ಸರ್ ಆರ್ಥರ್ ಕಾನನ್ ಡೊಯಲ್ ಅವರು ಬರೆದ ಕೃತಿಯನ್ನು ವಾಸನ್ ಪಬ್ಲಿಕೇಷನ್ಸ್ ದವರು ವಿವಿಧ ಅನುವಾದಕರ ನೆರವಿನಿಂದ ಕನ್ನಡಕ್ಕೆ ಅನುವಾದಿತ ಕೃತಿ ಇದು-ಮಕ್ಕಳಿಗಾಗಿ ಷರ್ಲಾಕ್ ಹೋಮ್ಸ್ ಕಥೆಗಳು. ಷರ್ಲಾಕ್ ಹೋಮ್ಸ್ ಕಥೆಗಳು ಎಂದರೆ ಪತ್ತೇದಾರಿ ಸಾಹಿತ್ಯಕ್ಕೆ ಉತ್ತಮ ಸಾಮಗ್ರಿ. ಪತ್ತೇದಾರಿ ಸಾಹಿತ್ಯದಲ್ಲಿ ಕಾಲ್ಪನಿಕತೆ ಹೆಚ್ಚಿರುತ್ತದೆ. ಆದರೆ, ಅವು ವಾಸ್ತವ ಎನ್ನುವ ರೀತಿಯಲ್ಲಿ ಪ್ರತಿಪಾದನೆ ಇರುತ್ತದೆ. ಒಂದು ಕಗ್ಗಂಟಾದ ಸಮಸ್ಯೆಯನ್ನು ಭೇದಿಸಲು ಯಾವ ಯಾವ ರೀತಿಯ ಯೋಜನೆ-ಯೋಚನೆ-ತಂತ್ರಗಳು ಫಲಿತವಾಗುತ್ತವೆ ಎಂಬುದು ಇಲ್ಲಿಯ ಪ್ರಮುಖ ವಸ್ತು ಹಾಗೂ ಆರ್ಕಣೆ. ಅವು ಮಕ್ಕಳ ಮನೋವಿಕಾಸಕ್ಕೆ ಹಾಗೂ ತಾರ್ಕಿಕ ಸಾಮರ್ಥ್ಯ ಹೆಚ್ಚಳಕ್ಕೆ ಷೆರ್ಲಾಕ್ ಹೋಮ್ಸ್ ನಂತಹ ಕಥೆಗಳು ಪೂರಕವಾಗಿರುತ್ತವೆ.