‘ಶ್ರೀಮತಿ. ಮಾಲ್ಡೀ-ಯವರ ವಿಚಿತ್ರವಾದ ಸ್ವೆಟರ್ ಗಳು’ ಆಶಾ ನೆಹಮಯ್ಯ ಅವರ ಮೂಲ ಕೃತಿಯಾಗಿದ್ದು, ಎ.ವಿ. ಚಿತ್ತರಂಜನ್ ದಾಸ್ ಅವರು ಅನುವಾದ ಮಾಡಿದ್ದಾರೆ. ಸುಬೀರ್ ರಾಯ್ ಚಿತ್ರ ವಿನ್ಯಾಸ ಮಾಡಿರುತ್ತಾರೆ. ಈ ಕಥಾಸಂಕಲನದ ಕತೆಯೊಂದು ಹೀಗಿದೆ; ಶ್ರೀಮತಿ ವೂಲ್ಲಿ ಮತ್ತು ಅವರ ಪುತ್ರಿ ಅನಿತಾ ಯಾವಾಗಲೂ ಬಿಸಿಲು ಮತ್ತು ಸಭೆಯಿಂದ ಕೂಡಿರುವ ಪಟ್ಟಣವೊಂದರಲ್ಲಿ ವಾಸಿಸುತ್ತಿದ್ದಾರೆ. ಬೆಚ್ಚಗಿನ ಉಣ್ಣೆಯ ಸೈಟರ್‌ಗಳನ್ನು ಹಣೆದು ಅವುಗಳನ್ನು ಮಾರಾಟ ಮಾಡುತ್ತಾ ಶ್ರೀಮತಿ ವೂಲ್ಲಿ ಅವರು ಹಣವನ್ನು ಗಳಿಸುತ್ತಿದ್ದರು. ಅವರು ಮಾಡಿರುವ ಸೈಟರ್‌ಗಳು ತುಂಬಾ ಸುಂದರವಾಗಿದ್ದವು, ಆದರೆ, ಅವರು ವಾಸಿಸುತ್ತಿರುವ ಪಟ್ಟಣದಲ್ಲಿ ಯಾರೂ ಕೂಡಾ ಸೈಟರ್‌ಗಳನ್ನು ಧರಿಸುತ್ತಿಲ್ಲವಾದ ಕಾರಣ ಶ್ರೀಮತಿ ವೂಲ್ಲಿ ಅವರಿಗೆ ಅಧಿಕ ಹಣ ಗಳಿಸಲು ಸಾಧ್ಯವಾಗುತ್ತಿರಲಿಲ್ಲ.
©2024 Book Brahma Private Limited.