ಈ ಸಂಪುಟವು ಮೂಲ ಕಥಾಸರಿತ್ಸಾಗರದ ಏಳನೆಯ ಲಂಬಕವಾದ ರತ್ನಪ್ರಭಾವನ್ನು ಒಳಗೊಂಡಿದೆ. ನರವಾಹನದತ್ತನು ರತ್ನಪ್ರಭೆಯನ್ನು ಸಂಧಿಸುವುದು, ರತ್ನಪ್ರಭೆಯ ಹಿಂದಿನ ಕಥೆ, ಸ್ತ್ರೀಯರ ಸ್ವಭಾವದಲ್ಲಿನ ಗುಣಾವಗುಣಗಳ ವ್ಯಾಖ್ಯಾನ, ನರವಾಹನದತ್ತ ಮತ್ತು ಕರ್ಪೂರಿಕೆಯರ ಸಮಾಗಮ ಇವು ಈ ಕೃತಿಯಲ್ಲಿರುವ ಮುಖ್ಯ ಕಥೆಗಳಾಗಿವೆ. ಈ ಮುಖ್ಯ ಕಥಾವಾಹಿನಿಗೆ ಅಲ್ಲಲ್ಲಿ ಉಪನದಿಗಳಂತೆ ಸೇರುವ ಉಪಕಥೆ, ಅವುಗಳ ಲಾಸ್ಯದ ಲಹರಿ, ಇವು ಮನೋಹರವಾಗಿ, ಸ್ವಾರಸ್ಯಪೂರ್ಣವಾಗಿ ಲೇಖಕರು ಈ ಕೃತಿಯಲ್ಲಿ ವಿವರಿಸಿದ್ದಾರೆ.
ಬಿ.ಎಸ್. ಆರ್ ಎಂದೇ ಖ್ಯಾತಿಯ ಬಿ.ಎಸ್. ರಾಮಕೃಷ್ಣರಾವ್ ಅವರು ಬಾಸೂರಿನವರು. ತರೀಕೆರೆ,ಹಾಗೂ ಶಿವಮೊಗ್ಗದ ಸಹ್ಯಾದ್ರಿ ಕಾಲೇಜುಗಳಲ್ಲಿ ಪದವಿಯವರೆಗೆ ಹಾಗೂ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಎಂ.ಎ. ಪದವಿ ಪಡೆದರು. ಸಂಸ್ಕೃತದಲ್ಲಿ ಪಿ.ಎಚ್.ಡಿ ಹಾಗೂ ವಿದ್ವತ್ ಪರೀಕ್ಷೆಗಳಲ್ಲಿ ಉತ್ತೀರ್ಣರಾದರು. ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ, ಹಿಂದೀಭಾಷೆಯಲ್ಲಿ ರತ್ನ, ಕನ್ನಡದಲ್ಲಿ ಎಂ. ಎ ಪದವಿ ನಂತರ ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ 20 ವರ್ಷ ಕಾಲ ಸೇವೆ ಸಲ್ಲಿಸಿದರು. ಭಾರತೀಯ ವಿದ್ಯಾಭವನದ ಶಾಖೆ ಆರಂಭಿಸಲು ಮೆಕ್ಸಿಕೋಗೆ ತೆರಳಿದ್ದು, ಅಲ್ಲಿ ಭಾರತೀಯ ಸಂಸ್ಕೃತಿ ಹಾಗೂ ಸಂಸ್ಕೃತ ಪ್ರಚಾರಕ್ಕೆ ಸೂಕ್ತ ಅವಕಾಶ ಸಿಗದ ಕಾರಣ ಮತ್ತೇ ಮುಂಬೈಗೆ ಮರಳಿದರು. ಅಲ್ಲಿಯ ಭಾರತೀಯ ...
READ MORE