‘ಮಂಡೂಕ ಮಹಾರಾಜ’ ನೆರೆಹೊರೆಯ ದೇಶಗಳ ಮಕ್ಕಳ ಕತೆಗಳು ರೋಹಿತ್ ಚಕ್ರತೀರ್ಥ ಅವರ ಕೃತಿ. ಇಲ್ಲಿರುವ ಕತೆಗಳೆಲ್ಲವೂ ಭಾರತದ ನೆರೆಹೊರೆಯ ದೇಶಗಳವು. ಚೀನಾ, ಜಪಾನ್, ಕೊರಿಯಾ, ಟಿಬೆಟ್, ಫಿಲಿಪ್ಪೈನ್ಸ್ ಮತ್ತು ರಷ್ಯಾ ದೇಶದ ಕತೆಗಳನ್ನು ಇಲ್ಲಿ ಕನ್ನಡಕ್ಕೆ ತರಲಾಗಿದೆ. ಭಾಷೆ ಯಾವುದಾದರೇನಂತೆ, ಈ ಕತೆಗಳಲ್ಲಿರುವ ಮನುಷ್ಯರೆಲ್ಲ ನಮ್ಮ ಸುತ್ತಮುತ್ತ ಕಾಣಸಿಗುವವರೆ, ಇಲ್ಲಿ ಮೋಸಗಾರರಿದ್ದಾರೆ, ಕಳ್ಳರು- ಸುಳ್ಳರು, ದಗಲಬಾಜಿಗಳು ಇದ್ದಾರೆ. ಕೇವಲ ಕೆಟ್ಟವರು ಮಾತ್ರವೋ ಹಾಗೇನಿಲ್ಲ, ಸತ್ಯಸಂಧರು, ಪ್ರಾಮಾಣಿಕರು, ಕಷ್ಟಸಹಿಷ್ಣುಗಳು, ವಿಧೇಯರು ಕೂಡ ಇದ್ದಾರೆ. ಮನುಷ್ಯರಂತೆಯೇ ಪ್ರಾಣಿಪಕ್ಷಿಗಳಿವೆ. ಅವು ಮಾತಾಡುತ್ತವೆ, ಯೋಚಿಸುತ್ತವೆ, ಎದುರಾಗಲಿರುವ ಅಪಾಯಗಳನ್ನು ಉಪಾಯದಿಂದ ತಪ್ಪಿಸಿಕೊಳ್ಳುತ್ತವೆ, ಕೆಲವೊಮ್ಮೆ ಮನುಷ್ಯರು ಮತ್ತು ಪಶುಪಕ್ಷಿಗಳು ವಿನಾಕಾರಣ ಸಮಸ್ಯೆಗಳಲ್ಲಿ ಸಿಕ್ಕಿ ತೊಳಲಾಡುವುದೂ ಉಂಟು. ಪ್ರತಿ ಕಥೆಯೊಳಗೊಂದು ನೀತಿ ಇದೆ. ಬದುಕುವ ರೀತಿ ಇದೆ, ಪಾಠವಿದೆ, ತತ್ವಜ್ಞಾನವಿದೆ.
©2024 Book Brahma Private Limited.