ಅನುವಾದಕ ಸೊಂದಲಗೆರೆ ಲಕ್ಷ್ಮಿಪತಿ ಅವರು ಭಾರತೀಯ ವಿವಿಧ ಭಾಷೆಯ ಲೇಖಕರ ಕಥೆಗಳನ್ನು ಕನ್ನಡಕ್ಕೆ ಅನುವಾದಿಸಿದ ಕೃತಿ-ಭಾರತೀಯ ಪ್ರಾತಿನಿಧಿಕ ಕತೆಗಳು. ಮಸೀದಿ ಮಂದಿರ (ಪ್ರೇಮಚಂದ್), ಬರ (ಶರತ್ ಚಂದ್ರ ಚಟರ್ಜಿ), ಮರಳಿ ಗೂಡಿಗೆ (ನಂದಿನಿ ಸತ್ಪತಿ), ಗೆಳೆಯ ನಾ ಕೊಟ್ಟ ಮಾತು ಉಳಿಸಿಕೊಂಡೆ (ದಿನೇಶ್ ಗೋಸ್ವಾಮಿ), ಈ ಹೃದಯ ಕರಗುವುದೆ? (ಮುಂಗಾರು ಶಂಕರರಾಜು), ಖುದಾರಾಮ್ (ಪಾಂಡೇಯ ಬೇಚಾನ್ ಶರ್ಮ), ಸುರಂಗದೊಳಗಿನ ಹುಲಿ (ರಸ್ಕಿನ್ ಬಾಂಡ್), ಕಪ್ಪು ಸಲ್ವಾರ್ (ಸಾಧತ್ ಹುಸೇನ್ ಮಾಂಟೊ), ಓ ನಲ್ಲನೇ, ಯಾರೊಂದಿಗೆ ತೋಡಿಕೊಳ್ಳಲಿ ನನ್ನ ದುಃಖವನ್ನು? (ಚತುರ ಸೇನ್ ಶಾಸ್ತ್ರಿ), ರಜಪುತಾನಿ (ಲಕ್ಷ್ಮಿಕುಮಾರ ಚಂದಾವತ್, ಸೂಲಗಿತ್ತಿ (ಹರೀಶ್ ಮಂಗಳಂ), ಬೆಳಕು (ಚಕ್ರಾದರ ಠಾಕೂರು ಹೀಗೆ ವಿವಿಧ ಭಾಷೆಯ ಲೇಖಕರ ಕಥೆಗಳು ಅನುವಾದಗೊಂಡಿದ್ದನ್ನು ಸಂಕಲಿಸಿ ಪ್ರ ಕಟಿಸಿದೆ.
ಸೊಂದಲಗೆರೆ ಲಕ್ಷ್ಮಿಪತಿ ಅವರು ಉತ್ತಮ ಅನುವಾದಕರು. ಸ್ವತಃ ಲೇಖಕರು, ಕಥೆಗಾರರು ಆಗಿ ಉತ್ತಮ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ ಕೀರ್ತಿ ಇವರಿಗಿದೆ. ಭಾರತೀಯ ಪ್ರಾತಿನಿಧಿಕ ಕತೆಗಳು, ಬೌದ್ಧ ಧರ್ಮದ ಅನನ್ಯತೆ, ಸಾಮ್ರಾಟ ಅಶೋಕ, ಜಗತ್ತಿನ ಉದಾತ್ತ ಚಿಂತಕರು, ಅನ್ಯ ಲೋಕದಲ್ಲಿ ಜೀವಿಗಳಿದ್ದಾರೆಯೇ? ಶ್ರೇಷ್ಠ ಅನುವಾದಿತ ಕಥೆಗಳು ಹೀಗೆ ಅನುವಾದಗಳ ಮೂಲಕ ಕನ್ನಡ ಸಾಹಿತ್ಯಕ್ಕೆ ಕೊಡುಗೆ ನೀಡಿದ್ದಾರೆ. ...
READ MORE