ಕಥಾಸರಿತ್ಸಾಗರದ ಅನುವಾದದ ಮಾಲಿಕೆಯಲ್ಲಿ ಕೊನೆಯದಾದ ಈ ಸಂಪುಟವು ಮೂಲದ ಆರು ಲಂಬಕಗಳನ್ನು ಒಳಗೊಂಡಿದೆ. ನರವಾಹನದತ್ತನಿಗೆ ಇಬ್ಬರು ಯುವಕರು ಹೇಳುವ ಅವರ ಪ್ರೇಮಗಾಥೆಗಳು, ನರವಾಹನದತ್ತ ಹೆಂಡತಿ ಮದನಮಂಚುಕೆಯ ಅಪಹರಣ ಮತ್ತು ಅವರಿಬ್ಬರ ಸಮಾಗಮ, ಆಕಾಶದಿಂದ ನೋಡಿದಾಗ ಭೂಮಿಯು ಕಾಣುವ ಬಗೆ, ಕಂಬದಿಂದ ಹೊರಹೊಮ್ಮುವ ಭೈರವನ ಹಾಗೂ ನಂತರದ ಯುದ್ದದ ಭಯಂಕರ ವರ್ಣನೆ,ವಿದ್ಯಾಧರ ಚಕ್ರವರ್ತಿಯಾಗಲು ನರವಾಹನದತ್ತನ ಸಾಧನೆಗಳು, ಅವನ ತಾತ ಮತ್ತು ತಂದೆಯ ನಿರ್ಯಾಣ, ವಿಕ್ರಮಾದಿತ್ಯನ ಕಥೆಗಳ ಕುರಿತು ಲೇಖಕರು ಸಂಪುಟದಲ್ಲಿ ವಿವರಿಸಿದ್ದಾರೆ.
ಜೈನಶಾಸ್ತ್ರ ಮತ್ತು ಪ್ರಾಕೃತ ಪರಿಣಿತೆ ಆಗಿರುವ ಬಿ.ಎನ್. ಸುಮಿತ್ರಾಬಾಯಿ ಅವರು ಕನ್ನಡದ ಪ್ರಮುಖ ವಿಮರ್ಶಕರಲ್ಲಿ ಒಬ್ಬರು. ಸಾರ್ವತ್ರಿಕದೆಡೆಗೆ, ವಿಚಯ, ಅಯನ, ಮಹಿಳೆ ಮತ್ತು ಸಾಹಿತ್ಯ, ಸರಹದ್ದುಗಳ ಆಚೆ, ಸ್ತ್ರೀವಾದಿ ಪ್ರವೇಶಿಕೆ ಅವರ ಪ್ರಮುಖ ವಿಮರ್ಶಾ ಕೃತಿಗಳು. ’ಕಲ್ಯಾಣ ಸರಸ್ವತಿ, ಕಾತ್ಯಾಯನಿ ವಾಚಿಕೆ, ಸ್ತ್ರೀವಾದಿ ಪ್ರವೇಶಿಕೆ’ ಕೃತಿಗಳನ್ನು ಸಂಪಾದಿಸಿದ್ದಾರೆ. ಅವರಿಗೆ ಅನುಪಮಾ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಲಭಿಸಿವೆ. ಡಾ. ಬಿ. ಎನ್. ಸುಮಿತ್ರಾ ಬಾಯಿ ಅವರ ಬೊಗಸೆಯಲ್ಲಿ ಹೊಳೆ ನೀರು (ಲೇಖನ ಸಂಕಲನ) ಕೃತಿಗೆ 2014ರ ವಿ.ಎಂ. ಇನಾಂದಾರ ಸ್ಮಾರಕ ವಿಮರ್ಶಾ ಪ್ರಶಸ್ತಿ ಸಂದಿದೆ ಹಾಗೂ ಪಿ. ...
READ MORE