ಜಗತ್ಪ್ರಸಿದ್ಧ ಸಾಹಿತಿ ಲಿಯೋ ಟಾಲ್ಸ್ಟಾಯ್ ಯವರ ಸಾವು, ಫಾದರ್ ಸೆರ್ಗಿಯಸ್ ಮತ್ತು ಕ್ರೂಟ್ಸರ್ ಸೊನಾಟಾ ಎಂಬ ಮೂರು ಕಥೆಗಳನ್ನು ಓ. ಎಲ್. ನಾಗಭೂಷಣ ಸ್ವಾಮಿಯವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಬದುಕು, ಬದುಕಿದ್ದಾಗಿನ ಬೇಕು ಬೇಡಗಳು, ಸಾವಿನ ಚಿತ್ರ ಕಣ್ಣೆದುರಿಗೆ ಬಂದಾಗಿನ ಮನದ ಭಾವನೆಗಳು ಅದ್ಭುತವಾಗಿ ಮೂಡಿವೆ. ಎರಡನೆಯದರ ನಾಯಕ ಎಲ್ಲದರಲ್ಲೂ ಪರ್ಫೆಕ್ಷನ್ ಬಯಸುವವ. ಪ್ರೀತಿಸಿದ ಹೆಣ್ಣಿನಿಂದ ನಿರಾಶನಾಗಿ ಫಾದರ್ ಸೆರ್ಗಿಯಸ್ ಆದ. ನಂತರ ವಾಂಛೆಗಳನ್ನು ಗೆಲ್ಲಲು ಶ್ರಮಪಟ್ಟ. ಸನ್ಯಾಸಿಯಾದ, ಪ್ರಲೋಭನೆಗಳನ್ನು ಗೆದ್ದ, ಜಾರಿದ ಮನಸ್ಸು ಮಾಗದೆ ಪರಿಪೂರ್ಣತೆ ಸಿಗದು ಎಂಬುದನ್ನು ಹೃದಯ ವೇದಕವಾಗಿ ಲೇಖಕರು ಈ ಕೃತಿಯಲ್ಲಿ ಚಿತ್ರಿಸಿದ್ದಾರೆ. ಲೈಂಗಿಕತೆ, ಮದುವೆಯ ಸಂಬಂಧ, ಶುದ್ಧವಾದ ಪ್ರೀತಿ ಇವುಗಳ ನೈತಿಕ ತಾಕಲಾಟವು ಈ ಸಂಪುಟದಲ್ಲಿ ಮೂಡಿಬಂದಿದೆ.
©2024 Book Brahma Private Limited.