ಡೆನ್ಮಾರ್ಕ ದೇಶದ ಹ್ಯಾನ್ಸ್ ಕ್ರಿಶ್ಚಿಯನ್ ಅಂಡರ್ಸನ್ ಅವರ 13 ಕಥೆಗಳನ್ನು ಜಿ.ಪಿ. ರಾಜರತ್ನಂ ಅವರು ಅನುವಾದಿಸಿದ್ದ ಕೃತಿ-ಲೋಹ ವರಾಹ. ಮಾನವ ಸ್ವಭಾವದ ವಿವಿಧ ಆಯಾಮಗಳನ್ನು ಪರಿಚಯಿಸುವ ಇಲ್ಲಿಯ ಕಥೆಗಳು ಮಕ್ಕಳಿಗೆಂದೇ ಬರೆದವುಗಳಾದರೂ ದೊಡ್ಡವರಿಗೂ ಉತ್ತಮ ಮಾರ್ಗದರ್ಶಿಯಾಗಿವೆ. ದಯೆ. ಕ್ಷಮೆ ಮುಂತಾದ ಮಾನವೀಯ ಪ್ರೀತಿಯನ್ನು ಜೀವಾಳವಾಗಿಸಿಕೊಂಡಿವೆ. ಈ ಕಾರಣಕ್ಕೆ, ಹ್ಯಾನ್ಸ್ ಕ್ರಿಶ್ಚಿಯನ್ ಅಂಡರ್ಸನ್ ವಿಶ್ವ ಖ್ಯಾತಿ ಪಡೆದಿದ್ದಾನೆ. ಕಡ್ಡಿ ಬುಡ್ಡಿ ಜಗಳ, ಸಮಾಧಿಯಾದ ಶಿಶು, ಹೋಮರನ ಸಮಾಧಿಯಾದ ಹೂವು, ಸಗಣಿ ಹುಳುವಿನ ಲೋಕಸಂಚಾರ, ಹಂದಿ ಕುರುಬ ಹೀಗೆ 13 ಕಥೆಗಳನ್ನು ಈ ಸಂಕಲನ ಒಳಗೊಂಡಿದೆ.
ಆಡುಮಾತಿನ ಪದಗಳ ಬಳಕೆಯ ‘ರತ್ನನ ಪದಗಳು’ ಮೂಲಕ ಜನಪ್ರಿಯರಾಗಿದ್ದ ಜಿ.ಪಿ. ರಾಜರತ್ನಂ ಅವರು ಕನ್ನಡ ಸಾಹಿತ್ಯದ ಪರಿಚಾರಿಕೆಗೂ ಹೆಸರಾಗಿದ್ದರು. ರಾಜರತ್ನಂ ಅವರು ಜನಿಸಿದ್ದು ಬೆಂಗಳೂರು ಜಿಲ್ಲೆಯ ರಾಮನಗರದಲ್ಲಿ 1908ರ ಡಿಸೆಂಬರ್ 8 ರಂದು. ತಂದೆ ಜೆ.ಪಿ. ಗೋಪಾಲಕೃಷ್ಣಯ್ಯಂಗಾರ್. ರಾಜರತ್ನಂ ಅವರು ಮೈಸೂರಿನಲ್ಲಿ ಪ್ರೌಢಶಾಲಾ ಶಿಕ್ಷಣ ಮುಗಿಸಿ, ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ. ಮತ್ತು ಮೈಸೂರು ಮಹಾರಾಜ ಕಾಲೇಜಿನಲ್ಲಿ ಎಂ.ಎ. ಪದವಿ ಗಳಿಸಿದರು. ಅನಂತರ ಮೈಸೂರು, ತುಮಕೂರು, ಶಿವಮೊಗ್ಗ, ಬೆಂಗಳೂರು ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಅವರು 1964ರಲ್ಲಿ ನಿವೃತ್ತರಾದ ಮೇಲೆ ಯುಜಿಸಿ ಉಪಾಧ್ಯಾಯರಾಗಿ ಕೆಲವು ಕಾಲ ಸೇವೆ ಸಲ್ಲಿಸಿದರು. ಕವಿ, ...
READ MORE