ಮಾವಳ್ಳು-ಶೀರ್ಷಿಕೆಯಡಿ ತೆಲುಗು ಭಾಷೆಯಲ್ಲಿ ಲಕ್ಷ್ಮಿ ರಾಘವ ಅವರು ಬರೆದ ಸಣ್ಣ ಕಥೆಗಳನ್ನು ಲೇಖಕಿ ಮ.ಸು. ಸುಲೋಚನಾ ಅವರು ಕನ್ನಡಕ್ಕೆ ಅನುವಾದಿಸಿದ ಕೃತಿ-ನನ್ನವರು. ವಸ್ತು ವೈವಿಧ್ಯತೆಯೊಂದಿಗೆ ಕಂಗೊಳಿಸುವ ಕಥೆಗಳು ನಿರೂಪಣಾ ಶೈಲಿಯಿಂದಲೂ ಗಮನ ಸೆಳೆಯುತ್ತವೆ. ಸರಳ ಕನ್ನಡದಲ್ಲಿ ಅನುವಾದಗೊಂಡಿರುವ ಇಲ್ಲಿಯ ಕಥೆಗಳಲ್ಲಿ ಪಾತ್ರ ಸೃಷ್ಟಿ, ಪರಿಣಾಮಕಾರಿ ಸಂಭಾಷಣೆ, ಸನ್ನಿವೇಶಗಳ ಜೋಡಣೆಯಿಂದಲೂ ವಿಶೇಷತೆ ಕಾಯ್ದುಕೊಂಡು ಕನ್ನಡ ಸಾಹಿತ್ಯವನ್ನು ಪ್ರವೇಶಿಸಿವೆ.
ಕಾದಂಬರಿಗಾರ್ತಿ, ಅನುವಾದಕಿ ಸುಲೋಚನಾ ಮ.ಸು. ಅವರು 1941ರ ಮಾರ್ಚ್ 01 ರಂದು ಜನಿಸಿದರು. ’ಅಲೇಖ್ಯ, ಕೃಷ್ಣವೇಣಿ’ ಕಾದಂಬರಿಗಳನ್ನು ತೆಲುಗಿನಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ’ಜಯಂತಿ’ ಅನುವಾದಿತ ಸಣ್ಣಕಥೆಗಳ ಸಂಕಲನ. ಆಕಾಶವಾಣಿಯಲ್ಲಿ ಅವರ ಕತೆ, ನಾಟಕ, ಮಕ್ಕಳ ಸಾಹಿತ್ಯರೂಪಕಗಳು ಪ್ರಸಾರವಾಗಿದೆ. ...
READ MORE