ಭಾರತೀಯ ಭಾಷೆಗಳಲ್ಲಿಯೇ ಇಂಥ ಆಯಾಮದ ಕಥಾಸಾಹಿತ್ಯದ ಸಮಗ್ರ ನೋಟವನ್ನು ನೀಡಬಲ್ಲಂತಹ ಬೇರೊಂದು ಗ್ರಂಥ ಬಂದಿಲ್ಲವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕೃತಿ ಇದು. ಈ ಕೃತಿಯನ್ನು ಶ್ರೀಕಮಲೇಶ್ವರ್ ಅವರು ತಮ್ಮ ಮಿತ್ರರ ಸಹಾಯದೊಂದಿಗೆ ಸಂಪಾದಿಸಿದರು. ಆರ್. ಪಿ. ಹೆಗಡೆಯವರು ಇದನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಗ್ರೀಕ್, ಭಾರತೀಯ ಕಥಾಪರಂಪರೆ ಹಾಗೂ ಭೂಮಿಕೆಗಳನ್ನು ಮತ್ತು ಆಧುನಿಕ ಕತೆಗಳ ರಚನಾ ಸಂಸ್ಕೃತಿಯನ್ನು ವಿಸ್ತಾರವಾಗಿ ಮೊದಲ ಸಂಪುಟದಲ್ಲಿ ನೀಡಿದ್ದಾರೆ. ಭಾರತದ ಪರಂಪರೆಯಲ್ಲಿ ಬಂದಿರುವ ಪೌರಾಣಿಕ ಕಥೆಗಳನ್ನು ಹಾಗು ವಿದೇಶೀ ಪೌರಾಣಿಕ ಕಥೆಗಳನ್ನು ಕೂಡ ಈ ಸಂಪುಟದಲ್ಲಿ ನೀಡಿದ್ದಾರೆ.
©2024 Book Brahma Private Limited.