ಪ್ರೊ. ಎಲ್. ಎಸ್. ಶೇಷಗಿರಿರಾವ್ ಅವರು ಅನುವಾದಿಸಿದ ಕೃತಿ-ಹದಿಮೂರು ಶ್ರೇಷ್ಠ ಕಥೆಗಳು. ಭಾರತದ 13 ಭಾಷೆಯ ‘ಶ್ರೇಷ್ಠ’ಎಂದು ಪರಿಗಣಿಸಲಾದ ಕಥೆಗಳನ್ನು ಅನುವಾದಿಸಿ ಸಂಗ್ರಹಿಸಲಾಗಿದೆ. ಪ್ರತಿಕಥೆಗೂ ವಸ್ತುವಿಗೆ ತಕ್ಕಂತೆ ಚಿತ್ರಗಳನ್ನು ಬಿಡಿಸಿದ್ದ ಮಿಕ್ಕಿ ಪಟೇಲ್. ವಿಶೇಷ ಬಹುಮಾನ, ಹಸಿದ ಸೆಪ್ಟೋಪಸ್, ಸೀತೆ ಮತ್ತು ನದಿ, ಅದಲ್ ಬದಲ್, ಕವಣೆ ಇಟ್ಟುಕೊಂಡಿದ್ದ ಹುಡುಗ, ರಾಹುಲ, ಸುಂದರ ಮತ್ತು ಚುಕ್ಕೆ ಬಾಲ, ಬಹುವೇಗದ ಘನೆ, ಸ್ವರ್ಗಕ್ಕೆ ಏಳು ಮೆಟ್ಟಿಲುಗಳು, ಬಮ್ ಬಹಾದೂರ್, ಅಂಚೆಚೀಟಿ ಮತ್ತು ಸಂಗ್ರಹ ಪುಸ್ತಕ, ಅಪ್ಪುವಿನ ಕಥೆ, ಅಹಂಕಾರದ ಬೆಲೆ ಹೀಗೆ ಒಟ್ಟು 13 ಕಥೆಗಳನ್ನು ಅನುವಾದಿಸಿದ್ದಾರೆ.
ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ಎಲ್.ಎಸ್. ಶೇಷಗಿರಿರಾವ್ ಅವರು ಪ್ರಬುದ್ಧ ವಿಮರ್ಶಕರೆಂದೇ ಖ್ಯಾತರು. ತಂದೆ ಸ್ವಾಮಿರಾವ್- ತಾಯಿ ಕಮಲಾಬಾಯಿ. 1925ರ ಫೆಬ್ರುವರಿ 16ರಂದು ಜನಿಸಿದರು. ಬೆಂಗಳೂರು ಮೈಸೂರುಗಳಲ್ಲಿ ವಿದ್ಯಾಭ್ಯಾಸ ಮಾಡಿದ ಇವರು ನಾಗಪುರ ವಿ.ವಿ.ಯಲ್ಲಿ ಇಂಗ್ಲಿಷ್ ಎಂ.ಎ. ಪದವೀಧರರಾದರು. ಕಾಲೇಜು ಶಿಕ್ಷಣ ಇಲಾಖೆಗೆ ಸೇರಿ ಕೋಲಾರ, ಮಡಿಕೇರಿ, ಬೆಂಗಳೂರುಗಳಲ್ಲಿ ಕಾಲೇಜು ಅಧ್ಯಾಪಕರಾಗಿ ಕೊನೆಯಲ್ಲಿ ಕೆಲವುಕಾಲ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದರು. 1947-50ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾಗಿ ಬಿ.ಎಂ.ಶ್ರೀ ಸ್ಮಾರಕ ಪ್ರತಿಷ್ಠಾನದ ಅಧ್ಯಕ್ಷರಾಗಿ ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಥಮ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿ ...
READ MORE