‘ಸೂರ್ಯನ ಕರವಸ್ತ್ರ’ ತರುಣ್ ಚೆರಿಯನ್ ಅವರ ಮೂಲ ಕೃತಿಯಾಗಿದ್ದು, ಎ.ವಿ. ಚಿತ್ತರಂಜನ್ ದಾಸ್ ಅವರು ಅನುವಾದ ಮಾಡಿದ್ದಾರೆ. ಅಜಂತಾ ಗುಹಾತಕುರ್ತಾ ಅವರು ಚಿತ್ರ ನಿರೂಪಣೆಯನ್ನು ಮಾಡಿದ್ದಾರೆ. ಈ ಕಥಾಸಂಕಲನದ ಕತೆಯೊಂದು ಹೀಗಿದೆ; ಶೀಘ್ರವೇ, ಸೂರ್ಯನ ಶೀತವು ಮಾಯವಾಯಿತು. ಬೆಳಗ್ಗಿನ ವೇಳೆಗೆ ಸಣ್ಣದಾದ ಶೀನು ಮಾತ್ರವೇ ಉಳಿದುಕೊಂಡಿತು. ಸೂರ್ಯನು ಬೆಳಗ್ಗಿನ ಜಾವ ಹೊರಗೆ ಹೊರಟಾಗ ತನ್ನ ಕರವಸ್ತ್ರವನ್ನು ಜೊತೆಯಲ್ಲಿ ತೆಗೆದುಕೊಂಡನು. ಕರವಸ್ತ್ರ ಬೆಳಗಿಗೆ ಹೊಳೆಯಿತು. ಬೀಸುತ್ತಿರುವ ಮಳೆಯಿಂದ ಆಯಾಸಗೊಂಡಿರುವ ಪುಟ್ಟ ಬಾಲಕಿ ಅದನ್ನು ನೋಡುತ್ತಾ ಹೇಳಿದಳು ನೋಡಿ ಅದೊಂದು ಕಾಮನ ಬಿಲ್ಲು'.
ಪತ್ರಕರ್ತ, ಎ.ವಿ. ಚಿತ್ತರಂಜನ್ ದಾಸ್ ಅವರು ಮೂಲತಃ ಸುಳ್ಯ ಸಮೀಪದ ದೊಡ್ಡ ತೋಟದವರು. ಆಕಾಶವಾಣಿಯಲ್ಲಿ ಸುದ್ದಿವಾಚಕರಾಗಿ ಕಾರ್ಯನಿರ್ವಹಿಸಿದ್ದರು. ಸಾಹಿತ್ಯ ಕ್ಷೇತ್ರದಲ್ಲಿಯೂ ಅಪಾರ ಆಸಕ್ತಿ ಹೊಂದಿದ್ದರು. ಕೃತಿಗಳು: ಓಲಿ ಮತ್ತು ಔಲೀ ...
READ MORE