ಕೇರಳ ಕಾಂತಾಸಮ್ಮಿತ

Author : ಕಮಲಾ ಹೆಮ್ಮಿಗೆ

Pages 272

₹ 250.00

Buy Now


Year of Publication: 2019
Published by: ಮನೋಹರ ಗ್ರಂಥ ಮಾಲಾ
Address: ಮನೋಹರ ಗ್ರಂಥಮಾಲಾ, ಲಕ್ಷ್ಮೀ ಭವನ, ಸುಭಾಷ್ ರೋಡ್, ಧಾರವಾಡ-580001
Phone: 9845447002

Synopsys

'ಕೇರಳ ಕಾಂತಾಸಮ್ಮಿತ' ಕೃತಿಯು ಕಮಲಾ ಹೆಮ್ಮಿಗೆ ಅವರು ಭಾಷಾಂತರಿಸಿದ ಮಲೆಯಾಳಂ ಕತೆಗಳ ಸಂಕಲನ. ಯಾವುದೇ ಸಂಸ್ಕೃತಿಯ ಅತ್ಯಂತ ಸೂಕ್ಷ್ಮ ಸೂಚಕವನ್ನು ಅರಿಯಲು ಬಯಸುವವರು ಆಯಾ ಸಂಸ್ಕೃತಿಯ ಸ್ತ್ರೀಸಂವೇದನೆ, ಸ್ತ್ರೀ-ಪ್ರಜ್ಞೆಯ ಮೊರೆ ಹೋಗಲೇ ಬೇಕಾಗುತ್ತದೆ. ಅದಕ್ಕೆ ಕಾರಣ ಸ್ತ್ರೀಯರು ನಿಜವಾದ ಅರ್ಥದಲ್ಲಿ ಸಂಸ್ಕೃತಿಯ ವಾರಸುದಾರರು-ಸಂರಕ್ಷರಾಗಿರುತ್ತಾರೆ. ಸ್ತ್ರೀ ಸಂವೇದನೆಯ ಅಭಿವ್ಯಕ್ತಿ ಮಾಧ್ಯಮಗಳನ್ನು ಅಧ್ಯಯನ ಮಾಡಿದಾಗ ಮಾತ್ರ ಆ ಆರೋಗ್ಯ-ಅನಾರೋಗ್ಯ, ತೃಪ್ತಿ-ಅತೃಪ್ತಿ, ಸುಭಗತೆ-ತಳಮಳ, ಸಮತೋಲ-ಅಸಮತೋಲನಗಳ ಅರಿಯಬಹುದು. ಕಮಲಾ ಹೆಮ್ಮಿಗೆಯವರು ’ಕೇರಳ ಕಾಂತಾಸಮ್ಮಿತ’ ಸಂಕಲನದಲ್ಲಿ, ಇಪ್ಪತ್ತನೆಯ ಶತಮಾನದ ಮಲೆಯಾಳೀ ಭಾಷೆಯ ಹದಿನೈದು ಮಹತ್ವದ ಮಹಿಳಾ ಕಥೆಗಳನ್ನು ಸಂಗ್ರಹಿಸಿ ಕೊಟ್ಟಿದ್ದಾರೆ. ಮಲೆಯಾಳೀ ಸಂಸ್ಕೃತಿಯಲ್ಲಿನ `ಸ್ತ್ರೀ ಸಂವೇದನೆ ಪರಿಚಯಿಸಿದ್ದಾರೆ.

About the Author

ಕಮಲಾ ಹೆಮ್ಮಿಗೆ
(20 November 1952 - 24 September 2023)

ಸಾಹಿತಿ, ಅಂಕಣಗಾರ್ತಿ ಕಮಲಾ ಹೆಮ್ಮಿಗೆ ಅವರು ಹುಟ್ಟಿದ್ದು 20  ನವೆಂಬರ್, 1952ರಂದು, ಮೈಸೂರು ಜಿಲ್ಲೆಯ ಹೆಮ್ಮಿಗೆಯಲ್ಲಿ. ಪ್ರತಿಭಾವಂತ ಬರಹಗಾರ್ತಿ. 1973ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಕನ್ನಡ ಜಾನಪದವನ್ನು ಮುಖ್ಯವಿಷಯವನ್ನಾಗಿ ಆರಿಸಿಕೊಂಡು ಪ್ರಥಮ ದರ್ಜೆಯಲ್ಲಿ ಎಂ.ಎ.ಪದವಿಯನ್ನು ಪಡೆದವರು. ಸವದತ್ತಿ ಎಲ್ಲಮ್ಮ ಹಾಗೂ ದೇವದಾಸಿ ಪದ್ದತಿಯ ಮೇಲೆ ಮಹಾಪ್ರಬಂಧ ರಚಿಸಿ, ಕರ್ನಾಟಕ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿ ಪಡೆದರು. ಮೈಸೂರು ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಭಾಷಾಂತರ ಡಿಪ್ಲೊಮಾ ಪಡೆದಿದ್ದಾರೆ. ನನ್ನ ಸಂಗಾತಿ ಎಂದರೆ ಒಂಟಿತನ ಎನ್ನುವ ಕಮಲಾ ಹೆಮ್ಮಿಗೆ I Think i am addicted to it ಎನ್ನುತ್ತಾರೆ. ಅಡಿಗ, ಅನಂತಮೂರ್ತಿ, ಶಾಂತಿನಾಥ ದೇಸಾಯಿ ಮೊದಲಾದವರ ಸಾಹಿತ್ಯಕ ಪ್ರಭಾವ ಇವರ ...

READ MORE

Related Books