ಸಾಹಿತ್ಯ ಕ್ಷೇತ್ರದಲ್ಲಿ 2021ರ ನೋಬೆಲ್ ಪ್ರಶಸ್ತಿ ಪುರಸ್ಕೃತ ಅಬ್ದುಲ್ ರಜಾಕ್ ಗುರ್ನಾ ಅವರ 'ಗ್ರಾವೆಲ್ ಹಾರ್ಟ್ʼ ಪುಸ್ತಕದ ಕನ್ನಡ ಅನುವಾದ ʼನಡು ಮಧ್ಯಾಹ್ನದ ಚಂದ್ರ ಮತ್ತು ಇತರ ಕಥೆಗಳುʼ. ಪುಸ್ತಕವನ್ನು ಲೇಖಕ ಜೆ. ಬಾಲಕೃಷ್ಣ ಅವರು ಅನುವಾದ ಮಾಡಿದ್ಧಾರೆ. ಪುಸ್ತಕದ ಬೆನ್ನುಡಿಯಲ್ಲಿ, “ಗುರ್ನಾರವರ ಎಲ್ಲ ಕತೆ-ಕಾದಂಬರಿಗಳ ವಸ್ತುಗಳೂ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗಿರುವ, ಅಪರಿಚಿತ ನಾಡಲ್ಲಿ ಸ್ವಂತ ಚಹರೆಗಳ ಆನ್ವೇಷಣೆಯಾಗಿದೆ. ನಾನು ನನ್ನದೇ ಸ್ವಂತ ಅನುಭವಗಳನ್ನು ಮಾತ್ರ ದಾಖಲಿಸುತ್ತಿಲ್ಲ, ಬದಲಿಗೆ ಅದು ಈಗಿನ ಸಮಯದ ನಮ್ಮೆಲ್ಲರ ಕತೆಗಳೂ ಆಗಿದೆ. ಸ್ವಂತ ನೆಲೆಯಿಂದ ದೂರ ಪ್ರಯಾಣಿಸುವುದು ಒಂದು ರೀತಿಯ ಅಂತರ ಮತ್ತು ಹೊಸ ದೃಷ್ಟಿಕೋನವನ್ನು ನೀಡುತ್ತದೆ, ಹಾಗೂ ಒಂದು ರೀತಿಯ ವಿಸ್ತಾರದ ಮತ್ತು ಹರವಿನ ನೋಟವನ್ನು ಹಾಗೂ ಸ್ವಾತಂತ್ರ್ಯವನ್ನೂ ಸಹ ನೀಡುತ್ತದೆ. ಅದು ಸ್ಮರಣ ಶಕ್ತಿಯನ್ನು ಹಾಗೂ ಮೆಲುಕು ಹಾಕುವ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಅದೇ ಲೇಖಕನೊಬ್ಬನ ಫಲವತ್ತಾದ ಭೂಮಿ. ಆ ಕ್ಷಣದ ವಿಚಿತ್ರ ಭಾವನೆ ನಾನು ಯಾವುದೇ ಮುಂದಾಲೋಚನೆ ಬಿಟ್ಟು ಬಂದ ಬದುಕಿನ, ಜನರ, ಸ್ಥಳದ ಹಾಗೂ ಅಸ್ಥಿತ್ವದ ನೆನಪು ಮತ್ತು ಅವುಗಳನ್ನು ನಾನು ಶಾಶ್ವತವಾಗಿ ಕಳೆದುಕೊಂಡ ಭಾವನೆಗಳನ್ನು ಗಾಢವಾಗಿ ತೀವ್ರಗೊಳಿಸಿ ಘಾಸಿಗೊಳಿಸಿದವು. ಅದೇ ಭಾವನೆ ಅವರ ಕಾದಂಬರಿಗಳಲ್ಲಿನ ಪಾತ್ರಗಳು ಸಹ ವ್ಯಕ್ತಪಡಿಸುತ್ತವೆ. ತಮ್ಮ ಗತದ ಕಹಿ ಬದುಕನ್ನು ಹಾಗೂ ನಾಡನ್ನು, ಬಂಧು ಬಾಂಧವರನ್ನು ಬಿಟ್ಟುಬಂದಿರುವ ಪಾಪಪ್ರಜ್ಞೆ ಅವುಗಳಲ್ಲಿ ಕಂಡುಬರುತ್ತವೆ. ಎಷ್ಟೋ ಸಾರಿ, ಆ ರೀತಿ ವಲಸೆ ಬಂದ ಆ ಪಾತ್ರಗಳು ತಮ್ಮ ಗತದ ಕುಟುಂಬಗಳ ನೆನಪುಗಳನ್ನೇ ಅಳಿಸಿಹಾಕುತ್ತವೆ. ಜನಾಂಗೀಯ, ಧಾರ್ಮಿಕ, ನೈತಿಕ ಅಥವಾ ಸಾಮಾಜಿಕ ವಿಭಿನ್ನತೆಯ ಹಿನ್ನೆಲೆಗಳಿಂದ ಹೊರಗಿನವಾಗಿರುವ ಅವಸ್ಥೆ ಅಬ್ದುಲ್ ರಜಾಕ್ ಗುರ್ನಾರವರ ಕಾದಂಬರಿ ಹಾಗೂ ಕತೆಗಳಲ್ಲಿ ಅತ್ಯಂತ ಪ್ರಬಲ ಕೇಂದ್ರ ವಸ್ತುವಾಗಿದೆ” ಎಂದು ಹೇಳಲಾಗಿದೆ.
ಬೆಂಗಳೂರಿನ ಕೃಷಿವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿರುವ ಡಾ.ಜೆ.ಬಾಲಕೃಷ್ಣ ಅವರು ಕೃಷಿ ಸೂಕ್ಷ್ಮಜೀವಿ ಶಾಸ್ತ್ರದಲ್ಲಿ ಸ್ನಾತಕೊತ್ತರ ಹಾಗೂ ಕನ್ನಡ ಕೃಷಿ ವಿಜ್ಞಾನ ಸಾಹಿತ್ಯದ ಅಧ್ಯಾಯನಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ.ಕಾರ್‍ಟೋನಿಸ್ಟ್ ಆಗಿಯು ಗುರುತಿಸಿಕೊಂಡಿರುವ ಬಾಲಕೃಷ್ಣರವರ ಆಸಕ್ತಿಯ ಕ್ಷೇತ್ರಗಳು ಜೀವವೈವಿಧ್ಯದಷ್ಟೇ ವಿಸ್ತಾರವಾದವು. ವಿಜ್ಞಾನದಿಂದ ಮೊದಲ್ಗೊಂಡು ಸಾಹಿತ್ಯ,ಸೂಫಿ,ಝೆನ್,ತತ್ವದರ್ಶನದ ವರೆಗೂ ಅವರ ಜ್ಞಾನ ಹರಡಿಕೊಂಡಿದೆ. ...
READ MORE