ ಕಡೆಗಣಿಸಲ್ಪಟ್ಟು ಶೋಷಣೆಗೆ ತಮ್ಮನ್ನು ಒತ್ತಿಕೊಳ್ಳುತ್ತಲೇ ಬಂದ ಕೇವಲ ಸ್ತ್ರೀಯರು ಮಾತ್ರವಲ್ಲದೆ ಇಡೀ ಮನುಷ್ಯ ವರ್ಗಕ್ಕೆ ಅನ್ವಯಿಸುವಂತಹ ಮಾನತಾವಾದವೂ ಇಲ್ಲಿದೆ. ಮನುಷ್ಯರು ತಮ್ಮ ವೈಯಕ್ತಿಕ ಸ್ವಾತಂತ್ರ ವನ್ನು ತಮ್ಮಲ್ಲಿ ಇಟ್ಟುಕೊಂಡು ಇನ್ನೊಬ್ಬರ ಮೇಲೆ ಅದನ್ನು ಎಂದೂ ಪ್ರಯೋಗಿಸದೇ ಇರುವ ಎಚ್ಚರವನ್ನೂ ವಹಿಸಿಕೊಂಡರೆ ಸಮಾನತೆಯ ಆಧಾರದ ಮೇಲೆ ನಿಂತ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ. ಪ್ರತಿಯೊಬ್ಬನ ಮನಸ್ಸಿನಲ್ಲೂ ಸಹಾನುಭೂತಿ ಎಂಬ ವರಾನವೀಯ ಮೌಲ್ಯ ಸ್ಥಾನ ಪಡೆಯುತ್ತದೆ. ಇದು ಅಧಿಕಾರ ಸಂಬಂಧಗಳ ಕುರಿತಾದ ರಾಜಕೀಯ ನೀತಿಯೂ ಹೌದು. 

'ವಿಮುಕ್ತೆ’ ಆರು ಸಣ್ಣ ಕಥೆಗಳನ್ನು ಒಳಗೊಂಡಿರುವ ಒಂದು ಕಥಾಸಂಕಲನ, ರಾಮಾಯಣದ ಸ್ತ್ರೀಪಾತ್ರಗಳ ಮರು ಓದು ಮತ್ತು ಮಾನಸಿಕ ವಿಶ್ಲೇಷಣೆಗಳು ಸೀತೆ ಮತ್ತು ಆ ಪಾತ್ರಗಳ ಮುಖಾಮುಖಿಗಳ ಮೂಲಕ ಇಲ್ಲಿವೆ. ಸೀತೆಯ ಜೀವನದ ಕೊನೆಯ ಕ್ಷಣಗಳಲ್ಲಿ ವಾಲ್ಮೀಕಿಯಾಶ್ರಮದಲ್ಲಿದ್ದಾಗ ಆಕೆಗೆ ನೆನಪಾಗುವ ಈ ಭೇಟಿಗಳೇ ಕಥೆಗಳ ಪ್ರಧಾನ ವಸ್ತು ಮತ್ತು ಒಳನೋಟಗಳು. ಕವಿ ವಾಲ್ಮೀಕಿ ನೀಡಿದ ಸ್ಥೂಲ ವಿವರಗಳನ್ನು ಆಧಾರವಾಗಿ ತೆಗೆದುಕೊಂಡು ಈ ಪಾತ್ರಗಳು ತಮ್ಮ ತಮ್ಮ ಜೀವನದಲ್ಲಿ ಎದುರಿಸಿದ ಸಂಕಷ್ಟಗಳ ಸನ್ನಿವೇಶಗಳಲ್ಲಿ ಹೇಗೆ ಆಲೋಚಿಸಿರಬಹುದು ಎಂಬ ಕಥೆಗಾರ್ತಿಯ ಕಲ್ಪನೆಗಳೇ ಈ ಕಥೆಗಳ ಜೀವಾಳ.

’ಮೊದಲ ಕಥ ಸಮಾಗಮ'ದಲ್ಲಿ ಈ ಭೇಟಿ ನೇರವಾಗಿಯೇ ನಡೆದರೆ ' ಮೃಣ್ಮಯ ನಾದ'ದಲ್ಲಿ ಅಹಲ್ಯೆ, 'ಮರಳ ಮಡಕೆ'ಯಲ್ಲಿ ರೇಣುಕೆ, 'ವಿಮುಕ್ತಿ'ಯಲ್ಲಿ ಊರ್ಮಿಳೆ, ಮತ್ತು ಒಂದು ಮುಕ್ತ ಸಮಾಜ ಸ್ಥಾಪನೆಯಾಗಬೇಕು ಎಂಬುದು. ಮುಕ್ತ ಲೈಂಗಿಕ ಸಂಬಂಧಗಳಿಂದ ಆಗಬಹುದಾದ ಅರಾಜಕತೆ-ಆನಾಹುತಗಳು ಆದೂ ಇಂದಿನ ವೈಜ್ಞಾನಿಕ ಸೌಲಭ್ಯ ಸಂಪದ್ಭರಿತ ಜಗತ್ತಿನಲ್ಲಿ ಏಡ್ಸ್‌ನಂಥ ಮಾರಕ ರೋಗಗಳಿಗೆ ಜನರು ಬಲಿಯಾಗುತ್ತಿರುವ ದಿನಗಳಲ್ಲಿ ಕಲ್ಪನೆಗು ನಿಲುಕುವಂಥದ್ದಲ್ಲ. ಸ್ತ್ರೀಯರು ಇಂದು ಆನುಭವಿಸುತ್ತಿರುವ ಸಂಕಟಗಳಿಗೆ ಪರಿಹಾರದ ಅಗತ್ಯ ಖಂಡಿತ ಇದೆಯಾದರೂ ನೈತಿಕತೆಯ ಕಟ್ಟನ್ನು ಸಡಿಲಿಸುವುದಾಗಲಿ, ಮುಕ್ತ ಲೈಂಗಿಕತೆಯಾಗಲಿ ಖಂಡಿತ ಪರಿಹಾರವಲ್ಲ ಎಂಬುದು ನನ್ನ ಅನಿಸಿಕೆ. 'ವಿವಾಹ ರಹಿತ ಸಮಾಜದ ಮತ್ತು ಆರೋಗ್ಯವಂತ ಪುರುಷನು ಆರೋಗ್ಯವಂತ ಸ್ತ್ರೀಯನ್ನು ಕೊಡುವುದರ ಮೂಲಕ ಆರೋಗ್ಯವಂತ ಮಕ್ಕಳ ನಿರ್ಮಾಣ'ವೆಂಬ ಪರಿಕಲ್ಪನೆಯನ್ನು ಗ್ರೀಕ್ ತತ್ವಜ್ಞಾನಿ ಪ್ಲೇಟೋ ಕೂಡಾ ಶತಮಾನಗಳ ಹಿಂದೆಯೇ ಹೇಳಿದ್ದ. ಆದರೆ ಆದಾವುದೂ ವ್ಯಾವಹಾರಿಕವಾಗಿ ಆಚರಣೆಗೆ ತರುವಂಥದ್ದಲ್ಲ ಎಂದು ಮನುಷ್ಯ ಸಮಾಜ ಎಂದೋ ನಿರ್ಧರಿಸಿಯಾಗಿದೆ. ಪುರುಷ ಪ್ರಧಾನ ಸಮಾಜವು ಸ್ತ್ರೀಯರ ಬಗೆಗಿನ ತನ್ನ ಧೋರಣೆಯನ್ನು ಬದಲಾಯಿಸಿ ಊರ್ಮಿಳೆ ಹೇಳುವಂತಹ 'ಅಧಿಕಾರದ ಸಮಾನ ಹಂಚಿಕೆಯ ಮೂಲಕವಷ್ಟೇ ಸ್ತ್ರೀಯರ ವಿಮುಕ್ತಿ ಸಾಧ್ಯ.

ಅಹಲ್ಯೆ, 'ಮರಳ ಮಡಕೆ'ಯಲ್ಲಿ ರೇಣುಕೆ, 'ವಿಮುಕ್ತಿ'ಯಲ್ಲಿ ಊರ್ಮಿಳೆ, ಮತ್ತು ಒಂದು ಮುಕ್ತ ಸಮಾಜ ಸ್ಥಾಪನೆಯಾಗಬೇಕು ಎಂಬುದು. ಮುಕ್ತ ಲೈಂಗಿಕ ಸಂಬಂಧಗಳಿಂದ ಆಗಬಹುದಾದ ಅರಾಜಕತೆ-ಆನಾಹುತಗಳು ಆದೂ ಇಂದಿನ ವೈಜ್ಞಾನಿಕ ಸೌಲಭ್ಯ ಸಂಪದ್ಭರಿತ ಜಗತ್ತಿನಲ್ಲಿ ಏಡ್ಸ್‌ನಂಥ ಮಾರಕ ರೋಗಗಳಿಗೆ ಜನರು ಬಲಿಯಾಗುತ್ತಿರುವ ದಿನಗಳಲ್ಲಿ ಕಲ್ಪನೆಗು ನಿಲುಕುವಂಥದ್ದಲ್ಲ. ಸ್ತ್ರೀಯರು ಇಂದು ಆನುಭವಿಸುತ್ತಿರುವ ಸಂಕಟಗಳಿಗೆ ಪರಿಹಾರದ ಅಗತ್ಯ ಖಂಡಿತ ಇದೆಯಾದರೂ ನೈತಿಕತೆಯ ಕಟ್ಟನ್ನು ಸಡಿಲಿಸುವುದಾಗಲಿ, ಮುಕ್ತ ಲೈಂಗಿಕತೆಯಾಗಲಿ ಖಂಡಿತ ಪರಿಹಾರವಲ್ಲ ಎಂಬುದು ನನ್ನ ಅನಿಸಿಕೆ. 'ವಿವಾಹ ರಹಿತ ಸಮಾಜದ ಮತ್ತು ಆರೋಗ್ಯವಂತ ಪುರುಷನು ಆರೋಗ್ಯವಂತ ಸ್ತ್ರೀಯನ್ನು ಕೊಡುವುದರ ಮೂಲಕ ಆರೋಗ್ಯವಂತ ಮಕ್ಕಳ ನಿರ್ಮಾಣ'ವೆಂಬ ಪರಿಕಲ್ಪನೆಯನ್ನು ಗ್ರೀಕ್ ತತ್ವಜ್ಞಾನಿ ಪ್ಲೇಟೋ ಕೂಡಾ ಶತಮಾನಗಳ ಹಿಂದೆಯೇ ಹೇಳಿದ್ದ. ಆದರೆ ಆದಾವುದೂ ವ್ಯಾವಹಾರಿಕವಾಗಿ ಆಚರಣೆಗೆ ತರುವಂಥದ್ದಲ್ಲ ಎಂದು ಮನುಷ್ಯ ಸಮಾಜ ಎಂದೋ ನಿರ್ಧರಿಸಿಯಾಗಿದೆ. ಪುರುಷ ಪ್ರಧಾನ ಸಮಾಜವು ಸ್ತ್ರೀಯರ ಬಗೆಗಿನ ತನ್ನ ಧೋರಣೆಯನ್ನು ಬದಲಾಯಿಸಿ ಊರ್ಮಿಳೆ ಹೇಳುವಂತಹ 'ಅಧಿಕಾರದ ಸಮಾನ ಹಂಚಿಕೆಯ ಮೂಲಕವಷ್ಟೇ ಸ್ತ್ರೀಯರ ವಿಮುಕ್ತಿ ಸಾಧ್ಯ.

 

ಎಲ್ಲ ಕಥೆಗಳಲ್ಲಿ ಸ್ತ್ರೀವಾದಕ್ಕೆ ಸಂಬಂಧಿಸಿದ ಹಲವು ವಿಚಾರಗಳನ್ನು ಉಲ್ಲೇಖಿಸಿದ್ದು ಒಂದು 'ವಿಮುಕ್ತೆ’ಯಲ್ಲಿ ಊರ್ಮಿಳೆ, ಮತ್ತು 'ಅಶೋಕ'ದಲ್ಲಿ ಮಂಡೋದರಿಯರ ಜತೆಗೆ ಹಿಂದೆ ಬೇರೆ ಬೇರೆ ಸಂದರ್ಭಗಳಲಿ ಭೇಟಿಯಾಗಿ ನಡೆಸಿದ ಮಾರ್ಮಿಕ ಸಂಭಾಷಣೆಗಳಿದೆ. 'ಬಂಧಿತ' ಅನ್ನುವ ಕಥೆ ರಾಮನ ಪರಿತಾಪ ಮತ್ತು ಅಸಹಾಯಕ ಸ್ಥಿತಿಯಲ್ಲಿ ಅವನ ಸ್ವಗತಗಳ - ಕಥೆಯಾದರೂ ಪರೋಕ್ಷವಾಗಿ ಆರೂ ಸೀತೆಯ ಕಥೆಯೇ ಆಗಿದೆ. ಈ ಎಲ್ಲ ಕಥೆಗಳ ಪಿತೃ ಸಂಸ್ಕೃತಿಂರು ಅಧಿಕಾರ ದರ್ಪಗಳಡಿಯಲ್ಲಿ ನಲುಗುವ ಸ್ತ್ರೀಯರದ್ದೇ ಆಗಿದ್ದು ಕ್ರಮೇಣ ಅವರು ಎದುರಿಸಿದ ಯಾತನೆಯ ಅನುಭವಗಳು ಹೇಗೆ ಅವರನ್ನು ಪ್ರಬುದ್ಧ ಚಿಂತಕರಾಗಿ ಬೆಳೆಸಿ ಬದುಕಿನ ಸತ್ಯಗಳನ್ನು ಸ್ವತಂತ್ರವಾಗಿ ಕಂಡುಕೊಳ್ಳುವುದರತ್ತ ನಡೆಸುತ್ತವೆ ಎಂಬುದನ್ನು ಸಮರ್ಥವಾಗಿ ಕಟ್ಟಿಕೊಡುತ್ತವೆ. ಓಲ್ಗ ಅವರ ಕಲ್ಪನೆಗಳು ಇಲ್ಲಿ ಅದ್ಭು ಕೆಲಸ ಮಾಡಿದೆ. ಪ್ರತಿಯೊಂದು ವಾಕ್ಯಗಳೂ ಕಾವ್ಯಾತ್ಮಕವಾಗಿದ್ದು ಪಾತ್ರಗಳ ಒಳತೋಟಿಯನ್ನು ಕಟ್ಟಿಕೊಡುತ್ತವೆ. ಅಜಯ ವರ್ಮಾ ಅವರ ಅನುವಾದವ ಓಲ್ಗಾ ಆವರ ಪ್ರಸ್ತುತಿಯೊಂದಿಗೆ ಸ್ಪರ್ಧೆಯೇನೋ ಎಂಬಂತೆ ಅತ್ಯಂತ ಸುಂದರವಾಗಿ ಬಂದಿದ್ದು ಸುಖವಾಗಿ

ಓದಿಸಿಕೊಂಡು ಹೋಗುತ್ತದೆ. ಕನ್ನಡಕ್ಕೆ ಅಜಯ್‌ ಅವರ ಕೆಲವು ಹೊಸ ಶಬ್ದಗಳನ್ನೂ (ಉದಾ: ಆಲಂಕರಣೆ, ಆದರಣೆ ಇತ್ಯಾದಿ) ಕೊಡುಗೆಯಾಗಿ ನೀಡಿದ್ದನ್ನು ಗಮನಿಸಬಹುದು. ಅನುವಾದಕರಾಗಿ ಇದು ಅಜಯ್‌ ಅವರ ಆರಂಭಿಕ ಹಂತದ ಕೆಲಸವಾದರೂ ಸ್ತ್ರೀವಾದದ ವಿಚಾರಗಳನ್ನು ಬಹಳ ಚೆನ್ನಾಗಿ ಅರ್ಥ ಮಾಡಿಕೊಂಡು ಎಲ್ಲಿಯೂ ತಪ್ಪದೆ ಮೂಲಕ್ಕೆ ನಿಷ್ಟವಾಗಿ ಅನುವಾದ ಮಾಡಿರುವುದು ಪ್ರಶಂಸಾರ್ಹ ವಿಚಾರ. ಓಲ್ಗ ಅವರ ಜತೆ ಸಂದರ್ಶನ ನಡೆಸಿ ಅವರ ಅನುಭವ-ಅನ್ನಿಸಿಕೆಗಳ ಬಗ್ಗೆ ಮಾತ್ರವಲ್ಲದೆ ತೆಲುಗು ಸಾಹಿತ್ಯ ಹಾಗೂ ಸಾಹಿತಿಗಳ ಕುರಿತಾದ ಅನೇಕ ವಿಚಾರಗಳ ಬಗ್ಗೆ ತಿಳಿಸಿ ಕೊಟ್ಟಿದ್ದು ಸಾಹಿತ್ಯಾಸಕ್ತರಿಗೆ ಬಹಳ ಪ್ರಯೋಜನಕಾರಿಯಾಗಿದೆ. ಪುರಾಣಗಳ ಮರು ಓದು ಅನ್ನುವುದು ಆಧುನಿಕೋತ್ತರ ಸಾಹಿತ್ಯದ ಒಂದು ಮಹತ್ವದ ಹಜ್ಜೆ, ಅನೇಕರು ಇಂಥ ಕೃತಿಗಳನ್ನು ಈಗಾಗಲೇ ಸಾಕಷ್ಟು ಸಂಖ್ಯೆಯಲ್ಲಿ ತಂದಿದ್ದಾರೆ. ಪುರಾಣದ ಪುನರ್ ವ್ಯಾಖ್ಯಾನದ ಹಿಂದೆ ಬಹಳಷ್ಟು

ಪರಿಶ್ರಮವಿದೆ. ಪುರಾಣಗಳ ಕೂಲಂಕುಶವಾದ ಅಧ್ಯಯನ ಮಾತ್ರವಲ್ಲದೆ ಅವುಗಳ ಕುರಿತು ಆಳವಾದ ಚಿಂತನೆಯೂ ಇರಬೇಕಾಗುತ್ತದೆ. ಪುರಾಣಗಳಲ್ಲಿ ಉಲ್ಲೇಖಿತವಾದ ಘಟನೆಗಳ ಐತಿಹಾಸಿಕ ಕಾಲದ ಸಷ್ಟ ಕಲ್ಪನೆ ಸಿಗಬೇಕಾದರೆ ಇತಿಹಾಸದ ಅಧ್ಯಯನವೂ ಮುಖ್ಯವಾಗುತ್ತದೆ. ಆದ್ದರಿಂದ ಆ ವ್ಯವಸ್ಥೆಯನ್ನೇ ಹೊಡೆದುರುಳಿಸಿ ಒಂದು ಮುಕ್ತ ಸಮಾಜ ಸಾಪನೆಯಾಗಬೇಕು ಎಂಬುದು. ಮುಕ್ತ ಲೈಂಗಿಕ ಸಂಬಂಧಗಳಿಂದ ಆಗಬಹುದಾದ ಅರಾಜಕತೆ-ಆನಾಹುತಗಳು ಆದೂ ಇಂದಿನ ವೈಜ್ಞಾನಿಕ ಸೌಲಭ್ಯ ಸಂಪದ್ಭರಿತ ಜಗತ್ತಿನಲ್ಲಿ ಏಡ್ಸ್‌ನಂಥ ಮಾರಕ ರೋಗಗಳಿಗೆ ಜನರು ಬಲಿಯಾಗುತ್ತಿರುವ ದಿನಗಳಲ್ಲಿ ಕಲ್ಪನೆಗೂ ನಿಲುಕುವಂಥದ್ದಲ್ಲ. ಸ್ತ್ರೀಯರು ಇಂದು ಅನುಭವಿಸುತ್ತಿರುವ ಸಂಕಟಗಳಿಗೆ ಪರಿಹಾರದ ಅಗತ್ಯ ಖಂಡಿತ ಇದೆಯಾದರೂ ನೈತಿಕತೆಯ ಕಟ್ಟನ್ನು ಸಡಿಲಿಸುವುದಾಗಲಿ, ಮುಕ್ತ ಲೈಂಗಿಕತೆಯಾಗಲಿ ಖಂಡಿತ ಪರಿಹಾರವಲ್ಲ ಎಂಬುದು ನನ್ನ ಅನಿಸಿಕೆ. 'ವಿವಾಹ ರಹಿತ ಸಮಾಜದ ಮತ್ತು ಆರೋಗ್ಯವಂತ ಪುರುಷನು ಆರೋಗ್ಯವಂತ ಸ್ತ್ರೀಯನ್ನು ಕೊಡುವುದರ ಮೂಲಕ ಆರೋಗ್ಯವಂತ ಮಕ್ಕಳ ನಿರ್ಮಾಣ'ವೆಂಬ ಪರಿಕಲ್ಪನೆಯನ್ನು ಗ್ರೀಕ್ ತತ್ವಜ್ಞಾನಿ ಪ್ಲೇಟೋ ಕೂಡಾ ಶತಮಾನಗಳ ಹಿಂದೆಯೇ ಹೇಳಿದ್ದ. ಆದರೆ ಇದಾವುದೂ ವ್ಯಾವಹಾರಿಕವಾಗಿ ಆಚರಣೆಗೆ ತರುವಂಥದ್ದಲ್ಲ ಎಂದು ಮನುಷ ಸಮಾಜ ಎಂದೂ ನಿರ್ಧರಿಸಿಯಾಗಿದೆ. ಪುರುಷ ಪ್ರಧಾನ ಸಮಾಜವು ಸ್ತ್ರೀಯರ ಬಗೆಗಿನ ತನ್ನ ಧೋರಣೆಯನ್ನು ಬದಲಾಯಿಸಿ ಊರ್ಮಿಳೆ ಹೇಳುವಂತಹ ’ಅಧಿಕಾರದ ಸಮಾನ ಹಂಚಿಕೆಯ’ ಮೂಲಕವಷ್ಟೆ ಸ್ತ್ರೀಯರ ವಿಮುಕ್ತಿ ಸಾಧ್ಯ.

ಎಲ್ಲ ಕಥೆಗಳಲ್ಲಿ ಸ್ತ್ರೀವಾದಕ್ಕೆ ಸಂಬಂಧಿಸಿದ ಹಲವು ವಿಚಾರಗಳನ್ನು ಉಲ್ಲೇಖಿಸಿದ್ದು ಒಂದು ಗಮನಾರ್ಹ ಸಂಗತಿ. ಪಾಶ್ಚಾತ್ಯ ಸ್ತ್ರೀವಾದದ ಎರಡನೆಯ ಹಂತವು ಒತ್ತು ನೀಡಿದೆ. ’ಸಿಸ್ಟರ್ ಹುಡ್‌ (ಸೋದರಿತ್ವ) ಎಂಬ ಕಲ್ಪನೆಯನ್ನು ಇಲ್ಲಿಎಲ್ಲ ಸ್ತ್ರೀ ಸಂಬಂಧಗಳಿಗೆ ಅನ್ವಯಿಸಿದ್ದು ಬಹಳ ಪರಿಣಾಮಕಾರಿಯಾಗಿದೆ. ಇಂದು ಸಮಾಜದಲ್ಲಿ ಸ್ತ್ರೀಯರು ಸಹ ತಾವೇನು ವಾಡುತ್ತಿದ್ದೇವೆಂಬ ಅರಿವಿಲ್ಲದ ವಿವೇಚನಾರಹಿತರಾಗಿ ಇತರ ಸ್ತ್ರೀಯರನ್ನು ಶೋಷಣೆ ಮಾಡುವಂತಹ ಹಲವಾರು ಸಂದರ್ಭಗಳನ್ನು ನಾವು ನೋಡುತ್ತಿದ್ದೇವೆ. ಈ ಕಥೆಗಳಲ್ಲಿ ಚಿತ್ರಿಸಿದಂಥ ಸೋದರಿತ್ವದ ಮೇಲೆ ರೂಪುಗೊಂಡಂತಹ ಸೌಹಾರ್ದಯುತ ಸಂಬಂಧಗಳು ಚೇತೋಹಾರಿಯಾಗಿವೆ. ಕಾವ್ಯಾತ್ಮಕವಾದ ನಿರೂಪಣಾ ಶೈಲಿ, ಹೃದ್ಯವೂ ಅರ್ಥಪೂರ್ಣವೂ, ಆದ ರೂಪಕಾತ್ಮಕ ಶೀರ್ಷಿಕೆಗಳು ಸಂಕಲನವನ್ನು ಓದುಗರತ ಆಕರ್ಷಿಸುವಲ್ಲಿ ಯಶಸ್ವಿಯಾಗುತ್ತವೆ.

ಪಾರ್ವತಿ ಜಿ.ಐತಾಳ್‌

ಕೃಪೆ : ಜನಪ್ರತಿನಿಧಿ

....................................................................................................................

ಓಲ್ಗಾ ಕತೆಗಳಲ್ಲಿ ಹೊಸ ಸೀತಾ, ಹೊಸ ಶೂರ್ಪನಖಿ

ಶೂರ್ಪನಖಿ ಪಾತ್ರವನ್ನು ಕಾಮುಕಿಯಂತೆಯೇ ಈ ತನಕ ಬಹುತೇಕರು ಕಂಡಿದ್ದಾರೆ. ಆಕೆಯ ಮೂಗು, ಕಿವಿಗಳನ್ನು ಲಕ್ಷಣ ಕುಯ್ದಾಗ ಅದು ಸರಿಯೆಂದೇ ಅನೇಕರಿಗೆ ಅನ್ನಿಸಿರಬಹುದು. ಏಕೆಂದರೇ, ಈ ನೆಲೆಯಲ್ಲಿಯೇ ಕತೆಯನ್ನು ಗ್ರಹಿಸುತ್ತಾ ಬಂದಿದ್ದೇವೆ. ಆ ಸಂದರ್ಭದಲ್ಲಿ ಆಕೆಗೆ ಆದ ನೋವು, ಯಾತನೆ ಯಾರಿಗೆ ಅರ್ಥವಾದೀತು? ಶೂರ್ಪನಖಿಗೆ ಮೊದಲಿನಿಂದಲೂ ಮೂಗಿನ ಮೇಲೆ ಮಮಕಾರ. ತನ್ನ ಅಮಿತ ಸೌಂದರ್ಯದ ಬಗ್ಗೆ ಗರ್ವ. ಮೂಗು ಹೇಗಿರಬೇಕು ಎಂದು ಆ ಪರಮಾತ್ಮನು ಲೋಕಸೃಷ್ಟಿಯ ವೇಳೆಯಲ್ಲಿ ಅಂದುಕೊಂಡನೊ, ನನ್ನದೂ ಅಂಥದ್ದೇ ಎನ್ನುವ ಹೆಮ್ಮೆ ಆಕೆಯದು. ಆಕೆಯ ಮೂಗನ್ನು ಯಾರಾದರೂ ಚುಂಬಿಸಿದರೆ, ಹೇಳತೀರದಷ್ಟು ಪುಳಕ. ಇಂಥ ಮೂಗನ್ನು ಕಳೆದುಕೊಂಡ ಶೂರ್ಪನಖಿಯ ನಂತರದ ದಿನಗಳು ಹೇಗಿದ್ದವು ಎನ್ನುವ ಕಥನ ಆಸಕ್ತಿದಾಯಕ. ಸೌಂದರ್ಯದ ಆರಾಧಕಿಯಾದ ಶೂರ್ಪನಖಿ ತನ್ನ ಕುರೂಪದಿಂದ ಎಲ್ಲರಿಗೂ ಬೇಡವಾದಳು. ತನಗೆ ಈ ಸ್ಥಿತಿ ತಂದ ರಾಮ, ಸೀತೆ, ಲಕ್ಷ್ಮಣನ ಮೇಲೆ ಕೆಂಡದಂಥ ಕೋಪ. ಅಷ್ಟು ಮಾತ್ರವಲ್ಲ ಸುಂದರವಾಗಿರುವ ಎಲ್ಲದರ ಮೇಲೂ ಆಕ್ರೋಶ. ಆಕೆ ರೂಪ-ಆರೂಪಗಳ ನಿಜ ಸಾರ ಅರಿಯಲು ದೊಡ್ಡ ಯುದ್ದವನ್ನೇ ಮಾಡುತ್ತಾಳೆ. ಬಳಿಕ ಕಾನನದ ಒಂದು ಭಾಗದಲ್ಲಿ ಚೆಂದದ ಉದ್ಯಾನವನ್ನು ಕಟ್ಟುತ್ತಾಳೆ. ಅಲ್ಲಿಗೆ ಭೇಟಿ ನೀಡುವ ಸೀತೆಯನ್ನು ಕಂಡಾಗ ಶೂರ್ಪನಖಿಗೆ ಅಚ್ಚರಿ. 'ಶ್ರೀರಾಮನನ್ನು ಪ್ರೀತಿಸುವ ಹೆಂಗಸರಿಗೆ ವೇದನೆ ತಪ್ಪುವುದಿಲ್ಲವೇ?' ಎನ್ನುವ ಭಾವ ಮನದಲ್ಲಿ ಮೂಡುತ್ತದೆ. ವಿಮುಕ್ತೆಯರಾದ ಶೂರ್ಪನಖಿ, ಸೀತೆಯರ ಸಂಭಾಷಣೆ ನಮ್ಮ ಆಲೋಚನೆಗಳನ್ನು ವಿಸ್ತರಿಸುತ್ತದೆ. ಇದು ಓಲ್ಲಾ ಅವರ ‘ಸಮಾಗಮ' ಕತೆಯ ಸಾರ. ಇದೂ ಸೇರಿದಂತೆ ಓಲ್ಗಾ ಅವರ ಅರ್ಧ ಡಜನ್ ಕತೆಗಳನ್ನು ಹೊಂದಿರುವ 'ವಿಮುಕ್ತೆ' ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯೂ ಬಂದಿದೆ. ತೆಲುಗಿನ ಈ ಕತೆಗಳೆಲ್ಲವೂ ನಮ್ಮವೇ ಅನ್ನಿಸುವಷ್ಟು ಸೊಗಸಾಗಿ ಅಜಯ್ ವರ್ಮಾ ಅಲ್ಲೂರಿ ಅವರು ಕನ್ನಡಕ್ಕೆ ತಂದಿದ್ದಾರೆ. ರಾಯಚೂರಿನ ಸಿಂಧನೂರಿನವರಾದ ಅಜಯ್ ವರ್ಮಾ ಎಂ.ಎಸ್ಸಿ ವಿದ್ಯಾರ್ಥಿ. ಕತೆಗಳ ಮೂಲಕ ಈಗಾಗಲೇ ಪರಿಚಿತರಾಗಿರುವ ಅವರು, ಈಗ ಅನುವಾದದ ಮೂಲಕ ಗಮನ ಸೆಳೆದಿದ್ದಾರೆ. ಓಲ್ಲಾ ಎನ್ನುವ ಹೆಸರಿನಿಂದ ದೇಶದಾದ್ಯಂತ ಗುರುತಿಸಿಕೊಂಡಿರುವ ಪೋಪೂರಿ ಲಲಿತ ಕುಮಾರಿ, ತೆಲುಗಿನ ಖ್ಯಾತ ಸ್ತ್ರೀವಾದಿ ಲೇಖಕಿ, ಸೀತೆ, ಅಹಲ್ಯ, ರೇಣುಕೆ, ಊರ್ಮಿಳೆಯರ ಅಂತರಂಗದ ಮಾತುಗಳಿಗೆ ಕಿವಿ ಕೊಡಲು ಈ ಪುಸ್ತಕ ಸಹಕಾರಿ.

- ಹ. ಚ. ನಟೇಶಬಾಬು

ಕೃಪೆ : ವಿಜಯ ಕರ್ನಾಟಕ (2020 ಮಾರ್ಚಿ 15)

 

Related Books