ಕಾಳೀಪಟ್ನಂ ರಾಮಾರಾವ್ ಅವರು ಮೂಲತಃ ಆಂಧ್ರಪ್ರದೇಶದವರು. ಪ್ರೌಢಶಾಲಾ ಶಿಕ್ಷಕರಾಗಿ ನಿವೃತ್ತಿ ಹೊಂದಿದ್ಧಾರೆ. ಇವರ ರಚನೆಯಲ್ಲಿ ಬಂದ ಒಂಭತ್ತು ಕಥೆಗಳು ಅತಿ ದೀರ್ಘ ಕಥಾನಕಗಳು, ಅತ್ಯಂತ ಚಿಕ್ಕ ತಲೆಬರೆಹಗಳು, ಸಾವಧಾನವಾಗಿ ಸಮಸ್ತವನ್ನು ಪರಿಶೀಲಿಸುವ ಸೂಕ್ಷ್ಮ ವಿವರಗಳು, ಹೀಗೆ ನೂರೆಂಟು ಬಗೆಯ ಪಾತ್ರಗಳನ್ನು ಒಳಗೊಂಡಿರುವಂಥದ್ದು. ಸರಳ-ನಿರಾಳ ನಿರೂಪಣಾ ಶೈಲಿಯ ಇವರ ಈ ಕೃತಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಥಾ ಸಂಕಲನವಾಗಿದೆ. ಇವರ ಕಥೆಗಳು ಕೇವಲ ಕಥೆಗಳಾಗದೇ ಸದ್ದಿಲ್ಲದೆ ಓದುಗನನ್ನು ಒಳಗು ಮಾಡಿಕೊಳ್ಳುವ ವಿಶಿಷ್ಟ ಅನುಭವವನ್ನು ನೀಡುತ್ತವೆ. ಇಂತಹ ವಿಶಿಷ್ಟ ಕಥೆಗಳನ್ನು ಕನ್ನಡಕ್ಕೆ ತಂದವರು ಬರಹಗಾರ, ಅನುವಾದಕರಾದ ಚಿದಾನಂದ ಸಾಲಿಯವರು. ಇವರ ಕನ್ನಡ ಅನುವಾದವೂ ಸಹ ಕನ್ನಡದ ಮನಸ್ಸುಗಳ ಪಾತ್ರಗಳಾಗಿ ಕಾಡುವಷ್ಟರ ಮಟ್ಟಿಗೆ ಬರಹದ ಶೈಲಿ ಮೂಡಿಬಂದಿದೆ.
ಕವಿ-ಕತೆಗಾರ- ಅನುವಾದಕ ಚಿದಾನಂದ ಸಾಲಿ ಅವರು ಮೂಲತಃ ರಾಯಚೂರು ಜಿಲ್ಲೆಯ ಸಿರವಾರದವರು. ಗಣಿತಶಾಸ್ತ್ರದಲ್ಲಿ ಎಂಎಸ್ಸಿ, ಪತ್ರಿಕೋದ್ಯಮ, ಕನ್ನಡದಲ್ಲಿ ಎಂ.ಎ. ಪದವಿ ಪಡೆದಿರುವ ಅವರು ಎಂಫಿಲ್, ಪಿಜಿಡಿಎಚ್ ಇ ಮತ್ತು ಪಿಜಿಡಿಎಚ್ ಆರ್ ಎಂ ಪದವೀಧರರು. ಕೆಲಕಾಲ ಪತ್ರಕರ್ತರಾಗಿದ್ದ ಅವರು ಸರ್ಕಾರಿ ಪ್ರೌಢಶಾಲೆಯ ಗಣಿತ ಶಿಕ್ಷಕರು. ಪ್ರಜಾವಾಣಿ ಕಥಾಸ್ಪರ್ಧೆ, ಕ್ರೈಸ್ಟ್ ಕಾಲೇಜ್ ಕಾವ್ಯಸ್ಪರ್ಧೆ, ಕನ್ನಡಪ್ರಭ ಕಥಾಸ್ಪರ್ಧೆ, ಸಂಕ್ರಮಣ ಕಾವ್ಯಸ್ಪರ್ಧೆ, ಸಂಚಯ ಕಾವ್ಯಸ್ಪರ್ಧೆ, ಪ್ರಜಾವಾಣಿ ಕಾವ್ಯಸ್ಪರ್ಧೆ ಮುಂತಾದವುಗಳಲ್ಲಿ ಬಹುಮಾನ ಪಡೆದಿದ್ದಾರೆ. ರೆ. ..(ಕವಿತೆ); ಮೌನ(ಕನ್ನಡ ಗಜಲ್); ಧರೆಗೆ ನಿದ್ರೆಯು ಇಲ್ಲ(ಕಥಾಸಂಕಲನ), ಚೌಕಟ್ಟಿನಾಚೆ (ಬೆಟ್ಟದೂರರ ಕಲಾಕೃತಿಗಳನ್ನು ಕುರಿತು); ಶಿಕ್ಷಣ ಮತ್ತು ಜೀವನಶೈಲಿ ...
READ MORE