ಲೇಖಕ ಅಲೋಕ್ ಭಲ್ಲಾ ಅವರು 1993 ರಲ್ಲಿ ಸಂಕಲಿಸಿದ್ದ 46 ಕತೆಗಾರರ ಬೃಹತ್ ಸಂಪುಟವು ಆರ್.ಕೆ. ಹುಡಗಿ (ರಾಹು) ಅವರಿಂದ ಅನುವಾದಿತಗೊಂಡು ಕನ್ನಡದಲ್ಲಿ ಧರೆಹೊತ್ತಿ ಉರಿದಾಗ ಎಂಬ ಹೆಸರಿನ ಮೂರು ಭಾಗಗಳಲ್ಲಿ ಪ್ರಕಟಗೊಂಡಿದೆ.
ಭಾರತದ ವಿಭಜನೆಯ ದುರಂತ ಕಥೆಗಳನ್ನಾಧರಿಸಿದ ಕೆಲವು ಕಥಾನಕಗಳು ಗಲಭೆಯ ಕ್ರೌರ್ಯ, ಕೇಳಿಸಿಕೊಂಡ ಆರ್ತ ಚೀತ್ಕಾರಗಳು, ಕಾಲ ಮತ್ತು ದೇಶದ ಚರಿತ್ರೆಯ ಸಂದರ್ಭದಲ್ಲಿನ ಘಟನೆಗಳು ಇಲ್ಲಿನ ಅನೇಕರ ಬರಹಗಳಲ್ಲಿ ಎದ್ದುಕಾಣುವ ಅಂಶಗಳು.
ತೋಬಾ ಟೇಕ್ ಸಿಂಗ್, ಆಖರಿ ಸಲಾಮ್, ಕಲ್ ಸುಮ್, ಜಟಾಯು, ಆಹುತಿ, ಸಾವು, ಪೋಸ್ಟ್ ಬಾಕ್ಸ್, ಪೇಶಾವರ್ ಎಕ್ಸ್ ಪ್ರೆಸ್, ನೀರು ಕುಡಿಸಿ, ರಕ್ತ ಕಕ್ಕಿಸಿದ, ಸಂತ್ರಸ್ತರ ಕನಸು, ಸಾವಿಲ್ಲದ ಸ್ಮೃತಿಗಳು, ಕೂಲಿ ಮುಂತಾದ ಅನೇಕ ಘಟನೆಗಳನ್ನಾಧರಿಸಿದ ಈ ಕಥಾನಕಗಳು ಈ ಪುಸ್ತಕದಲ್ಲಿ ಇವೆ.
©2024 Book Brahma Private Limited.