ಬಂಗಾಳಿ ಭಾಷೆಯ ಮಹಾನ್ ಲೇಖಕರಲ್ಲಿ ಒಬ್ಬರಾದ ರವೀಂದ್ರನಾಥ ಠಾಕೂರರ ಕಥಾಮಂಜರಿಯ ಮೂರು ಸಂಪುಟಗಳಲ್ಲಿ ಮೊದಲನೆ ಸಂಪುಟವಾದ ಇದನ್ನು ಅಹೋಬಲ ಶಂಕರ ರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಇದರಲ್ಲಿ ಒಟ್ಟು 33 ಕಥೆಗಳು ಇವೆ. ಸಾಮಾನ್ಯವಾದಂತಹ ಘಟನೆಗಳನ್ನೇ ತೆಗೆದುಕೊಂಡು ಭಾವನೆಗಳ ಜಾಲವನ್ನೇ ಕಟ್ಟುವಂತಹ ಸ್ನಾನಘಟ್ಟದ ಕಥೆ, ಮಕ್ಕಳ ಮನಸ್ಸನ್ನು ವಿವರಿಸುವ ಯಜಮಾನಿಯಂತಹ ಕಥೆ, ಬಾಲ್ಯದ ಆದರ್ಶಗಳನ್ನು ನೆಚ್ಚಿಕೊಂಡು ಬಾಲ್ಯಸ್ನೇಹಿತೆಯನ್ನೂ ತಿರಸ್ಕರಿಸಿ, ಕೇವಲ ಶಾಲಾಮಾಸ್ತರನಾಗಿ ಕಾಲವಶಾತ್ ಮತ್ತೆ ಅವಳನ್ನು ಸಂಧಿಸಿದಾಗಿನ ಮಧುರ ಕ್ಷಣಗಳನ್ನು ಹೇಳುವ ಒಂದು ರಾತ್ರಿ ಹೀಗೆ ಸರಳವಾದರೂ ಮನಸೆಳೆವ ಕಥೆಗಳು ಈ ಸಂಪುಟದಲ್ಲಿ ಮೂಡಿ ಬಂದಿದೆ.
ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಅಹೋಬಲ ಶಂಕರ ಅವರು ಅತ್ಯುತ್ತಮ ಅನುವಾದಕರು. ಕೊಲ್ಕತ್ತಾದಲ್ಲಿ ವಾಸಿಸುತ್ತಿದ್ದ ಅವರು ಬರಹಗಾರ, ಪತ್ರಿಕೋದ್ಯಮಿ ಹಾಗೂ ಮಹಾನ್ ಸಾರ್ವಜನಿಕ ಸೇವೆಯಲ್ಲಿ ಆಸಕ್ತರಾಗಿದ್ದರು. ಬಂಗಾಳಿಯ ಮಹತ್ವದ ಕೃತಿಗಳನ್ನು ಕನ್ನಡಕ್ಕೆ ನೇರವಾಗಿ ಅನುವಾದಿಸಿದ ಹಿರಿಮೆ ಅವರದು. ...
READ MORE